ಇಂಡೆಕ್ಸ್ ಫಂಡ್ಗಳು ಮತ್ತು ಅವುಗಳಿಗೆ ಸಂಬಂಧಿಸಿದ ರಿಸ್ಕ್ಗಳು

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇಂಡೆಕ್ಸ್ ಫಂಡ್ಗಳು ಪರೋಕ್ಷವಾಗಿ ನಿರ್ವಹಿಸಲ್ಪಟ್ಟ ಮ್ಯೂಚುವಲ್ ಫಂಡ್ಗಳಾಗಿವೆ. ಇವು ಜನಪ್ರಿಯ ಮಾರ್ಕೆಟ್ ಇಂಡೆಕ್ಸ್ಗಳಾದ ಸೆನ್ಸೆಕ್ಸ್ ಅಥವಾ ನಿಫ್ಟಿಯನ್ನು ಅನುಕರಿಸುತ್ತವೆ. ಸಕ್ರಿಯವಾಗಿ ನಿರ್ವಹಣೆ ಮಾಡಿದ ಫಂಡ್ಗಳಿಗೆ ಹೋಲಿಸಿದರೆ ಇಂಡೆಕ್ಸ್ ಫಂಡ್ಗಳು ಕಡಿಮೆ ಮಾರ್ಕೆಟ್ ರಿಸ್ಕ್ಅನ್ನು ಹೊಂದಿರುತ್ತವೆಯಾದರೂ, ವಿಪರೀತ ಇಳಿಕೆಯನ್ನು ನಿರ್ವಹಿಸಲು ಫಂಡ್ಮ್ಯಾನೇಜರ್ ಬಳಿ ಸೀಮಿತ ಸಾಮರ್ಥ್ಯ ಇರುತ್ತದೆ. ಯಾಕೆಂದರೆ, ಫಂಡ್ ಒಂದೇ ಅನುಪಾತದಲ್ಲಿ ಇಂಡೆಕ್ಸ್ನಲ್ಲಿನ ಎಲ್ಲ ಸೆಕ್ಯುರಿಟಿಗಳನ್ನೂ ಹೊಂದಿರಬೇಕಾಗುತ್ತದೆ. ಹೆಚ್ಚು ಏರಿಕೆಯಾಗಬಹುದಾದ ಸ್ಟಾಕ್ಅನ್ನು ಅವರು ಹೆಚ್ಚು ಖರೀದಿ ಮಾಡಲಾಗದು ಅಥವಾ ಮಾರ್ಕೆಟ್ ಕರೆಕ್ಷನ್ಗಳ ಅನುಕೂಲವನ್ನು ಪಡೆಯಲು ಹೆಚ್ಚು ಏರಿದ ಸ್ಟಾಕ್ ಅನ್ನು ಅವರು ಹೆಚ್ಚು ಮಾರಾಟ ಮಾಡಲಾಗದು. 

ಇಂಡೆಕ್ಸ್ ಫಂಡ್ಗಳು ನಿರ್ದಿಷ್ಟ ಮಾರ್ಕೆಟ್ ಸೂಚ್ಯಂಕವನ್ನು ಟ್ರ್ಯಾಕ್ ಮಾಡುವುದರಿಂದ, ಲಾರ್ಜ್ ಕ್ಯಾಪ್ಗಳು, ಸ್ಮಾಲ್ ಕ್ಯಾಪ್ಗಳು, ಮಲ್ಟಿ ಕ್ಯಾಪ್ಗಳು, ಬ್ಯಾಂಕಿಂಗ್ ಸ್ಟಾಕ್ಗಳು, ಕಾರ್ಪೊರೇಟ್ ಬಾಂಡ್ಗಳು ಇತ್ಯಾದಿ ನಿರ್ದಿಷ್ಟ ಮಾರ್ಕೆಟ್ ಸೆಗ್ಮೆಂಟ್ನಲ್ಲಿ ಸ್ಥಾಪಿತ ಸೆಕ್ಯುರಿಟಿ ಪೋರ್ಟ್ಫೋಲಿಯೋವನ್ನು ಹೊಂದಿರುತ್ತವೆ. ಹೀಗಾಗಿ, ಹೂಡಿಕೆದಾರರ ಆಯ್ಕೆ ವ್ಯಾಪ್ತಿಯಲ್ಲಿ ಮಿತಿ ಇರುತ್ತವೆ. 

ಮಾರ್ಕೆಟ್ ಸೂಚ್ಯಂಕವನ್ನು ಹೋಲಿಕೆ ಮಾಡಿದರೂ, ಮಾರ್ಕೆಟ್ ಇಂಡೆಕ್ಸ್ನಷ್ಟೇ ರಿಟರ್ನ್ ಅನ್ನು ಅವು ನೀಡುವುದಿಲ್ಲ. ಯಾಕೆಂದರೆ ಇದರಲ್ಲಿ ಟ್ರ್ಯಾಕಿಂಗ್ ದೋಷವೂ ಇರುತ್ತದೆ. ಕಂಪೊಸಿಶನ್ನಲ್ಲಿ ಬದಲಾವಣೆಯಾದಾಗ ಮಾರ್ಕೆಟ್ ಇಂಡೆಕ್ಸ್ಗೆ ಯಾವುದೇ ವೆಚ್ಚ ತಗಲುವುದಿಲ್ಲ. ಅಂದರೆ, ಯಾವುದಾದರೂ ಸೆಕ್ಯುರಿಟಿಯನ್ನು ಸೇರಿಸಿದಾಗ ಅಥವಾ ತೆಗೆದುಹಾಕಿದಾಗ ಅದಕ್ಕೆ ವೆಚ್ಚ ತಗಲುವುದಿಲ್ಲ. ಆದರೆ ಈ ಇಂಡೆಕ್ಸ್ಗೆ ಅನುಗುಣವಾಗಿ ಇರುವುದಕ್ಕಾಗಿ ಇಂಡೆಕ್ಸ್ ಫಂಡ್ ವಹಿವಾಟು ವೆಚ್ಚವನ್ನು ಭರಿಸಬೇಕಾಗುತ್ತದೆ. ಹಾಗೆಯೇ, ನಿರ್ದಿಷ್ಟ ಸ್ಟಾಕ್ನ ವೇಟೆಜ್ ಅಥವಾ ಸ್ಟಾಕ್ಗಳಲ್ಲಿ ವಿಳಂಬ ಇದ್ದರೆ ಇಂಡೆಕ್ಸ್ನಲ್ಲಿ ಸ್ವಲ್ಪ ಬದಲಾವಣೆ ಉಂಟಾಗಬಹುದು. ಇದರಿಂದ ಇಂಡೆಕ್ಸ್ ರಿಟರ್ನ್ಗೆ ಹೋಲಿಸಿದರೆ ಇಂಡೆಕ್ಸ್ ಫಂಡ್ನ ರಿಟರ್ನ್ ಕಡಿಮೆಯಾಗುತ್ತದೆ. 

436
ನಾನು ಹೂಡಿಕೆ ಮಾಡಲು ಸಿದ್ಧ