ಲಿಕ್ವಿಡ್ ಫಂಡ್‌ಗಳಿಗಿಂತ ಓವರ್‌ನೈಟ್‌ ಫಂಡ್‌ಗಳು ಹೇಗೆ ವಿಭಿನ್ನ?

ಲಿಕ್ವಿಡ್ ಫಂಡ್‌ಗಳಿಗಿಂತ ಓವರ್‌ನೈಟ್‌ ಫಂಡ್‌ಗಳು ಹೇಗೆ ವಿಭಿನ್ನ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೊರೈಝನ್‌ ಮತ್ತು ರಿಸ್ಕ್ ಸಾಮರ್ಥ್ಯದ ವಿಚಾರದಲ್ಲಿ ಡೆಟ್ ಫಂಡ್‌ಗಳಲ್ಲಿ ಲಿಕ್ವಿಡ್‌ ಫಂಡ್‌ಗಳಿಗಿಂತ ಸ್ವಲ್ಪ ಕಡಿಮೆ ಶ್ರೇಣಿಯನ್ನು ಓವರ್‌ನೈಟ್‌ ಫಂಡ್‌ಗಳು ಹೊಂದಿರುತ್ತವೆ. ಓವರ್‌ನೈಟ್‌ ಫಂಡ್‌ಗಳು ಮರುದಿನ ಪಕ್ವವಾಗುವ ಡೆಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ. 91 ದಿನಗಳೊಳಗೆ ಪಕ್ವವಾಗುವ ಸೆಕ್ಯುರಿಟಿಗಳಲ್ಲಿ ಲಿಕ್ವಿಡ್ ಫಂಡ್‌ಗಳು ಹೂಡಿಕೆ ಮಾಡುತ್ತವೆ. ಹೀಗಾಗಿ, ಓವರ್‌ನೈಟ್‌ ಫಂಡ್‌ಗಳಿಗಿಂತ ಲಿಕ್ವಿಡ್ ಫಂಡ್‌ಗಳು ಹೆಚ್ಚು ಬಡ್ಡಿ ದರ, ಕ್ರೆಡಿಟ್‌ ಮತ್ತು ಡೀಫಾಲ್ಟ್ ರಿಸ್ಕ್‌ ಅನ್ನು ಒದಗಿಸುತ್ತವೆ. ಯಾಕೆಂದರೆ ಫಂಡ್‌ ಮ್ಯಾನೇಜರ್ ಪಕ್ವವಾಗುವ ಸೆಕ್ಯುರಿಟಿಗಳನ್ನು ಮರುದಿನವೇ ಓವರ್‌ನೈಟ್‌ ಫಂಡ್‌ಗಳಲ್ಲಿ ಮಾರಾಟ ಮಾಡುವುದರಿಂದ ಹಣ ಬರುತ್ತದೆ.

ಒಂದು ವಾರಕ್ಕಿಂತ ಕಡಿಮೆ ಸಮಯಕ್ಕೆ ಹೆಚ್ಚುವರಿ ನಗದನ್ನು ಹೂಡಿಕೆ ಮಾಡಲು ಓವರ್‌ನೈಟ್‌ ಫಂಡ್‌ಗಳು ಸೂಕ್ತವಾಗಿದ್ದು, ಇವು ಎಕ್ಸಿಟ್ ಲೋಡ್ ಹೊಂದಿರುವುದಿಲ್ಲ. ಲಿಕ್ವಿಡ್‌ ಫಂಡ್‌ಗಳಲ್ಲಿ ಆರು ದಿನಗಳವರೆಗೆ ಎಕ್ಸಿಟ್ ಲೋಡ್‌ ಹೊಂದಿದ್ದು, 7ನೇ ದಿನದಿಂದ ಎಕ್ಸಿಟ್ ಲೋಡ್‌ ಹೊಂದಿರುವುದಿಲ್ಲ. ಮನಿ ಮಾರ್ಕೆಟ್‌ ಫಂಡ್‌ಗಳಾದ ಸಿಡಿಗಳು ಮತ್ತು ಸಿಪಿಗಳಲ್ಲಿ ಮುಕ್ತವಾಗಿ ಲಿಕ್ವಿಡ್‌ ಫಂಡ್‌ಗಳನ್ನು ಹೂಡಿಕೆ ಮಾಡಬಹುದಾಗಿದ್ದು, ಕ್ರೆಡಿಟ್ ಗುಣಮಟ್ಟ ಯಾವುದೇ ಆದರೂ 91 ದಿನಗಳೊಳಗೆ ಪಕ್ವವಾಗುತ್ತವೆ. ಹೀಗಾಗಿ, ಓವರ್‌ನೈಟ್‌ ಫಂಡ್‌ಗಳಿಗಿಂತ ಇವು ಹೆಚ್ಚು ಕ್ರೆಡಿಟ್ ರಿಸ್ಕ್ ಅನ್ನು ಹೊಂದಿರುತ್ತವೆ.

ಓವರ್‌ನೈಟ್‌ ಫಂಡ್‌ಗಳಿಗೆ ಹೋಲಿಸಿದರೆ ಲಿಕ್ವಿಡ್‌ ಫಂಡ್‌ಗಳು ಪೋರ್ಟ್‌ಫೋಲಿಯೋ ಪಕ್ವತೆ ಅವಧಿಯನ್ನು ಹೆಚ್ಚು ಹೊಂದಿದ್ದು, ಕ್ರೆಡಿಟ್ ರಿಸ್ಕ್‌ ನಿರ್ವಹಣೆ ಮಾಡುವಲ್ಲಿ ಹೆಚ್ಚು ಅನುಕೂಲವನ್ನು ಹೊಂದಿರುತ್ತವೆ. ಇವು ಓವರ್‌ನೈಟ್ ಫಂಡ್‌ಗಳಿಗಿಂತ ಹೆಚ್ಚು ರಿಟರ್ನ್‌ ಅನ್ನು ನೀಡಬೇಕು. ಯಾವುದೇ ಕ್ಷಣದಲ್ಲಿ ಎದುರಾಗಬಹುದಾದ ಸನ್ನಿವೇಶಗಳಿಗೆ ವಿತ್‌ಡ್ರಾವಲ್‌ ಮಾಡುವುದು ನಿಮ್ಮ ಆದ್ಯತೆಯಾದರೆ, ಓವರ್‌ನೈಟ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೆಚ್ಚುವರಿ ಹಣವನ್ನು ಒಂದು ವಾರದವರೆಗೆ ಇಡಲು ನೀವು ಬಯಸುತ್ತಿದ್ದರೆ, ಲಿಕ್ವಿಡ್‌ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

436
ನಾನು ಹೂಡಿಕೆ ಮಾಡಲು ಸಿದ್ಧ