ಮ್ಯೂಚುವಲ್‌ ಫಂಡ್‌ನ ಟ್ರ್ಯಾಕ್‌ ರೆಕಾರ್ಡ್ ಕಂಡುಕೊಳ್ಳುವುದು ಹೇಗೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕಾರು ಖರೀದಿಯೇ ಆಗಲಿ ಅಥವಾ ವಿವಾಹವಾಗುವುದೇ ಆಗಿರಲಿ, ಮೊದಲೇ ಮಾಹಿತಿ ಇಲ್ಲದೇ ತಮ್ಮ ಜೀವನದಲ್ಲಿ ಪ್ರಮುಖ ಹೆಜ್ಜೆಗಳನ್ನು ಹಿಂದಿನ ಕಾಲದಲ್ಲಿ ಜನರು ತೆಗೆದುಕೊಳ್ಳುತ್ತಿದ್ದರು. ಆದರೆ ಇಂದು, ಮಾಹಿತಿಯು ನಿಮ್ಮ ಬೆರಳ ತುದಿಯಲ್ಲಿ ಲಭ್ಯವಿದೆ. ಊಟಕ್ಕೆ ಏನನ್ನು ಆರ್ಡರ್ ಮಾಡಬೇಕು ಎಂಬಂಥ ಸಣ್ಣ ಸಂಗತಿಗಳನ್ನೂ ಕೂಡ, ಒಂದಷ್ಟು ಸಂಶೋಧನೆ ಅಥವಾ ಹೋಲಿಕೆಯ ನಂತರವೇ ನಿರ್ಧರಿಸಲಾಗುತ್ತದೆ. ಇದಕ್ಕೆ ಮ್ಯೂಚುವಲ್‌ ಫಂಡ್‌ಗಳೂ ಕೂಡ ಹೊರತಲ್ಲ.

ಫಂಡ್‌ಗಳ ವಿವಿಧ ವಿಭಾಗಗಳ ಮೂಲಕ ನ್ಯಾವಿಗೇಟ್ ಮಾಡುವುದು ನಿಮಗೆ ಕಷ್ಟಕರವಾಗಿದ್ದರೆ ಮತ್ತು ಇದರ ಅಡಿಯಲ್ಲಿ ಎಲ್ಲ ಸ್ಕೀಮ್‌ಗಳನ್ನು ಪಟ್ಟಿ ಮಾಡಿದ್ದರೆ, ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಪ್ರತಿ ವಿಭಾಗದಲ್ಲೂ ಸ್ಕೀಮ್‌ಗಳ ಹೋಲಿಕೆಯನ್ನು ಪ್ರಸ್ತುತಪಡಿಸುವ ನಂಬಲರ್ಹವಾದ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಸವಾಲನ್ನು ನಾವು ಸುಲಭವಾಗಿ ಎದುರಿಸಬಹುದಾಗಿದೆ. ಹಿಂದಿನ ಕಾರ್ಯಕ್ಷಮತೆಗಳು, ಫಂಡ್‌ನ ರಿಸ್ಕ್ ಪ್ರೊಫೈಲ್‌, ಎಷ್ಟು ಕಾಲದಿಂದ ಫಂಡ್ ಅಸ್ತಿತ್ವದಲ್ಲಿದೆ ಮತ್ತು ಫಂಡ್‌ ಗಾತ್ರ ಎಷ್ಟು ಎಂಬ ಎಲ್ಲ ಅಂಶಗಳನ್ನು ನೀವು ವೀಕ್ಷಿಸಬಹುದು. 

ಎಲ್ಲ ಸ್ಕೀಮ್‌ಗಳ ಕಾರ್ಯಕ್ಷಮತೆಯನ್ನು ಒಂದೇ ಸೂರಿನಡಿ ಆಕ್ಸೆಸ್ ಮಾಡಲು ನೀವು www.mutualfundssahihai.com/schemeperformance ಗೆ ಭೇಟಿ ನೀಡಬಹುದು. ನೀವು ಯಾವುದೇ ವಿಭಾಗದಲ್ಲಿನ ಎಲ್ಲ ಸ್ಕೀಮ್‌ಗಳನ್ನು ನೋಡಬಹುದು ಮತ್ತು ಬೆಂಚ್‌ಮಾರ್ಕ್ ರಿಟರ್ನ್‌ನೊಂದಿಗೆ ಸ್ಕೀಮ್‌ನ ಕಾರ್ಯಕ್ಷಮತೆಯನ್ನು ಹೋಲಿಕೆ ಮಾಡಬಹುದು. ಇದೇ ವೇಳೆ, ಈ ವಿಭಾಗದಲ್ಲಿ ಉಳಿದವುಗಳೊಂದಿಗೆ ಇದು ಯಾವ ಸ್ಥಾನದಲ್ಲಿದೆ ಎಂದು ತಿಳಿಯಬಹುದು. ಉತ್ತಮ ಸಂಗತಿಯೆಂದರೆ, ರೆಗ್ಯುಲರ್ ಮತ್ತು ಡೈರೆಕ್ಟ್ ಪ್ಲಾನ್‌ಗಳೆರಡರಲ್ಲೂ ವಿವಿಧ ಕಾಲಾವಧಿಯಲ್ಲಿ ಅದರ ಟ್ರ್ಯಾಕ್‌ ರೆಕಾರ್ಡ್‌ ಅನ್ನು ಅರ್ಥ ಮಾಡಿಕೊಳ್ಳಲು ಗ್ರಾಫಿಕಲ್ ಫಾರ್ಮ್ಯಾಟ್‌ನಲ್ಲಿ ಬೆಂಚ್‌ಮಾರ್ಕ್ ವಿರುದ್ಧ ಫಂಡ್‌ನ ಹಿಂದಿನ ಕಾರ್ಯಕ್ಷಮತೆಯನ್ನು ನೀವು ಕಂಡುಕೊಳ್ಳಬಹುದು.

 

 

436
ನಾನು ಹೂಡಿಕೆ ಮಾಡಲು ಸಿದ್ಧ