ನಾನು ಇಟಿಎಫ್‌ನಲ್ಲಿ ಹೂಡಿಕೆ ಮಾಡಬೇಕೇ?

ನಾನು ಇಟಿಎಫ್‌ನಲ್ಲಿ ಹೂಡಿಕೆ ಮಾಡಬೇಕೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸ್ಟಾಕ್ ಮಾರ್ಕೆಟ್‌ಗೆ ಎಕ್ಸ್‌ಪೋಷರ್ ಅನ್ನು ಗಳಿಸಲು ಇಟಿಎಫ್‌ಗಳು ಅತಿ ಕಡಿಮೆ ವೆಚ್ಚದ ವಿಧಾನವಾಗಿದೆ. ಇವು ಲಿಕ್ವಿಡಿಟಿ ಮತ್ತು ನೈಜ ಸಮಯದ ಸೆಟಲ್ಮೆಂಟ್ ಒದಗಿಸುತ್ತವೆ. ಯಾಕೆಂದರೆ ಇವುಗಳನ್ನು ಎಕ್ಸ್‌ಚೇಂಜ್‌ನಲ್ಲಿ  ಪಟ್ಟಿ ಮಾಡಲಾಗಿರುತ್ತದೆ ಮತ್ತು ಸ್ಟಾಕ್‌ಗಳ ರೀತಿ ಟ್ರೇಡ್ ಮಾಡಲಾಗುತ್ತದೆ. ಇಟಿಎಫ್‌ಗಳು ಕಡಿಮೆ ರಿಸ್ಕ್ ಆಯ್ಕೆಯಾಗಿದ್ದು, ಸ್ಟಾಕ್ ಇಂಡೆಕ್ಸ್ ಅನ್ನು ಇವು ಪ್ರತಿಫಲಿಸುತ್ತವೆ ಮತ್ತು ನಿಮ್ಮ ಆಯ್ಕೆಯ ಕೆಲವೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುವುದರ ಬದಲಿಗೆ ವೈವಿಧ್ಯತೆಯನ್ನು ಒದಗಿಸುತ್ತವೆ.

ಶಾರ್ಟ್ ಸೆಲ್ಲಿಂಗ್ ಅಥವಾ ಮಾರ್ಜಿನ್‌ನಲ್ಲಿ ಖರೀದಿಯಂತಹ ಟ್ರೇಡ್ ಮಾಡುವಾಗ ನಿಮಗೆ ಇಟಿಎಫ್‌ಗಳು ಫ್ಲೆಕ್ಸಿಬಿಲಿಟಿ ಒದಗಿಸುತ್ತವೆ. ಕಮಾಡಿಟಿಗಳಲ್ಲಿ ಹೂಡಿಕೆ ಮಾಡುವುದು ಮತ್ತು ಅಂತಾರಾಷ್ಟ್ರೀಯ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದರಂಥ ಪರ್ಯಾಯ ಹೂಡಿಕೆ ಆಯ್ಕೆಗಳಿಗೆ ಪ್ರವೇಶಾವಕಾಶವನ್ನು ಇಟಿಎಫ್‌ಗಳು ಒದಗಿಸುತ್ತವೆ. ನಿಮ್ಮ ಪೊಸಿಶನ್ ಆಧರಿಸಿ ಮೇಲೆ ನೀವು ಆಪ್ಶನ್‌ಗಳು ಮತ್ತು ಫ್ಯೂಚರ್‌ಗಳನ್ನೂ ಬಳಸಬಹುದು. ಈ ಸೌಲಭ್ಯಗಳು ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಲಭ್ಯವಿಲ್ಲ.

ಆದರೆ, ಎಲ್ಲ ಹೂಡಿಕೆದಾರರಿಗೂ ಇಟಿಎಫ್ ಸೂಕ್ತವಲ್ಲ. ಕಡಿಮೆ ರಿಸ್ಕ್ ಆಯ್ಕೆಯ ಮೂಲಕ ದೀರ್ಘಕಾಲಕ್ಕೆ ಈಕ್ವಿಟಿ ಹೂಡಿಕೆಯ ಲಾಭವನ್ನು ಅನುಭವಿಸಲು ನೀವು ಬಯಸಿದರೆ ಹೊಸ ಹೂಡಿಕೆದಾರರಿಗೆ ಇಂಡೆಕ್ಸ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ. ಸಗಟು ನಗದು ಹೊಂದಿದ್ದು, ನಗದನ್ನು ಹೇಗೆ ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡದೇ ಇರುವವರಿಗೂ ಇಟಿಎಫ್‌ಗಳು ಸೂಕ್ತ. ಸ್ವಲ್ಪ ದಿನಗಳ ಮಟ್ಟಿಗೆ ಅವರು ಇಟಿಎಫ್‌ನಲ್ಲಿ ಹೂಡಿಕೆ ಮಾಡಬಹುದು ಮತ್ತು ನಗದನ್ನು ಸೂಕ್ತವಾಗಿ ಇಡುವುದಕ್ಕೂ ಮೊದಲು ಸ್ವಲ್ಪ ರಿಟರ್ನ್ ಪಡೆಯಬಹುದು. ಸರಿಯಾದ ಇಟಿಎಫ್ ಆಯ್ಕೆ ಮಾಡಲು, ಸಾಮಾನ್ಯ ರಿಟೇಲ್ ಹೂಡಿಕೆದಾರರು ಹೊಂದಿರುವ ಕೌಶಲ್ಯಕ್ಕಿಂತ ಹೆಚ್ಚಾಗಿ ಹಣಕಾಸು ಮಾರ್ಕೆಟ್‌ನ ಬಗ್ಗೆ ತಿಳಿವಳಿಕೆ ಹೊಂದಿರಬೇಕಾಗುತ್ತದೆ. ಹೀಗಾಗಿ, ನಿಮ್ಮ ಇಟಿಎಫ್ ಹೂಡಿಕೆಯನ್ನು ನಿರ್ವಹಿಸಲು ಹೂಡಿಕೆ ಶೈಲಿಯ ಬಗ್ಗೆ ತಿಳಿದುಕೊಂಡಿರಬೇಕು.

436
ನಾನು ಹೂಡಿಕೆ ಮಾಡಲು ಸಿದ್ಧ