ನಾನು ನನ್ನ ಹಣವನ್ನು ಎಷ್ಟು ಬಾರಿ ತೆಗೆಯಬಹುದು?

ನಾನು ನನ್ನ ಹಣವನ್ನು  ಎಷ್ಟು ಬಾರಿ ತೆಗೆಯಬಹುದು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಓಪನ್ ಎಂಡೆಡ್‌ ಸ್ಕೀಮ್‌ನಿಂದ ಹಣವನ್ನು ರಿಡೀಮ್ ಮಾಡಿಕೊಳ್ಳಲು ಹೂಡಿಕೆದಾರರಿಗೆ ಯಾವುದೇ ನಿರ್ಬಂಧ ಇಲ್ಲ. ಕೆಲವು ಸಂದರ್ಭಗಳಲ್ಲಿ ಎಕ್ಸಿಟ್ ಲೋಡ್‌ ಇರುತ್ತದೆ.  ಇದು ರಿಯಲೈಸ್ ಆಗುವ ಅಂತಿಮ ಮೊತ್ತದ ಮೇಲೆ ಪರಿಣಾಮ ಬೀರಬಹುದು. ಎಲ್ಲ ಓಪನ್ ಎಂಡ್ ಸ್ಕೀಮ್‌ಗಳು ಲಿಕ್ವಿಡಿಟಿಯನ್ನು ಒದಗಿಸುತ್ತಿದ್ದು, ಅತ್ಯಂತ ಲಾಭಕರವಾಗಿದೆ.

ರಿಡೀಮ್ ಮಾಡಿಕೊಳ್ಳುವ ನಿರ್ಧಾರವು ಸಂಪೂರ್ಣವಾಗಿ ಹೂಡಿಕೆದಾರರಿಗೆ ಸಂಬಂಧಿಸಿರುತ್ತದೆ. ರಿಡೆಂಪ್ಷನ್‌ಗಳ ಸಂಖ್ಯೆ ಅಥವಾ ರಿಡೀಮ್ ಮಾಡಿಕೊಳ್ಳುವ ಮೊತ್ತದ ಮೇಲೆ ನಿರ್ಬಂಧ ಇರಬಹುದು. ರಿಡೆಂಪ್ಷನ್‌ ಮಾಡಲು ಖಾತೆಯಲ್ಲಿ ಸಾಕಷ್ಟು ಯೂನಿಟ್‌ಗಳು ಇರಬೇಕು. ರಿಡೀಮ್ ಮಾಡಬಹುದಾದ ಕನಿಷ್ಠ ಮೊತ್ತವನ್ನು ಸ್ಕೀಮ್ ದಾಖಲೆಗಳು ಸಾಮಾನ್ಯವಾಗಿ ಸೂಚಿಸುತ್ತವೆ.

ಬ್ಯಾಂಕ್ ಅಥವಾ ಸಂಸ್ಥೆಗೆ ಅಡವಿಟ್ಟ ಯೂನಿಟ್‌ಗಳನ್ನು ರಿಡೀಮ್‌ ಮಾಡಲಾಗದು. ಅಡಮಾನವನ್ನು ತೆಗೆದ ನಂತರ ರಿಡೀಮ್ ಮಾಡಬಹುದು. ಟ್ರಸ್ಟಿಗಳ ಮಂಡಳಿಯು ನಿರ್ಧಾರ ಮಾಡಿದರೆ ವಿಪರೀತ ಸನ್ನಿವೇಶದಲ್ಲಿ ಮಾತ್ರ ರಿಡೆಂಪ್ಷನ್‌ಗಳನ್ನು ನಿರ್ಬಂಧಿಸಬಹುದು.

ಕ್ಲೋಸ್ಡ್ ಎಂಡ್ ಸ್ಕೀಮ್‌ಗಳನ್ನು ಮೆಚ್ಯುರಿಟಿಯ ನಂತರ ಎಎಂಸಿ ಇಂದಲೇ ರಿಡೀಮ್ ಮಾಡಿಕೊಳ್ಳಬಹುದು.  ಆದಾಗ್ಯೂ, ಇವು ಗುರುತಿಸಲ್ಪಟ್ಟ ಎಕ್ಸ್‌ಚೇಂಜ್‌ನಲ್ಲಿ ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೆಚ್ಯುರಿಟಿಗೂ ಮೊದಲೇ ಲಿಕ್ವಿಡಿಟಿ ಕೊಡುತ್ತವೆ.

ರಿಡೆಂಪ್ಷನ್‌ಗಳನ್ನು;

  • ಇನ್ವೆಸ್ಟರ್ ಸರ್ವೀಸ್‌ ಸೆಂಟರ್‌ಗಳು (ಐಎಸ್‌ಸಿಗಳು),
  • ಎಎಂಸಿ ಆಫೀಸ್‌ಗಳು,
  • ವಹಿವಾಟು ಸಮ್ಮತಿಯ ಅಧಿಕೃತ ಪಾಯಿಂಟ್‌ಗಳು (ಒಪಿಎಟಿ)
  • ಅಧಿಕೃತ ಆನ್‌ಲೈನ್ ಪ್ಲಾಟ್‌ಫಾರಂನಲ್ಲಿ ಮಾಡಬಹುದು.
440
ನಾನು ಹೂಡಿಕೆ ಮಾಡಲು ಸಿದ್ಧ