ಪ್ರತಿ ತಿಂಗಳೂ ಎಸ್‌ಐಪಿ ಮೊತ್ತವನ್ನು ಬದಲಾವಣೆ ಮಾಡಲು ಸಾಧ್ಯವೇ?

ಪ್ರತಿ ತಿಂಗಳೂ ಎಸ್‌ಐಪಿ ಮೊತ್ತವನ್ನು ಬದಲಾವಣೆ ಮಾಡಲು ಸಾಧ್ಯವೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್‌ಗಳಲ್ಲಿ ಎಸ್‌ಐಪಿ ಎಂದರೆ ಒಂದು ರೀತಿಯಲ್ಲಿ ಮ್ಯಾರಥಾನ್‌. ಮ್ಯಾರಥಾನ್‌ ಓಟಗಾರರು ಇಡೀ ವರ್ಷ ಅಭ್ಯಾಸ ಮಾಡುತ್ತಾರೆ. ಆದರೆ ಪ್ರತಿ ವರ್ಷವೂ ಅವರ ಗುರಿಯನ್ನು ಹೆಚ್ಚಿಸುತ್ತಲೇ ಹೋಗುತ್ತಾರೆ. ಆರಂಭದಲ್ಲಿ ಡ್ರೀಮ್‌ ರನ್‌, ನಂತರ ಹಾಫ್ ಮ್ಯಾರಥಾನ್‌ ಹಾಗೂ ಕೊನೆಗೆ ಫುಲ್ ಮ್ಯಾರಥಾನ್ ಓಡುತ್ತಾರೆ. ಇದೇ ರೀತಿ ಎಸ್‌ಐಪಿಯಲ್ಲೂ ನಡೆಯುತ್ತದೆ. 

ಸಿಸ್ಟಮ್ಯಾಟಿಕ್  ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು (ಎಸ್‌ಐಪಿ) ಸೂಕ್ತವಾಗಿದ್ದು, ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಶಿಸ್ತುಬದ್ಧವಾದ ವಿಧಾನವಾಗಿದೆ. ರೂಪಾಯಿ ವೆಚ್ಚವನ್ನು ಸರಾಸರಿ ಮಾಡುವ ಮೂಲಕ ಮಾರುಕಟ್ಟೆ ಏರಿಳಿತಗಳನ್ನು ನಿರ್ವಹಿಸುತ್ತದೆ ಮತ್ತು ದೀರ್ಘಕಾಲದಲ್ಲಿ  ಕಾಂಪೌಂಡಿಂಗ್‌  ಮೊತ್ತವನ್ನು ನೀಡುವ ಎರಡೂ ಕೆಲಸವನ್ನು ಇವು ಮಾಡುತ್ತವೆ. ಹಲವು ವರ್ಷಗಳವರೆಗೆ ಸಣ್ಣ ಮೊತ್ತದ ಮತ್ತು ನಿಯತವಾದ ಹೂಡಿಕೆ ಮಾಡಲು ಅವಕಾಶ ನೀಡುವುದರಿಂದ ಎಸ್‌ಐಪಿಗಳು ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಅತ್ಯಂತ ಜನಪ್ರಿಯ ವಿಧಾನವಾಗಿದೆ. ಅಂದರೆ ನೀವು ಆರಂಭದಲ್ಲಿ ನಿಗದಿಸಿದ ಎಸ್‌ಐಪಿ ಮೊತ್ತಕ್ಕೆ ಬದ್ಧವಾಗಿರಬೇಕು ಎಂದು ಅರ್ಥವೇ? ಇದಕ್ಕೆ ಉತ್ತರವೆಂದರೆ, ಹಾಗೇನಿಲ್ಲ.

ಒಂದು ವೇಳೆ ನೀವು ಈಕ್ವಿಟಿ ಮ್ಯೂಚುವಲ್‌ ಫಂಡ್‌ನಲ್ಲಿ ಪ್ರತಿ ತಿಂಗಳು ರೂ. 3000 ಇಂದ ಆರಂಭಿಸಿದ್ದೀರಿ ಮತ್ತು ಎರಡು ವರ್ಷಗಳ ವರೆಗೂ ಹೂಡಿಕೆ ಮಾಡುತ್ತಿದ್ದೀರಿ. ಈ ಎಸ್ಐಪಿಗೆ ನೀವು ಹೆಚ್ಚು ಹಣವನ್ನು ಹಾಕಬೇಕು ಎಂದು ನೀವು ಬಯಸಿದರೆ, ಎಸ್‌ಐಪಿ ಟಾಪ್‌ ಅಪ್‌ ಮಾಡಿ. ಇದರಲ್ಲಿ ಸ್ವಯಂಚಾಲಿತವಾಗಿ ಮೊದಲೇ ನಿರ್ಧರಿಸಿದ ಶೇಕಡಾ ಮೊತ್ತದ (ಉದಾ., ಶೇ. 50) ಮತ್ತು ಎಸ್‌ಐಪಿ ಮೊತ್ತ ಹೆಚ್ಚಳ ಮಾಡಲು ಅವಕಾಶ ಇರುತ್ತದೆ ಅಥವಾ ನಿಗದಿತ ಅಂತರದಲ್ಲಿ ಅಥವಾ ಪ್ರತಿ ವರ್ಷ ನಿರ್ದಿಷ್ಟ ಮೊತ್ತವನ್ನು (ಉದಾ., ರೂ. 1500) ಹೆಚ್ಚುವರಿಯಾಗಿ ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ನೀವು ನಿಮ್ಮ ಎಸ್‌ಐಪಿ ಹಣವನ್ನು ಸ್ವಯಂಚಾಲಿತವಾಗಿ ಹೆಚ್ಚಳ ಮಾಡಲು ಸಾಧ್ಯವಾಗದಿದ್ದರೂ, ಟಾಪ್‌ ಅಪ್‌ಗಳ ಮೂಲಕ ಮೂರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಹೆಚ್ಚಳ ಮಾಡಬಹುದು. ಇನ್ನಷ್ಟು ಹಣ ಹೂಡಿಕೆ ಮಾಡಬೇಕು ಎಂದೆನಿಸಿದಾಗ ನಿಮ್ಮ ಎಸ್‌ಐಪಿ ಖಾತೆ ಪೋಲಿಯೋದಲ್ಲಿ ಹೆಚ್ಚುವರಿ ಖರೀದಿಗಳನ್ನೂ ಕೂಡ ಮಾಡಬಹುದು.  

434
ನಾನು ಹೂಡಿಕೆ ಮಾಡಲು ಸಿದ್ಧ