ಪೋರ್ಟ್‌ಫೋಲಿಯೋ ವೈವಿಧ್ಯತೆಯ ಪ್ರಯೋಜನಗಳು ಯಾವುವು

ಪೋರ್ಟ್‌ಫೋಲಿಯೋ ವೈವಿಧ್ಯತೆಯ ಪ್ರಯೋಜನಗಳು ಯಾವುವು zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

“ನಿಮ್ಮ ಎಲ್ಲ ಮೊಟ್ಟೆಗಳನ್ನು ಒಂದೇ ಬಾಸ್ಕೆಟ್‌ನಲ್ಲಿ ಎಂದಿಗೂ ಇಡಬೇಡಿ”.

ಹೂಡಿಕೆ ನಿರ್ಧಾರಗಳನ್ನು ಮಾಡುವಾಗ ರಿಸ್ಕ್ ಮತ್ತು ರಿಟರ್ನ್‌ ಮಧ್ಯೆ ಸಮತೋಲನವನ್ನು ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಈ ಸಮತೋಲನ ಸಾಧಿಸುವಾಗ ವೈವಿಧ್ಯತೆ ಅತ್ಯಂತ ಪ್ರಮುಖ ಕಾರ್ಯತಂತ್ರವಾಗಿದ್ದು, ವಿಭಿನ್ನ ಸ್ವತ್ತು ವರ್ಗಗಳು ಮತ್ತು ವಲಯಗಳಲ್ಲಿ ನಿಮ್ಮ ಹೂಡಿಕೆಯನ್ನು ವಿಸ್ತರಿಸಲು ಅನುವು ಮಾಡುತ್ತದೆ. ಇದರಿಂದ, ಯಾವುದೇ ಒಂದು ನಿರ್ದಿಷ್ಟ ರಿಸ್ಕ್‌ಗೆ ನಿಮ್ಮ ತೆರೆದುಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.

ಈ ಲೇಖನದಲ್ಲಿ, ಪೋರ್ಟ್‌ಫೋಲಿಯೋ ವೈವಿಧ್ಯತೆ ಎಂದರೇನು ಎಂದು ನೋಡೋಣ. ಅದರಲ್ಲೂ ವಿಶೇಷವಾಗಿ ಮ್ಯೂಚುವಲ್‌ ಫಂಡ್‌ಗಳ ವಿಚಾರದಲ್ಲಿ ವೈವಿಧ್ಯತೆ ಎಂದರೇನು ಮತ್ತು ನೀವು ಬಯಸಿರುವ ಹೂಡಿಕೆಯ ಮೇಲಿನ ರಿಟರ್ನ್ಸ್‌ಗಳನ್ನು ಸಾಧಿಸಲು ಇದು ಹೇಗೆ ಸಹಾಯ ಮಾಡಬಹುದು ಎಂದು ನೋಡೋಣ.

ಪೋರ್ಟ್‌ಫೋಲಿಯೋ ವೈವಿಧ್ಯತೆ ಎಂದರೇನು?
ನೀವು ಊಟಕ್ಕೆಂದು ಹೊರಗಡೆ ಹೋದಾಗ, ಗರಿಷ್ಠ ಸಂತೃಪ್ತಿಗಾಗಿ ಎಲ್ಲವೂ ಒಳಗೊಂಡಿರುವ ಊಟಕ್ಕೆ ಆರ್ಡರ್ ಮಾಡುತ್ತೀರಿ. ಸೂಪ್‌, ಆಪಟೈಸರ್, ಮೇನ್ ಕೋರ್ಸ್‌, ಸಿಹಿ ತಿಂಡಿ ಹಾಗೂ ಯಾವುದಾದರೂ ಡ್ರಿಂಕ್ಸ್‌ಗೆ ಆರ್ಡರ್‌ ಮಾಡಬಹುದು. ಇದರಿಂದ ನೀವು ವಿವಿಧ ಸ್ವಾದ ಮತ್ತು ರುಚಿಯನ್ನು ಪಡೆಯುತ್ತೀರಿ ಎಂಬುದು ಖಚಿತವಾಗುತ್ತದೆ. ಹಾಗೆಯೇ, ಯಾವುದೇ ಒಂದು ಕೋರ್ಸ್‌ನಿಂದ ಸಂತೃಪ್ತಿಯಾಗದಿದ್ದರೆ, ಇನ್ನೊಂದು ಕೋರ್ಸ್‌ ನಿಮಗೆ ಸಂತೃಪ್ತಿ ನೀಡಬಹುದಾದ ಸಾಧ್ಯತೆ ಇರುತ್ತದೆ.

ಇದೇ ರೀತಿಯಲ್ಲಿ ಪೋರ್ಟ್‌ಫೋಲಿಯೋ ವೈವಿಧ್ಯತೆಯನ್ನೂ ನೋಡಿ. ರಿಸ್ಕ್‌ಗೆ ಚೆನ್ನಾಗಿ ಹೊಂದಿಕೊಂಡ ರಿಟರ್ನ್ಸ್‌ಗೆ ವಿವಿಧ ಸಲಕರಣೆಗಳಲ್ಲಿ ಹೂಡಿಕೆ ಮಾಡುವುದನ್ನು ಪೋರ್ಟ್‌ಫೋಲಿಯೋ ವೈವಿಧ್ಯತೆಯು ಒಳಗೊಂಡಿರುತ್ತದೆ. ಅಂದರೆ, ರಿಸ್ಕ್‌ ಕಡಿಮೆ ಮಾಡುವುದು ಮತ್ತು ರಿಟರ್ನ್ಸ್‌ ಅನ್ನು ಹೆಚ್ಚಿಸುವುದು. ಸ್ಟಾಕ್‌ಗಳು, ಬಾಂಡ್‌ಗಳು, ಕಮಾಡಿಟಿಗಳು, ರಿಯಲ್ ಎಸ್ಟೇಟ್‌ ಮತ್ತು ಇತರ ಪರ್ಯಾಯ ಹೂಡಿಕೆಗಳಂತಹ ಅಸೆಟ್‌ ಕ್ಲಾಸ್‌ಗಳಲ್ಲಿ ಹೂಡಿಕೆಯನ್ನು ಹರಡುವುದನ್ನು ಇದು ಒಳಗೊಂಡಿದೆ. ಈಕ್ವಿಟಿ, ಡೆಟ್‌, ಕಮಾಡಿಟಿಗಳಂತಹ ವಿವಿಧ ಮಾರ್ಕೆಟ್‌ಗಳಲ್ಲಿ ನೇರವಾಗಿ ಖರೀದಿ ಮಾಡುವುದರ ಬದಲಿಗೆ, ಒಂದೇ ಮ್ಯೂಚುವಲ್‌ ಫಂಡ್ ಸ್ಕೀಮ್‌ ಮೂಲಕ ಎಲ್ಲ ಮಾರ್ಕೆಟ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು.

ಉದಾಹರಣೆಗೆ, ಮಲ್ಟಿ ಅಸೆಟ್‌ ಅಲೊಕೇಶನ್ ಫಂಡ್‌ಗಳು ಕನಿಷ್ಠ ಮೂರು ಅಸೆಟ್ ಕ್ಲಾಸ್‌ಗಳಲ್ಲಿ ಹೂಡಿಕೆ ಮಾಡುತ್ತವೆ. ಪ್ರತಿ ಕ್ಲಾಸ್‌ನಲ್ಲೂ ಕನಿಷ್ಠ 10% ಹೂಡಿಕೆ ಮಾಡಲಾಗುತ್ತದೆ. ಇದೇ ರೀತಿ, ಮಲ್ಟಿ ಕ್ಯಾಪ್‌ ಫಂಡ್‌ಗಳು ಕೂಡ ವಿವಿಧ ಸೆಕ್ಟರ್‌ಗಳು ಮತ್ತು ಮಾರ್ಕೆಟ್‌ ಸೆಗ್ಮೆಂಟ್‌ಗಳಲ್ಲಿ ಈಕ್ವಿಟಿ ಮತ್ತು ಈಕ್ವಿಟಿ ಸಂಬಂಧಿತ ಸಲಕರಣೆಗಳಿಗೆ ತಮ್ಮ ಹೂಡಿಕೆಯ ಕನಿಷ್ಠ 65% ನಿಯೋಜನೆ ಮಾಡುತ್ತವೆ. ಕಡಿಮೆ ಸಂಖ್ಯೆಯ ಸ್ಟಾಕ್‌ಗಳು, ಸೆಕ್ಟರ್‌ಗಳು ಅಥವಾ ಸೆಗ್ಮೆಂಟ್‌ಗಳಿಗೆ ಅತಿಯಾಗಿ ತೆರೆದುಕೊಳ್ಳುವುದರಲ್ಲಿ ಇರುವ ರಿಸ್ಕ್‌ಗಳನ್ನು ಕಡಿಮೆ ಮಾಡಲು ಈ ವೈವಿಧ್ಯತೆಯು ಸಹಾಯ ಮಾಡುತ್ತದೆ.

ಅಷ್ಟಕ್ಕೂ, ವಿಭಿನ್ನ ಗುರಿಗಳಿಗಾಗಿ ವಿಭಿನ್ನ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು. ಉದಾಹರಣೆಗೆ, ಅಲ್ಪಾವಧಿ ಗುರಿಗಳಿಗಾಗಿ ಡೆಟ್‌ ಫಂಡ್‌ಗಳಲ್ಲಿ, ದೀರ್ಘಾವಧಿ ಗುರಿಗಳಿಗಾಗಿ ಈಕ್ವಿಟಿ ಫಂಡ್‌ಗಳಲ್ಲಿ ಮತ್ತು ಮಧ್ಯಮಾವಧಿ ಗುರಿಗಳಿಗಾಗಿ ಹೈಬ್ರಿಡ್‌ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು.

ಈ ಪ್ರತಿಯೊಂದು ಫಂಡ್‌ಗಳೂ ಕೂಡ ತನ್ನದೇ ಪ್ರಯೋಜನಗಳನ್ನು ಹೊಂದಿರುತ್ತವೆ ಮತ್ತು ನಿರ್ದಿಷ್ಟ ಪ್ರಮಾಣದ ರಿಸ್ಕ್‌ ಅನ್ನೂ ಅವು ಹೊಂದಿರುತ್ತವೆ. ನಿಮ್ಮ ಗುರಿಗಳಿಗೆ ನಿರ್ದಿಷ್ಟವಾಗಿ, ನೀವು ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದಾಗ, ನಿಮ್ಮ ಒಟ್ಟಾರೆ ಪೋರ್ಟ್‌ಫೋಲಿಯೋಗೆ ಇರುವ ರಿಸ್ಕ್‌ ಅನ್ನು ನೀವು ಕಡಿಮೆ ಮಾಡಬಹುದು.

ವೈವಿಧ್ಯತೆಯು ವಿವಿಧ ಮಾರ್ಕೆಟ್‌ ವಲಯಗಳಿಂದ ಗಳಿಕೆ ಮಾಡುವ ಅವಕಾಶವನ್ನೂ ಒದಗಿಸುತ್ತದೆ. ಇದು ರಿಸ್ಕ್‌ ಕಡಿಮೆ ಮಾಡುವುದರ ಜೊತೆಗೆ ರಿಟರ್ನ್ಸ್‌ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಮ್ಯೂಚುವಲ್‌ ಫಂಡ್‌ಗಳಲ್ಲೇ ವೈವಿಧ್ಯತೆಯನ್ನು ಒಳಗೊಂಡಿರುವ ಕೆಲವು ವರ್ಗೀಕರಣಗಳಿವೆ. ಉದಾಹರಣೆಗೆ, ವಿಭಿನ್ನ ಸೆಕ್ಟರ್‌ಗಳು ಮತ್ತು ಉದ್ಯಮಗಳಾದ್ಯಂತ ಇರುವ ಮಲ್ಟಿ ಕ್ಯಾಪ್‌ ಫಂಡ್‌ಗಳು ಸ್ಮಾಲ್‌ ಕ್ಯಾಪ್‌, ಮಿಡ್‌ ಕ್ಯಾಪ್‌ ಮತ್ತು ಲಾರ್ಜ್‌ ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಮಲ್ಟಿ ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ವಿವಿಧ ಶ್ರೇಣಿಯ ಕಂಪನಿ ಈಕ್ವಿಟಿಗಳಿಗೆ ಆಕ್ಸೆಸ್ ಪಡೆಯಲು ಸಹಾಯ ಮಾಡಬಹುದು. ಇದೇ ರೀತಿ, ರಿಸ್ಕ್ ಸಮತೋಲಿತ ಮ್ಯೂಚುವಲ್‌ ಫಂಡ್ ಹೂಡಿಕೆಯನ್ನು ನೀವು ಬಯಸಿದ್ದರೆ, ನೀವು ಹೈಬ್ರಿಡ್‌ ಫಂಡ್‌ನಲ್ಲಿ ಹೂಡಿಕೆ ಮಾಡಬಹುದು. ಇವು ಡೆಟ್‌ ಮತ್ತು ಈಕ್ವಿಟಿ ಹೂಡಿಕೆಗಳಲ್ಲಿ ಸಮಾನವಾಗಿ ಹೂಡಿಕೆ ಮಾಡುತ್ತವೆ.

ಆದಾಗ್ಯೂ, ವೈವಿಧ್ಯತೆಯು ಯಶಸ್ಸಿಗೆ ಗ್ಯಾರಂಟಿ ನೀಡುವುದಿಲ್ಲ ಅಥವಾ ನಷ್ಟ ರಕ್ಷಣೆಯನ್ನು ಒದಗಿಸುವುದೂ ಇಲ್ಲ. ಹೂಡಿಕೆ ನಿರ್ಧಾರಗಳನ್ನು ಮಾಡುವುದಕ್ಕೂ ಮೊದಲು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳ ಹೂಡಿಕೆ ಉದ್ದೇಶಗಳನ್ನು ಪರಿಗಣಿಸಿ.

ಪೋರ್ಟ್‌ಫೋಲಿಯೋ ವೈವಿಧ್ಯತೆಯ ಪ್ರಯೋಜನಗಳು ಯಾವುವು?

1) ರಿಸ್ಕ್‌ ನಿರ್ವಹಣೆ
ನಿಮ್ಮ ಪೋರ್ಟ್‌ಫೋಲಿಯೋವನ್ನು ನೀವು ವೈವಿಧ್ಯಗೊಳಿಸಿದಾಗ, ಒಂದು ಅಸೆಟ್‌ ಕ್ಲಾಸ್‌ ಕಡಿಮೆ ಸಾಧನೆ ಮಾಡಿದರೆ, ಇತರ ಅಸೆಟ್‌ಗಳು ಅದನ್ನು ತುಂಬಿಕೊಳ್ಳಬಹುದು. ಎಲ್ಲ ಅಸೆಟ್‌ಗಳೂ ಸಮಾನವಾಗಿ ಸಾಧನೆ ಮಾಡದಿರಬಹುದು ಮತ್ತು ನಿಮ್ಮ ರಿಸ್ಕ್‌ ಅನ್ನು ಕಡಿಮೆ ಮಾಡಲು ವೈವಿಧ್ಯತೆಯು ಅನುವು ಮಾಡುತ್ತದೆ. ಉದಾಹರಣೆಗೆ, ಈಕ್ವಿಟಿಗಳು ಕಳಪೆ ಸಾಧನೆ ಮಾಡಿದರೆ, ಡೆಟ್ ಸಲಕರಣೆಗಳು ಮತ್ತು ಚಿನ್ನವು ಉತ್ತಮವಾಗಿ ಸಾಧನೆ ಮಾಡುತ್ತದೆ. ನೀವು ವೈವಿಧ್ಯಮಯ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ ಅಥವಾ ವಿಭಿನ್ನ ಅಸೆಟ್‌ಗಳಲ್ಲಿ ಮ್ಯೂಚುವಲ್‌ ಫಂಡ್‌ ಹೂಡಿಕೆಗಳನ್ನು ಒಳಗೊಂಡಿರುವ ಪೋರ್ಟ್‌ಫೋಲಿಯೋವನ್ನು ಹೊಂದಿದ್ದರೆ, ನಿಮ್ಮ ಒಟ್ಟಾರೆ ರಿಸ್ಕ್‌ ಮತ್ತು ರಿಟರ್ನ್‌ಗಳು ಸಮತೋಲನಗೊಳ್ಳುತ್ತವೆ.

2)  ಮಾರ್ಕೆಟ್‌ ಅಸ್ಥಿರತೆಯಿಂದ ರಕ್ಷಣೆ
ಒಂದು ವೈವಿಧ್ಯವಾದ ಪೋರ್ಟ್‌ಫೋಲಿಯೋ ಒಟ್ಟಾರೆ ರಿಸ್ಕ್‌ ಅನ್ನು ಕಡಿಮೆ ಮಾಡುತ್ತದೆ. ಮಾರ್ಕೆಟ್ ಅಸ್ಥಿರತೆಯ ಒಟ್ಟು ಪರಿಣಾಮವನ್ನು ವಿವಿಧ ಅಸೆಟ್ ಕ್ಲಾಸ್‌ಗಳು ಮತ್ತು ಉದ್ಯಮಗಳಲ್ಲಿ ಹೂಡಿಕೆ ವೈವಿಧ್ಯಗೊಳಿಸುವುದರಿಂದಾಗಿ ಕಡಿಮೆ ಮಾಡಬಹುದು. ರಿಟರ್ನ್‌ಗಳಲ್ಲಿ ಅಧಿಕ ಅಸ್ಥಿರತೆಯು ಅಸೆಟ್‌ನ ರಿಸ್ಕ್‌ ಹೆಚ್ಚಿಸುತ್ತದೆ ಮತ್ತು ಇದರಿಂದಾಗಿ ರಿಸ್ಕ್‌ ಇರುವ ಅಸೆಟ್‌ಗಳ ಮೇಲೆ ರಿಟರ್ನ್‌ಗಳು ಕಡಿಮೆ ರಿಸ್ಕ್‌ ಇರುವ ಅಸೆಟ್‌ಗಳ ಮೇಲಿನ ರಿಟರ್ನ್ಸ್‌ಗಳಿಗಿಂತ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಉದಾಹರಣೆಗೆ, ಒಂದೇ ಕಂಪನಿಯ ಈಕ್ವಿಟಿಗಳು ಮತ್ತು ಬಾಂಡ್‌ಗಳಲ್ಲಿ ನೀವು ಹೂಡಿಕೆ ಮಾಡಿದರೆ, ಬಾಂಡ್‌ಗಳ ಮೇಲೆ ಮಾಡಿದ ಹೂಡಿಕೆಯ ಮೇಲೆ ಸಿಗುವ ರಿಟರ್ನ್‌ಗಿಂತ ಈಕ್ವಿಟಿಗಳಲ್ಲಿ ಮಾಡಿದ ಹೂಡಿಕೆಯ ಮೇಲಿನ ರಿಟರ್ನ್‌ ಹೆಚ್ಚಿರುತ್ತದೆ. ಈಕ್ವಿಟಿಗಳಲ್ಲಿನ ರಿಸ್ಕ್‌ ಕೂಡ ಹೆಚ್ಚಿರುತ್ತದೆ. ನಿಮ್ಮ ಪೋರ್ಟ್‌ಫೋಲಿಯೋದಲ್ಲಿ ಡೆಟ್‌ ಮತ್ತು ಈಕ್ವಿಟಿಯೆರಡನ್ನೂ ಸೇರಿಸಿದಾಗ, ಒಂದು ಅಸೆಟ್‌ ಕ್ಲಾಸ್‌ನಿಂದ ಬಂದ ಧನಾತ್ಮಕ ರಿಟರ್ನ್‌ಗಳು ಇನ್ನೊಂದು ಅಸೆಟ್‌ ಕ್ಲಾಸ್‌ನಿಂದ ಬಂದ ಕಡಿಮೆ ಅಥವಾ ಋಣಾತ್ಮಕ ರಿಟರ್ನ್‌ಗಳನ್ನು ತುಂಬಿಕೊಳ್ಳುವಂತೆ ಇರಬೇಕು ಎಂದು ನೀವು ಖಚಿತಪಡಿಸಿಕೊಳ್ಳಬೇಕು.

3) ಗುರಿಗಳು
ವೈವಿಧ್ಯತೆಯು ನಿಮ್ಮ ನಿರ್ದಿಷ್ಟ ಗುರಿಗಳನ್ನು ಸಾಧಿಸಲು ಸಹಾಯ ಮಾಡಬಹುದು. ಉದ್ದೇಶಗಳು ಕಾಲಕಾಲಕ್ಕೆ ಬದಲಾಗಬಹುದು. ಅದನ್ನು ಸಾಧಿಸುವುದಕ್ಕೆ ಫ್ಲೆಕ್ಸಿಬಲ್‌ ಹೂಡಿಕೆ ತಂತ್ರಗಳು ಬೇಕಾಗಬಹುದು. ಉದಾಹರಣೆಗೆ, ನೀವು ವರ್ಷಕ್ಕೊಮ್ಮೆ ರಜಾದಿನಗಳನ್ನು ಕಳೆಯಲು ಬಯಸಿದ್ದೀರಿ, ನಿವೃತ್ತಿಗಾಗಿ ಉಳಿಸಬೇಕಿದೆ ಮತ್ತು ನಿಮ್ಮ ಮಕ್ಕಳ ಕಾಲೇಜು ವೆಚ್ಚಗಳಿಗೆ ಪಾವತಿ ಮಾಡಬೇಕಿದೆ ಎಂದು ಭಾವಿಸಿ. ಇದಕ್ಕಾಗಿ ನಿಮಗೆ, ಈ ಪ್ರತಿ ಗುರಿಗೂ ಯೋಜನೆ ಮಾಡಲು ಸಹಾಯ ನೀಡುವ ಉದ್ದೇಶ ಮತ್ತು ಕಾಲಾವಧಿಯನ್ನು ಆಧರಿಸಿ ವಿಭಿನ್ನ ಮ್ಯೂಚುವಲ್ ಫಂಡ್‌ ಹೂಡಿಕೆ ಅಗತ್ಯವಿದೆ. ಅನುಮಾನವಿದ್ದರೆ, ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ.

4) ದೀರ್ಘಕಾಲೀನ ಕಾರ್ಯಕ್ಷಮತೆ
ದೀರ್ಘಾವಧಿಯಲ್ಲಿ, ಅತ್ಯಂತ ವೈವಿಧ್ಯಮಯವಾದ ಪೋರ್ಟ್‌ಫೋಲಿಯೋ ಸುಸ್ಥಿರ ಹೂಡಿಕೆ ಅನುಭವವನ್ನು ಒದಗಿಸುವ ಸಾಧ್ಯತೆಯನ್ನು ನೀಡಬಹುದು ಮತ್ತು ಮಾರ್ಕೆಟ್ ಅಸ್ಥಿರತೆಯನ್ನು ತಡೆದುಕೊಳ್ಳುವುದಕ್ಕೆ ಉತ್ತಮ ಸ್ಥಾನವನ್ನು ಹೊಂದಿರಬಹುದು.

5) ಸಮಯ ಉಳಿಸುವುದು ಮತ್ತು ಅನುಕೂಲಕರವಾದುದು
ವೈವಿಧ್ಯಮಯ ಪೋರ್ಟ್‌ಫೋಲಿಯೋಗಳು ನಿಮಗೆ ಸಮಯ ಉಳಿತಾಯ ಮಾಡಲೂ ಸಹಾಯ ಮಾಡಬಹುದು. ಏಕೆಂದರೆ, ಪ್ರತಿ ಹೂಡಿಕೆಯನ್ನೂ ವೈಯಕ್ತಿಕವಾಗಿ ನೀವು ಮೇಲ್ವಿಚಾರಣೆ ಮಾಡುವ ಅಗತ್ಯ ಇರುವುದಿಲ್ಲ. ಬದಲಿಗೆ, ಪೋರ್ಟ್‌ಫೋಲಿಯೋದ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿದರೆ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಿದರೆ ಸಾಕು. ಅಗತ್ಯವಿದ್ದರೆ, ನಿಮ್ಮ ಮ್ಯೂಚುವಲ್‌ ಫಂಡ್‌ ವಿತರಕರನ್ನು ನೀವು ಎಂದಿಗೂ ಸಂಪರ್ಕಿಸಬಹುದು.

ತೀರ್ಮಾನ
ರಿಸ್ಕ್ ನಿರ್ವಹಿಸಲು ಮತ್ತು ರಿಟರ್ನ್‌ಗಳನ್ನು ಹೆಚ್ಚಿಸುವುದಕ್ಕಾಗಿ ಎದುರು ನೋಡುತ್ತಿರುವ ಯಾವುದೇ ಹೂಡಿಕೆದಾರರಿಗೆ ಪೋರ್ಟ್‌ಫೋಲಿಯೋ ವೈವಿಧ್ಯತೆ ಅತ್ಯಂತ ಪ್ರಮುಖವಾಗಿದೆ. ವಿವಿಧ ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡುವುದರಿಂದ, ಆರ್ಥಿಕತೆಯಲ್ಲಿನ ವಿಭಿನ್ನ ಅಸೆಟ್ ಕ್ಲಾಸ್‌ಗಳು ಮತ್ತು ಸೆಕ್ಟರ್‌ಗಳಿಗೆ ತೆರೆದುಕೊಳ್ಳುವಿಕೆ ಲಭ್ಯವಾಗುತ್ತದೆ. ಇದರಿಂದ ಮಾರ್ಕೆಟ್‌ ಅಸ್ಥಿರತೆಗಳು ಮತ್ತು ಆರ್ಥಿಕ ಅನಿಶ್ಚಿತತೆಗಳ ಪರಿಣಾಮವನ್ನು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಹಣಕಾಸು ಗುರಿಗಳನ್ನು ಸಾಧಿಸುವ ಸಾಧ್ಯತೆಯೂ ಹೆಚ್ಚಾಗುತ್ತದೆ.

ಹಕ್ಕು ನಿರಾಕರಣೆ 

ಮ್ಯೂಚುವಲ್ ಫಂಡ್ ಯೋಜನೆಗಳ ವಿವಿಧ ವರ್ಗಗಳ ಬಗ್ಗೆ ಎಎಂಎಫ್ಐ (AMFI) ವೆಬ್ ಸೈಟ್ ನಲ್ಲಿ ಪ್ರಸಾರವಾದ ಮಾಹಿತಿಯು ಮ್ಯೂಚುವಲ್ ಫಂಡ್ ಗಳ ಬಗ್ಗೆ ಜಾಗೃತಿ ಮೂಡಿಸಲು ಹಣಕಾಸು ಉತ್ಪನ್ನ ವರ್ಗವಾಗಿ ಜಾಗೃತಿ ಮೂಡಿಸಲು ಹೊರತು ಮಾರಾಟ ಪ್ರಚಾರ ಅಥವಾ ವ್ಯವಹಾರದ ಕೋರಿಕೆಗಾಗಿ ಅಲ್ಲ.

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಆಂತರಿಕ ಮೂಲಗಳು ಮತ್ತು ವಿಶ್ವಾಸಾರ್ಹವೆಂದು ನಂಬಲಾದ ಇತರ ಮೂರನೇ ಪಕ್ಷದ ಮೂಲಗಳ ಆಧಾರದ ಮೇಲೆ ಎಎಂಎಫ್ಐ ನಲ್ಲಿನ ವಿಷಯವನ್ನು ಸಿದ್ಧಪಡಿಸಿದೆ. ಆದಾಗ್ಯೂ, ಅಂತಹ ಮಾಹಿತಿಯ ನಿಖರತೆಯನ್ನು ಎಎಂಎಫ್ಐ ಖಾತರಿಪಡಿಸುವುದಿಲ್ಲ, ಅದರ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಂತಹ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಖಾತರಿಪಡಿಸುವುದಿಲ್ಲ.

ಇಲ್ಲಿರುವ ವಿಷಯವು ವೈಯಕ್ತಿಕ ಹೂಡಿಕೆದಾರರ ಉದ್ದೇಶಗಳು, ಅಪಾಯದ ಸಾಧ್ಯತೆ ಅಥವಾ ಹಣಕಾಸಿನ ಅಗತ್ಯಗಳು ಅಥವಾ ಸಂದರ್ಭಗಳು ಅಥವಾ ಇಲ್ಲಿ ವಿವರಿಸಿದ ಮ್ಯೂಚುವಲ್ ಫಂಡ್ ಉತ್ಪನ್ನಗಳ ಸೂಕ್ತತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಹೂಡಿಕೆದಾರರು ಈ ನಿಟ್ಟಿನಲ್ಲಿ ಹೂಡಿಕೆ ಸಲಹೆಗಾಗಿ ತಮ್ಮ ವೃತ್ತಿಪರ ಹೂಡಿಕೆ ಸಲಹೆಗಾರ/ ಸಮಾಲೋಚಕ/ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಮ್ಯೂಚುವಲ್ ಫಂಡ್ ಯೋಜನೆಯು ಠೇವಣಿ ಉತ್ಪನ್ನವಲ್ಲ ಮತ್ತು ಇದು ಮ್ಯೂಚುವಲ್ ಫಂಡ್ ಅಥವಾ ಅದರ ಎಎಂಸಿ (AMC) ಯಿಂದ ಬಾಧ್ಯತೆ ಅಥವಾ ಖಾತರಿ ಅಥವಾ ವಿಮೆಯಾಗಿಲ್ಲ. ಅಂತರ್ಗತ ಹೂಡಿಕೆಗಳ ಸ್ವರೂಪದಿಂದಾಗಿ, ಮ್ಯೂಚುವಲ್ ಫಂಡ್ ಉತ್ಪನ್ನದ ಆದಾಯ ಅಥವಾ ಸಂಭಾವ್ಯ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ.

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285
ನಾನು ಹೂಡಿಕೆ ಮಾಡಲು ಸಿದ್ಧ