ಹೂಡಿಕೆಯಲ್ಲಿ ಹೊಸ ಕಾಲದ ಡಿಜಿಟಲ್‌ ಟ್ರೆಂಡ್‌ಗಳು: ಅವು ಹೇಗಿವೆ

ಹೂಡಿಕೆಯಲ್ಲಿ ಹೊಸ ಕಾಲದ ಡಿಜಿಟಲ್‌ ಟ್ರೆಂಡ್‌ಗಳು: ಅವು ಹೇಗಿವೆ

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹಣಕಾಸು ಸೇವೆಗಳ ವಲಯದಲ್ಲಿ ತಂತ್ರಜ್ಞಾನದಲ್ಲಿ ಉಂಟಾದ ಸುಧಾರಣೆಯಿಂದಾಗಿ ಹಲವು ಬದಲಾವಣೆಗಳಾಗಿವೆ. ಇಂದು, ಪಾವತಿ ಮಾಡಲು, ಖರೀದಿ ಮಾಡಲು ಮತ್ತು ಹೂಡಿಕೆ ಮಾಡುವುದಕ್ಕೂ ಕೂಡ ಆನ್‌ಲೈನ್‌ನಲ್ಲಿ ವಹಿವಾಟು ಮಾಡಬಹುದು.

ಸ್ವಾಭಾವಿಕವಾಗಿ, ಭೌತಿಕವಾಗಿ  ಅಸ್ತಿತ್ವದಲ್ಲಿಲ್ಲದ ಸುಲಭವಾಗಿ ಟ್ರೇಡ್ ಮಾಡುವ ವರ್ಚುವಲ್ ಅಸೆಟ್‌ಗಳ ಹಾಗೆಯೇ ಹೊಸ ಕಾಲದ ಡಿಜಿಟಲ್‌ ಟ್ರೆಂಡ್‌ಗಳಿಗೆ ಕಾರಣವಾಗಿದೆ. ಅವುಗಳನ್ನು ರಚಿಸಿಲ್ಲ ಅಥವಾ ಸರ್ಕಾರವಾಗಲೀ ಅಥವಾ ಸೆಂಟ್ರಲ್ ಬ್ಯಾಂಕ್ ಆಗಲೀ ವಿತರಿಸಿಲ್ಲ. ಹೀಗಾಗಿ, ಅವುಗಳನ್ನು ಹಣವನ್ನಾಗಿ ಬಳಸಲಾಗದು ಅಥವಾ ಕಾನೂನಾತ್ಮಕವಾಗಿ ಬಳಸಲಾಗದು. ಆದರೆ, ಕೆಲವು ರಿಸ್ಕ್‌ಗಳು ಇರುತ್ತವೆ:

-    ಇಂತಹ ಡಿಜಿಟಲ್ ಅಸೆಟ್‌ಗಳ ಮೌಲ್ಯವನ್ನು ನೈಜ ಸ್ವತ್ತಿಗೆ ಸಂಯೋಜಿಸಲಾಗದು. ಇದರ ಫಲಿತಾಂಶವಾಗಿ, ಅವುಗಳ ಮೌಲ್ಯವು, ಅಂದರೆ ನಿಮ್ಮ ಹೂಡಿಕೆಯು ತುಂಬಾ ಅಸ್ಥಿರತೆಗೆ ಕಾರಣವಾಗಬಹುದು.
-    ವರ್ಚುವಲ್ ಸ್ವತ್ತುಗಳನ್ನು ನಿಯಂತ್ರಿಸಿಲ್ಲ. ಸರ್ಕಾರದ ನಿಯಮಾವಳಿಗಳು ಇಲ್ಲದ್ದರಿಂದ, ಹೂಡಿಕೆದಾರರು ಮೋಸಕ್ಕೆ ಒಳಗಾಗಬಹುದು ಮತ್ತು ತಮ್ಮ ಹಣವನ್ನು ಕಳೆದುಕೊಳ್ಳಬಹುದು.
-    ಪ್ರಸ್ತುತ, ಈ ವರ್ಚುವಲ್ ಅಸೆಟ್‌ಗಳು ಕೇಂದ್ರ ಬಜೆಟ್‌ 2022 ರ ಪ್ರಕಾರ ತೆರಿಗೆಯ ಅತ್ಯುತ್ತಮ ಮಟ್ಟವನ್ನು ಆಕರ್ಷಿಸುತ್ತವೆ. 

ಇದಕ್ಕೆ ಹೋಲಿಸಿದರೆ, ಮ್ಯೂಚುವಲ್‌ ಫಂಡ್‌ಗಳು 1924 ರಿಂದಲೂ ಅಸ್ತಿತ್ವದಲ್ಲಿವೆ. ಕಳೆದ ಒಂದು ಶತಮಾನದಿಂದ, ಎಂಎಫ್‌ಗಳನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆ ಮತ್ತು ಹೂಡಿಕೆದಾರರ ರಕ್ಷಣೆಗಾಗಿ ಅವುಗಳನ್ನು ಅತ್ಯಂತ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗಿದೆ. ವಿಭಿನ್ನ ರಿಟರ್ನ್‌ ಮತ್ತು ರಿಸ್ಕ್‌ ಅಗತ್ಯಗಳಿಗೆ ಹೊಂದುವ ಸಾಕಷ್ಟು ಸ್ಕೀಮ್‌ಗಳೂ ಲಭ್ಯವಿವೆ. ಹಾಗೆಯೇ, ಅವು ವೈವಿಧ್ಯಮಯವಾಗಿವೆ ಮತ್ತು ಈ ಮೂಲಕ ಹೂಡಿಕೆದಾರರ ರಿಸ್ಕ್‌ ಕಡಿಮೆ ಮಾಡುತ್ತವೆ. ಎಲ್ಲ ಹೂಡಿಕೆ ಆಯ್ಕೆಗಳ ಪೈಕಿ ಅತಿ ಕಡಿಮೆ ತೆರಿಗೆಗಳ ಹೆಚ್ಚುವರಿ ಪ್ರಯೋಜನವನ್ನೂ ಮ್ಯೂಚುವಲ್‌ ಫಂಡ್‌ಗಳು ಹೊಂದಿರುತ್ತವೆ. (ಮ್ಯೂಚುವಲ್‌ ಫಂಡ್‌ಗಳಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ ಎಂಬ ಬಗ್ಗೆ ಇಲ್ಲಿ ನೀವು ಓದಬಹುದು.)

ಹೊಸ ಟ್ರೆಂಡ್‌ಗಳು ಎಂದಿಗೂ ವಿಶಿಷ್ಟ ಮೌಲ್ಯ ಹೊಂದಿರುತ್ತವೆ. ಹೀಗಾಗಿ, ಅವು ಹೂಡಿಕೆದಾರರಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಆದರೆ, ನಿಮ್ಮ ಕಠಿಣ ಪರಿಶ್ರಮದಿಂದ ಸಂಪಾದಿಸಿದ ಹಣವನ್ನು ಇದರಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ರಿಸ್ಕ್‌ಗಳನ್ನೂ ವಿಶ್ಲೇಷಿಸುವುದು ಅತ್ಯಂತ ಮುಖ್ಯ. ಸಮಗ್ರವಾಗಿ ಸಂಶೋಧನೆ ಮಾಡಿ ಮತ್ತು ನಿರ್ದಿಷ್ಟ ಹೂಡಿಕೆ ಆಯ್ಕೆಯು ನಿಮ್ಮ ರಿಸ್ಕ್‌ ಪ್ರೊಫೈಲ್‌ ಮತ್ತು ರಿಟರ್ನ್‌ ನಿರೀಕ್ಷೆಗಳಿಗೆ ಹೊಂದುತ್ತವೆಯೇ ಎಂದು ನಿರ್ಧರಿಸಿ. ಹೂಡಿಕೆ ನಿರ್ಧಾರಗಳನ್ನು ಜೀವನಕ್ಕಾಗಿ ಮಾಡಲಾಗುತ್ತದೆ ಮತ್ತು ಈ ಆಯ್ಕೆಗಳನ್ನು ಮಾಡುವುದಕ್ಕೆ ಸಾಕಷ್ಟು ಸಮಯ ವೆಚ್ಚ ಮಾಡುವುದು ಅತ್ಯಂತ ಅಗತ್ಯ. 

436
ನಾನು ಹೂಡಿಕೆ ಮಾಡಲು ಸಿದ್ಧ