ಹೂಡಿಕೆಗಾಗಿ ಸರಿಯಾದ ರೀತಿಯ ಇಕ್ವಿಟಿ ಫಂಡ್ ಅನ್ನು ಹೇಗೆ ಆಯ್ಕೆ ಮಾಡಬೇಕು?

ಹೂಡಿಕೆಗಾಗಿ ಸರಿಯಾದ ರೀತಿಯ ಇಕ್ವಿಟಿ ಫಂಡ್ ಅನ್ನು ಹೇಗೆ ಆಯ್ಕೆ ಮಾಡಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಿಮ್ಮ ಹೂಡಿಕೆ ಪೋರ್ಟ್ಫೋಲಿಯೋಗೆ ಈಕ್ವಿಟಿ ಫಂಡ್ ಆಯ್ಕೆ ಮಾಡುವುದು ಒಂದು ದಿರಿಸು ಅಯ್ಕೆ ಮಾಡಿದಂತೆ. ಆದರೆ, ಈ ಪ್ರಕರಣದಲ್ಲಿ ನಿರ್ಧಾರ ಮಾಡುವ ಪ್ರಕ್ರಿಯೆ ಇನ್ನೂ ಹೆಚ್ಚು ಸಂಕೀರ್ಣವಾಗಿರುತ್ತದೆ. ಒಂದು ಶರ್ಟ್ ಅಥವಾ ಡ್ರೆಸ್ ಅನ್ನು ನೀವು ವಿವರವಾಗಿ ನೋಡುವಂತೆ, ಇದು ಎಷ್ಟು ಉತ್ತಮವಾಗಿ ನಿಮಗೆ ಹೊಂದುತ್ತದೆ, ಅದರ ಕಂಫರ್ಟ್, ಇದು ನೀವು ಉಡುಪು ಖರೀದಿಸುತ್ತಿರುವ ನಿರ್ದಿಷ್ಟ ಉದ್ದೇಶಕ್ಕೆ ಅಥವಾ ಸನ್ನಿವೇಶಕ್ಕೆ ಹೊಂದುತ್ತದೆಯೇ ಎಂಬುದನ್ನು ನಿರ್ಧರಿಸುವಂತೆ ನಿಮ್ಮ ಪೋರ್ಟ್ಫೋಲಿಯೋಗೆ ಒಂದು ಈಕ್ವಿಟಿ ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದಕ್ಕೂ ಇದೇ ವಿಧಾನ ಅಗತ್ಯವಿರುತ್ತದೆ.

ಈಕ್ವಿಟಿ ಫಂಡ್ ಹೂಡಿಕೆಗೆ ಶಾಪಿಂಗ್ ಮಾಡಲು ಹೋಗುವುದಕ್ಕೂ ಮುನ್ನ, ನಿಮ್ಮ ಪ್ರಸ್ತುತ ಹೂಡಿಕೆ ಪೋರ್ಟ್ಫೋಲಿಯೋವನ್ನು ನೀವು ನೋಡಬೇಕಾಗುತ್ತದೆ. ನಿಮ್ಮ ವಾರ್ಡ್ರೋಬ್ನಲ್ಲಿ ಈಗಾಗಲೇ ಯಾವ ರೀತಿಯ ಉಡುಪನ್ನು ಹೊಂದಿದ್ದೀರಿ ಮತ್ತು ಯಾವುದು ಇಲ್ಲ ಎಂಬುದನ್ನು ನೋಡುವಂತೆಯೇ ಯಾವ ರೀತಿಯ ಹೂಡಿಕೆಯನ್ನು ನೀವು ಹೊಂದಿದ್ದೀರಿ? ನೀವು ಈಗಾಗಲೇ ಕೆಲವು ಈಕ್ವಿಟಿ ಫಂಡ್ ಹೂಡಿಕೆಗಳನ್ನು ಹೊಂದಿರಬಹುದು ಅಥವಾ ಸ್ವತ್ತು ವರ್ಗವಾಗಿ ಈಕ್ವಿಟಿಗೆ ಯಾವುದೇ ತೆರೆದುಕೊಳ್ಳುವಿಕೆ ಹೊಂದಿಲ್ಲದಿರಬಹುದು. ಹೀಗಾಗಿ ನೀವು ಆಯ್ಕೆ ಮಾಡುವ ಈಕ್ವಿಟಿ ಫಂಡ್, ನಿಮ್ಮ ಒಟ್ಟಾರೆ ಹೂಡಿಕೆ ಪೋರ್ಟ್ಫೋಲಿಯೋದಲ್ಲಿ ಪ್ರಸ್ತುತ ಅಂತರವನ್ನು ಭರ್ತಿ ಮಾಡಬೇಕು. ಉದಾಹರಣೆಗೆ, ನೀವು ಈಗಾಗಲೇ ವೈವಿಧ್ಯಮಯ ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡಿದ್ದರೆ, ಮಲ್ಟಿಕ್ಯಾಪ್ ಅಥವಾ ಮಿಡ್ಕ್ಯಾಪ್ ಫಂಡ್ನಂತಹ ನಿಮ್ಮ ರಿಸ್ಕ್ ಆದ್ಯತೆ ಮತ್ತು ಹೂಡಿಕೆ ಗುರಿಗೆ ಹೊಂದುವ ವಿಭಿನ್ನ ವಿಧದ ಈಕ್ವಿಟಿ ಫಂಡ್ ಅನ್ನು ನೀವು ಪರಿಗಣಿಸಬಹುದು. ನಿಮ್ಮ ಗುರಿಯು ತೆರಿಗೆ ಉಳಿಸುವುದಾಗಿದ್ದು, ಅಂತಹ ಫಂಡ್ ನಿಮ್ಮ ಪೋರ್ಟ್ಫೋಲಿಯೋದಲ್ಲಿ ಇಲ್ಲದಿದ್ದರೆ ತೆರಿಗೆ ಉಳಿಸುವ ಫಂಡ್ ಕೂಡ ಆಗಿರಬಹುದು. ವಿಭಿನ್ನ ಫಂಡ್ಗಳ ವಿಧಗಳಾದ್ಯಂತ ವೈವಿಧ್ಯಗೊಳಿಸುವ ಮೂಲಕ ನಿಮ್ಮ ಈಕ್ವಿಟಿ ಸ್ವತ್ತು ವರ್ಗ ರಿಸ್ಕ್ ಅನ್ನು ನೀವು ಹರವಬೇಕಾಗುತ್ತದೆ.

ನೋಡಬೇಕಾದ ಮುಂದಿನ ಸಂಗತಿಯೆಂದರೆ, ಹೂಡಿಕೆ ಉದ್ದೇಶವನ್ನು ಆಧರಿಸಿ ಫಂಡ್ ಹೇಗೆ ಹೊಂದುತ್ತದೆ, ವಲಯ ಮತ್ತು ಸ್ಟಾಕ್ ಹೋಲ್ಡಿಂಗ್, ಫಂಡ್ ಮ್ಯಾನೇಜರ್ಗಳು, ವಿಂಟೇಜ್, ರಿಸ್ಕ್ ಮಾನದಂಡಗಳು, ವೆಚ್ಚ ಅನುಪಾತ ಇತ್ಯಾದಿಯಲ್ಲಿ ಪೋರ್ಟ್ಫೋಲಿಯೋ ಹೇಗೆ ಹೊಂದುತ್ತದೆ ಎಂದು ನೋಡಬೇಕು. ನೀವು ಖರೀದಿಸಲು ಬಯಸುವ ಉಡುಪಿನ ಸ್ಟೈಲ್, ಬಣ್ಣ, ಬಟ್ಟೆ ಮತ್ತು ಫಿನಿಶ್ ಅನ್ನು ನೋಡಿದ ಹಾಗೆ ಇರುತ್ತದೆ. ಒಂದು ಉಡುಪು ನಿಮಗೆ ಹೊಂದುವಂತೆ ಎಲ್ಲ ರೀತಿಯಲ್ಲಿ ವಿವರಗಳು ಹೊಂದುತ್ತವೆಯೇ ಎಂದು ನೀವು ನಂತರ ವಿಶ್ಲೇಷಿಸುತ್ತೀರಿ. ನೀವು ಮನಸಿನಲ್ಲಿ ಹೊಂದಿರುವ ಅಗತ್ಯ ಅಥವಾ ಗುರಿಗೆ ಫಂಡ್ ಹೊಂದಬೇಕು. ಈ ಸಮಯದಲ್ಲಿ, ಕಾರ್ಯಕ್ಷಮತೆ ಟ್ರ್ಯಾಕ್ ರೆಕಾರ್ಡ್ ಅನ್ನು ಅದರ ಬೆಂಚ್ಮಾರ್ಕ್ ಅನ್ನು ಪರಿಗಣಿಸಿ ನೋಡಬಹುದು.

ಮುಂದಿನ ಬಾರಿ ನೀವು ಫಂಡ್‌ನಲ್ಲಿ ಹೂಡಿಕೆ ಮಾಡಲು ಬಯಸಿದರೆ, ಮೇಲಿನ ಆಯ್ಕೆ ವಿಧಾನವನ್ನು ವ್ಯವಸ್ಥಿತವಾಗಿ ಅನುಸರಿಸಿ ಅಥವಾ ಸಹಾಯಕ್ಕಾಗಿ ಹಣಕಾಸು ತಜ್ಞರನ್ನು ಸಂಪರ್ಕಿಸಿ.

435
ನಾನು ಹೂಡಿಕೆ ಮಾಡಲು ಸಿದ್ಧ