ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ. ಇನ್‌ಸ್ಟ್ರುಮೆಂಟ್‌ಗಳಲ್ಲಿ ಹೂಡಿಕೆ ಮಾಡುವುದು ತುಂಬಾ ಸುಲಭ, ಅವು ಫ್ಲೆಕ್ಸಿಬಲ್ ಕೂಡಾ ಆಗಿವೆ. ಅಷ್ಟೇ ಅಲ್ಲ, ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ ವಿಧಾನವನ್ನು ಬಳಸಿಕೊಂಡು ಹೂಡಿಕೆದಾರರು ರೂ. 500 ರಷ್ಟು ಕಡಿಮೆ ಮೊತ್ತದಿಂದಲೂ ಹೂಡಿಕೆ ಶುರು ಮಾಡಬಹುದು. ಕೆಲವು ಇತರ ವಿಧಾನಗಳನ್ನು ಬಳಸಿಕೊಂಡು ಕೂಡಾ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆಯನ್ನು ಆರಂಭ ಮಾಡಬಹುದು. 

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ವಿವಿಧ ವಿಧಾನಗಳು:

  • ಮ್ಯೂಚುವಲ್ ಫಂಡ್‌ನ ಸಮೀಪದ ಶಾಖೆ ಕಚೇರಿ, ಐಎಸ್‌ಸಿಗಳು (ಇನ್ವೆಸ್ಟರ್ ಸರ್ವೀಸ್ ಸೆಂಟರ್‌ಗಳು { ಹೂಡಿಕೆದಾರರ ಸೇವಾ ಕೇಂದ್ರಗಳು}) ಅಥವಾ ಆರ್‌ಟಿಎಗೆ (ರಿಜಿಸ್ಟ್ರಾರ್ ಮತ್ತು ಟ್ರಾನ್ಸ್‌ಫರ್ ಏಜೆಂಟ್‌ಗಳು) ಭೇಟಿ ನೀಡುವ ಮೂಲಕವೂ ಹೂಡಿಕೆ ಮಾಡಬಹುದು. 
  • ಎಎಂಎಫ್‌ಐ ನಲ್ಲಿ ನೋಂದಣಿ ಮಾಡಿಕೊಂಡಿರುವ ಫಂಡ್ ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿಕೆ ಮಾಡಬಹುದಾಗಿದೆ. ಈ ಡಿಸ್ಟ್ರಿಬ್ಯೂಟರ್ ವ್ಯಕ್ತಿ, ಬ್ಯಾಂಕ್‌, ಬ್ರೋಕರ್ ಅಥವಾ ಇತರೆ ವಿಧಾನದಲ್ಲಾದರೂ ಇರಬಹುದು. 
  • ಫಂಡ್ ಹೌಸ್‌ಗಳ ಆನ್‌ಲೈನ್ ಪ್ಲಾಟ್‌ಫಾರಂಗಳು ಅಥವಾ ಪೋರ್ಟಲ್‌ಗಳ ಮೂಲಕವೂ ಹೂಡಿಕೆ ಮಾಡಬಹುದು 

ಪ್ರತಿ ಹೂಡಿಕೆದಾರರ ಆದ್ಯತೆ ಮತ್ತು ಕೌಶಲ ವಿಭಿನ್ನವಾಗಿರುವುದರಿಂದ, ಒಂದೇ ವಿಧಾನ ಎಲ್ಲರಿಗೂ ಹೊಂದಿಕೆಯಾಗುವುದಿಲ್ಲ. ಆದರೆ, ಈ ವಿಧಾನಗಳನ್ನು ವಿಶಾಲವಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ ಎಂದು ವರ್ಗೀಕರಿಸಲಾಗಿದೆ.  

a) ಆನ್‌ಲೈನ್‌: ಫಂಡ್‌ ಹೌಸ್‌ಗಳ ಪೋರ್ಟಲ್‌ ಮತ್ತು ಆನ್‌ಲೈನ್ ಪ್ಲಾಟ್‌ಫಾರಂಗಳ ಮೂಲಕ ಆನ್‌ಲೈನ್‌ನಲ್ಲಿ ಮ್ಯೂಚುವಲ್ ಫಂಡ್ ಅಕೌಂಟ್‌ಗಳನ್ನು ಹೂಡಿಕೆದಾರರು ತೆರೆಯಬಹುದು. 

b) ಆಫ್‌ಲೈನ್: ಮ್ಯೂಚುವಲ್ ಫಂಡ್ ವಿತರಕರನ್ನೂ ಹೂಡಿಕೆದಾರರು ಸಂಪರ್ಕಿಸಬಹುದು ಅಥವಾ ಒಂದು ಆಫ್‌ಲೈನ್ ಖಾತೆಯನ್ನು ತೆರೆಯಲು ಸಮೀಪದ ಮ್ಯೂಚುವಲ್ ಫಂಡ್ ಶಾಖೆ ಕಚೇರಿಯನ್ನೂ ಹೂಡಿಕೆದಾರರು ಸಂಪರ್ಕಿಸಬಹುದು. 

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ನಾವು ಸರಳವಾಗಿ ವಿವರಿಸಬಹುದು:

  • ಒಂದು ಪ್ಲಾಟ್‌ಫಾರಂ ಅಥವಾ ಫಂಡ್ ಹೌಸ್ ಆಯ್ಕೆ ಮಾಡಿ. 
  • ನಿಮ್ಮ ವಿವರಗಳನ್ನು ಬಳಸಿ ಆ ಪ್ಲಾಟ್‌ಫಾರಂನಲ್ಲಿ ನೋಂದಣಿ ಮಾಡಿಕೊಳ್ಳಿ. 
  • ಕೆವೈಸಿ ಪೂರ್ತಿಗೊಳಿಸಿ. 
  • ನಿಮ್ಮ ಗುರಿಗಳಿಗೆ ಹೊಂದುವ ಫಂಡ್ ಆಯ್ಕೆ ಮಾಡಿ ಮತ್ತು ಅದಕ್ಕೆ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಮಾಡಿ. 
  • ಮೊತ್ತವನ್ನು ನಿರ್ದಿಷ್ಟಪಡಿಸುವುದು ಮತ್ತು ಹೂಡಿಕೆ ವಿಧಾನವನ್ನು ಆಯ್ಕೆ ಮಾಡುವ ಮೂಲಕ ಹೂಡಿಕೆಯನ್ನು ಆರಂಭಿಸಿ. 
  • ಫಂಡ್‌ಗಳನ್ನು ವರ್ಗಾವಣೆ ಮಾಡಿ ಮತ್ತು ನಿಮ್ಮ ಫಂಡ್‌ನ ಪರ್ಫಾರ್ಮೆನ್ಸ್ ಅನ್ನು ಟ್ರಾಕ್ ಮಾಡಲು ಆರಂಭಿಸಿ. 

ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಉತ್ತಮ ವಿಧಾನವು ಹೂಡಿಕೆದಾರರ ಆಯ್ಕೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ತಂತ್ರಜ್ಞಾನ ಪರಿಣಿತ ಹೂಡಿಕೆದಾರರು ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. 

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

287
ನಾನು ಹೂಡಿಕೆ ಮಾಡಲು ಸಿದ್ಧ