ಎನ್‌ಪಿಎಸ್ ಮತ್ತು ಮ್ಯೂಚುವಲ್ ಫಂಡ್‌ಗಳ ಮಧ್ಯೆ ಇರುವ ವ್ಯತ್ಯಾಸ ತಿಳಿಯಿರಿ

ಎನ್‌ಪಿಎಸ್ ಮತ್ತು ಮ್ಯೂಚುವಲ್ ಫಂಡ್‌ಗಳ ಮಧ್ಯೆ ಇರುವ ವ್ಯತ್ಯಾಸ ತಿಳಿಯಿರಿ zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ರಾಷ್ಟ್ರೀಯ ಪಿಂಚಣಿ ಸ್ಕೀಮ್ ಅಥವಾ ಎನ್‌ಪಿಎಸ್‌ ಒಂದು ನಿವೃತ್ತಿ ಪ್ರಯೋಜನ ಸ್ಕೀಮ್ ಆಗಿದ್ದು, ಇದನ್ನು 2004 ರಲ್ಲಿ ಭಾರತ ಸರ್ಕಾರ ಪರಿಚಯಿಸಿತು. ಇನ್ನೊಂದೆಡೆ ಮ್ಯೂಚುವಲ್ ಫಂಡ್‌ ಒಂದು ಹೂಡಿಕೆ ಪರಿಕರವಾಗಿದ್ದು, ಷೇರುಗಳು, ಬಾಂಡ್‌ಗಳು ಅಥವಾ ಇತರ ಸೆಕ್ಯುರಿಟಿಗಳ ಪೋರ್ಟ್‌ಫೋಲಿಯೋವನ್ನು ಒಳಗೊಂಡಿರುತ್ತದೆ ಮತ್ತು ಇದನ್ನು ವೃತ್ತಿಪರ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಿರುತ್ತಾರೆ. 

ಎನ್‌ಪಿಎಸ್ ಹಾಗೂ ಮ್ಯೂಚುವಲ್ ಫಂಡ್‌ - ಎರಡೂ ಹೂಡಿಕೆಗಳನ್ನು ಅರ್ಥ ಮಾಡಿಕೊಳ್ಳುವುದು

ಎನ್‌ಪಿಎಸ್: ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಒಂದು ಸ್ವಯಂಪ್ರೇರಿತ ಪಿಂಚಣಿ ಸ್ಕೀಮ್ ಆಗಿದ್ದು, ಭಾರತೀಯ ನಾಗರಿಕರಿಗೆ ನಿವೃತ್ತಿ ಆದಾಯವನ್ನು ಒದಗಿಸಲು ಭಾರತ ಸರ್ಕಾರವು ಆರಂಭಿಸಿತು. ಪಿಂಚಣಿ ನಿಧಿ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರವು ಸ್ಕೀಮ್ ಅನ್ನು ನಿಯಂತ್ರಿಸುತ್ತದೆ. ಇದು ಮಾರ್ಕೆಟ್ ಲಿಂಕ್ಡ್‌ ಉತ್ಪನ್ನವಾಗಿದ್ದು, ಈಕ್ವಿಟಿ, ಕಾರ್ಪೊರೇಟ್ ಡೆಟ್‌, ಸರ್ಕಾರಿ ಡೆಟ್ ಮತ್ತು ಪರ್ಯಾಯ ಅಸೆಟ್‌ಗಳ ಸಂಯೋಜನೆಯಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅವಕಾಶ ಮಾಡಿಕೊಡುತ್ತದೆ. 

ಎನ್‌ಪಿಎಸ್ ಎರಡು ವಿಧದ ಖಾತೆಗಳನ್ನು ಒದಗಿಸುತ್ತದೆ. ಟೈರ್ 1 ಮತ್ತು ಟೈರ್ 2. ಟೈರ್ 1 ಖಾತೆಯು ಹೂಡಿಕೆದಾರರಿಗೆ 60 ವರ್ಷವಾಗುವವರೆಗೆ ಲಾಕ್ ಆಗಿರುತ್ತದೆ. ಆದರೆ, ಟೈರ್ 2 ಸ್ವಯಂಪ್ರೇರಿತವಾಗಿದೆ ಮತ್ತು ಈ ಖಾತೆಯನ್ನು ಪಡೆಯಲು ಅರ್ಹತೆ ಪಡೆಯುವುದಕ್ಕೆ ಹೂಡಿಕೆದಾರರು ಟೈರ್ 1 ಖಾತೆಯನ್ನು ಹೊಂದಿರಬೇಕು. ಟೈರ್‌ 1 ಕ್ಕಿಂತ ಭಿನ್ನವಾಗಿರುವ ಟೈರ್ 2 ಖಾತೆಯಿಂದ ಹೂಡಿಕೆದಾರರು ಯಾವುದೇ ಸಮಯದಲ್ಲಿ ಹಣವನ್ನು ಹಿಂಪಡೆಯಬಹುದು. 

ಅಸಂಘಟಿತ ವಲಯದ ಕೆಲಸಗಾರರು ಸೇರಿದಂತೆ ದೇಶದಲ್ಲಿನ ಎಲ್ಲಾ ನಾಗರಿಕರಿಗೂ ರಾಷ್ಟ್ರೀಯ ಪಿಂಚಣಿ ಸ್ಕೀಮ್ ಮುಕ್ತವಾಗಿರುವ ಹೂಡಿಕೆಯಾಗಿದೆ. ಇದು ರಚನಾತ್ಮಕ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ವೃದ್ಧಾಪ್ಯದಲ್ಲಿ ಆರ್ಥಿಕ ಸುರಕ್ಷತೆಯನ್ನು ಒದಗಿಸುತ್ತದೆ. ಎನ್‌ಪಿಎಸ್‌ನಲ್ಲಿ ಹಾಕಿದ ಹಣವು ಈಕ್ವಿಟಿ, ಕಾರ್ಪೊರೇಟ್ ಬಾಂಡ್‌ಗಳು, ಸರ್ಕಾರಿ ಸೆಕ್ಯುರಿಟಿಗಳು ಮತ್ತು ಇತರೆ ವಿವಿಧ ಅಸೆಟ್ ಕ್ಲಾಸ್‌ಗಳಲ್ಲಿ ಹರಡಿಕೊಳ್ಳುತ್ತದೆ. ಆದರೆ, ಆಕ್ಟಿವ್ ಚಾಯ್ಸ್ ಮತ್ತು ಆಟೋ ಚಾಯ್ಸ್ ಮೂಲಕ ಅಸೆಟ್ ಅಲೊಕೇಶನ್‌ನಲ್ಲಿ ಫ್ಲೆಕ್ಸಿಬಿಲಿಟಿಯನ್ನು ಸ್ಕೀಮ್ ಒದಗಿಸುತ್ತದೆ.

60 ವರ್ಷ ತಲುಪಿದಾಗ ಎನ್‌ಪಿಎಸ್‌ ಖಾತೆ ಮೆಚ್ಯೂರ್ ಆಗುತ್ತದೆ ಮತ್ತು ಹೂಡಿಕೆದಾರರು ಮೆಚ್ಯೂರ್ ಮೌಲ್ಯದ 60% ವರೆಗಿನ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯಬಹುದು. ಉಳಿದ 40% ಮೊತ್ತವನ್ನು ರೆಗ್ಯುಲರ್ ಪಿಂಚಣಿ ಆನ್ಯುಯಿಟಿ ಖರೀದಿ ಮಾಡಲು ಬಳಸಬಹುದು. 

ಮ್ಯೂಚುವಲ್ ಫಂಡ್‌ಗಳು: ಒಂದು ಮ್ಯೂಚುವಲ್ ಫಂಡ್ ಎಂದರೆ ಅದು ವೃತ್ತಿಪರವಾಗಿ ನಿರ್ವಹಣೆ ಮಾಡಿದ ಹೂಡಿಕೆ ವಿಧಾನವಾಗಿದ್ದು, ಸ್ಟಾಕ್‌ಗಳು, ಬಾಂಡ್‌ಗಳು ಮತ್ತು ಮನಿ ಮಾರ್ಕೆಟ್ ಸಲಕರಣೆಗಳು ಸೇರಿದಂತೆ ವಿವಿಧ ಅಸೆಟ್ ಪೋರ್ಟ್‌ಫೋಲಿಯೋ ಖರೀದಿಗೆ ವಿವಿಧ ಹೂಡಿಕೆದಾರರು ಹಾಕಿದ ಹಣವನ್ನು ಒಳಗೊಂಡಿರುತ್ತದೆ. ಸರಳವಾಗಿ ಹೇಳುವುದಾದರೆ, ಇದು ಕ್ರೋಢೀಕೃತ ಹೂಡಿಕೆ ವಿಧಾನವಾಗಿದ್ದು, ಸಮಾನ ಹೂಡಿಕೆ ಉದ್ದೇಶವನ್ನು ಹೊಂದಿರುವ ಹೂಡಿಕೆದಾರರಿಂದ ಈ ಹಣ ಸಂಗ್ರಹಿಸಲಾಗಿರುತ್ತದೆ.

ವಿವಿಧ ಮ್ಯೂಚುವಲ್ ಫಂಡ್ ವರ್ಗಗಳು ವಿವಿಧ ಹೂಡಿಕೆ ಆದ್ಯತೆಯನ್ನು ಪೂರೈಸುತ್ತವೆ. ಆಕ್ಟಿವ್, ಪ್ಯಾಸಿವ್, ಈಕ್ವಿಟಿ, ಫಿಕ್ಸೆಡ್ ಆದಾಯ, ಬ್ಯಾಲೆನ್ಸ್‌ಡ್ ಫಂಡ್‌ಗಳು ಮತ್ತು ಇತರ ಹಲವು ವರ್ಗಗಳು ಇದರಲ್ಲಿವೆ. ಪ್ರತಿ ಫಂಡ್ ವಿಧವೂ ವಿಶಿಷ್ಟ ಸೌಲಭ್ಯಗಳು, ಸಂಭಾವ್ಯ ರಿವಾರ್ಡ್‌ಗಳನ್ನು ಹೊಂದಿರುತ್ತವೆ ಮತ್ತು ಪ್ರತಿಯೊಂದಕ್ಕೂ ರಿಸ್ಕ್‌ಗಳೂ ಇರುತ್ತವೆ. ಗಮನಾರ್ಹ ಸಂಗತಿಯೇನೆಂದರೆ, ಬಹುತೇಕ ಮ್ಯೂಚುವಲ್ ಫಂಡ್‌ಗಳು ಲಾಕ್ ಇನ್ ಅವಧಿಯನ್ನು ವಿಧಿಸದೇ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತವೆ. ತಮಗೆ ನಿರ್ದಿಷ್ಟವಾದ ಹಣಕಾಸಿನ ಗುರಿಗಳು, ರಿಸ್ಕ್ ಸಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಹೂಡಿಕೆ ಗುರಿಗೆ ಅನುಗುಣವಾಗಿ ತಮ್ಮ ಮೆಚ್ಚಿನ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಫ್ಲೆಕ್ಸಿಬಿಲಿಟಿ ಅವಕಾಶ ಮಾಡಿಕೊಡುತ್ತದೆ.

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

286
ನಾನು ಹೂಡಿಕೆ ಮಾಡಲು ಸಿದ್ಧ