ಮ್ಯೂಚುವಲ್ ಫಂಡ್ಗಳು ಹಾಗೂ ಷೇರುಗಳು: ವ್ಯತ್ಯಾಸವೇನು?

ಮ್ಯೂಚುವಲ್ ಫಂಡ್ಗಳು ಹಾಗೂ ಷೇರುಗಳು: ವ್ಯತ್ಯಾಸವೇನು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನೀವು ಊಟಕ್ಕೆ ಎಲ್ಲಿಂದ ತರಕಾರಿಗಳನ್ನು ತರುತ್ತೀರಿ? ನೀವು ನಿಮ್ಮ ಮನೆ ತೋಟದಲ್ಲಿ ಬೆಳೆಯುತ್ತೀರಾ ಅಥವಾ ಸಮೀಪದ ಮಾರ್ಕೆಟ್ನಿಂದ ನಿಮಗೆ ಬೇಕಾದ್ದನ್ನು ಖರೀದಿ ಮಾಡಿಕೊಂಡು ಬರುತ್ತೀರಾ? ಆರೋಗ್ಯಕರ ಆಹಾರ ಸೇವನೆ ದೃಷ್ಟಿಯಿಂದ ನೀವೇ ತರಕಾರಿ ಬೆಳೆದುಕೊಳ್ಳುವುದು ಉತ್ತಮ. ಆದರೆ ಬೀಜ ಆಯ್ಕೆ, ಗೊಬ್ಬರ ಹಾಕವುದು, ನೀರು ಹಾಕುವುದು, ಕೀಟ ನಿಯಂತ್ರಣ ಇತ್ಯಾದಿ ವಿಚಾರದಲ್ಲಿ ಶ್ರಮ ಹಾಕಬೇಕು. ಆದರೆ ಖರೀದಿ ಮಾಡುವುದಾದರೆ ಯಾವುದೇ ಶ್ರಮ ಇಲ್ಲದೇ ನಿಮಗೆ ತರಕಾರಿ ಸಿಗುತ್ತದೆ.

ಇದೇ ರೀತಿ, ನೀವು ಉತ್ತಮ ಕಂಪನಿಯ ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡಬಹುದು ಅಥವಾ ಮ್ಯೂಚುವಲ್ ಫಂಡ್ಗಳ ಮೂಲಕ ಹೂಡಿಕೆ ಮಾಡಬಹುದು. ಕಂಪನಿಯ ಸ್ಟಾಕ್ಗಳನ್ನು ಖರೀದಿ ಮಾಡುವಾಗ ಸಂಪತ್ತು ಸೃಷ್ಟಿಯಾಗುತ್ತದೆ. ಇದನ್ನು ಆ ಕಂಪನಿಯು ತನ್ನ ವಹಿವಾಟು ಬೆಳೆಸಲು, ನಮಗೆ ಮೌಲ್ಯ ವರ್ಧನೆ ಮಾಡಲು ಬಳಸುತ್ತದೆ. 

ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಹೆಚ್ಚು ರಿಸ್ಕ್ ಇರುತ್ತದೆ. ಕಂಪನಿ ಮತ್ತು ವಲಯದ ಬಗ್ಗೆ ಸಂಶೋಧನೆ ಮಾಡಿಕೊಂಡು ನೀವು ಷೇರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಮಾಡಿದ ಸಾವಿರಾರು ಕಂಪನಿಗಳಿಂದ ಕೆಲವೇ ಕಂಪನಿಗಳನ್ನು ಆಯ್ಕೆ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿರುತ್ತದೆ. ನೀವು ಒಮ್ಮೆ ಆಯ್ಕೆ ಮಾಡಿದ ನಂತರ, ಹೂಡಿಕೆ ಮಾಡಿದ ಪ್ರತಿ ಸ್ಟಾಕ್ನ ಪರ್ಫಾರ್ಮೆನ್ಸ್ ಅನ್ನು ಟ್ರ್ಯಾಕ್ ಮಾಡುತ್ತಲೇ ಇರಬೇಕು. 

ಮ್ಯೂಚುವಲ್ ಫಂಡ್ಗಳಲ್ಲಿ, ಸ್ಟಾಕ್ ಆಯ್ಕೆಯನ್ನು ಪರಿಣಿತ ಫಂಡ್ ಮ್ಯಾನೇಜರ್ ಗಳು ಮಾಡುತ್ತಾರೆ. ನೀವು ಫಂಡ್ನ ಪರ್ಫಾರ್ಮೆನ್ಸ್ ಅನ್ನು ಟ್ರ್ಯಾಕ್ ಮಾಡುತ್ತಿದ್ದರೆ ಸಾಕು. ಫಂಡ್ನಲ್ಲಿರುವ ಪ್ರತಿಯೊಂದು ಸ್ಟಾಕ್ನ ಟ್ರ್ಯಾಕ್ ಮಾಡಬೇಕಿಲ್ಲ. ಇವು ಹೂಡಿಕೆ ಫ್ಲೆಕ್ಸಿಬಿಲಿಟಿಯನ್ನೂ ಕೊಡುತ್ತವೆ. ಸ್ಟಾಕ್ನಲ್ಲಿ ಇದು ಇರುವುದಿಲ್ಲ. ಗ್ರೋತ್/ಡಿವಿಡೆಂಡ್ ಆಯ್ಕೆಗಳು, ಟಾಪ್ ಅಪ್‌ಗಳು ಸಿಸ್ಟಮಿಕ್ ವಿದ್‌ಡ್ರಾ/ಟ್ರಾನ್ಸ್‌ಫರ್ ಇತ್ಯಾದಿ ಲಭ್ಯವಿರುತ್ತವೆ. ಇದರ ಜೊತೆಗೆ ಎಸ್ಐಪಿ ಮೂಲಕ ನಿಯತವಾಗಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಮಾರ್ಕೆಟ್ನ ಸ್ಥಿತ್ಯಂತರದಲ್ಲಿ ಸುರಕ್ಷತೆ ಒದಗಿಸಲು ಸಹಾಯವನ್ನೂ ಮಾಡುತ್ತವೆ.

434
ನಾನು ಹೂಡಿಕೆ ಮಾಡಲು ಸಿದ್ಧ