ಮ್ಯೂಚುವಲ್‌ ಫಂಡ್‌ಗಳಲ್ಲಿ ನಾನು ನನ್ನ ಉಳಿತಾಯವನ್ನು ರಿಸ್ಕ್‌ಗೆ ಹಾಕಬೇಕೆ?

ಮ್ಯೂಚುವಲ್‌ ಫಂಡ್‌ಗಳಲ್ಲಿ ನಾನು ನನ್ನ ಉಳಿತಾಯವನ್ನು ರಿಸ್ಕ್‌ಗೆ ಹಾಕಬೇಕೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಎಲ್ಲರಿಗೂ ಉತ್ತಮ ರಿಟರ್ನ್ಸ್ ಬೇಕು. ಆದರೆ, ನಿಮ್ಮ ಹಣವನ್ನು ಹೂಡಿಕೆ ಮಾಡದೇ ಇಂತಹ ರಿಟರ್ನ್ ಅನ್ನು ಪಡೆಯುವುದು ಸಾಧ್ಯವೇ? ನೀವು ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡುತ್ತಿದ್ದೀರಿ ಎಂದಾದರೆ, ಹಣದುಬ್ಬರಕ್ಕಿಮತ ಉತ್ತಮವಾಗಿ ರಿಟರ್ನ್ ಅನ್ನು ಪಡೆಯುವ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರಬೇಕು. (ನಿಮ್ಮ ಉಳಿತಾಯದ ಮೇಲೆ ಹಣದುಬ್ಬರ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ಇಲ್ಲಿನ ಲೇಖನ ಓದಿ) ಈ ಹೂಡಿಕೆಗಳು ನಿಮ್ಮ ಕೆಲವು ಭವಿಷ್ಯದ ಗುರಿಗಳಾದ ಮಕ್ಕಳ ಶಿಕ್ಷಣ, ಹೊಸ ಮನೆ ಅಥವಾ ನಿವೃತ್ತಿಗೆ ಮಾಡಬಹುದಾಗಿದೆ. ಆದರೆ, ನೀವು ಬೆವರು ಸುರಿಸಿ ದುಡಿದ ಹಣವನ್ನು ಫಿಕ್ಸೆಡ್‌ ಡೆಪಾಸಿಟ್‌ನಲ್ಲಿ ಇಡುವುದರ ಬದಲಿಗೆ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಬಗ್ಗೆ ಚಿಂತ ಉಂಟಾಗಬಹುದು.  ಅದು ನಿಜಕ್ಕೂ ಸರಿಯಾದ ಅನುಮಾನ.

ಮ್ಯೂಚುವಲ್‌ ಫಂಡ್‌ಗಳು ರಿಸ್ಕ್ ಅನ್ನು ಒಳಗೊಂಡಿರುತ್ತವೆ. ಇವು ಫಿಕ್ಸೆಡ್‌ ಡೆಪಾಸಿಟ್‌ ರೀತಿ ಖಚಿತ ರಿಟರ್ನ್ಸ್ ನೀಡುವುದಿಲ್ಲ. ಆದರೆ, ಅವು ಕ್ರಿಕೆಟ್‌ನ ರೀತಿ. ಭಾರತದ ತಂಡವು ಪಿಚ್‌ಗೆ ತೆರಳಿದಾಗ ಅದು ಮ್ಯಾಚ್ ಗೆಲ್ಲುತ್ತದೆಯೇ ಎಂಬುದು ನಮಗೆ ತಿಳಿದಿರುವುದಿಲ್ಲ. ಸೋಲುವ ಅಪಾಯ ಭಾರಿ ಪ್ರಮಾಣದಲ್ಲಿ ಇರುತ್ತದೆ. ಆದರೆ ಗೆಲ್ಲುವ ಅವಕಾಶವೂ ಅಷ್ಟೇ ಪ್ರಮಾಣದಲ್ಲಿರುತ್ತದೆ. ಪಂದ್ಯದಲ್ಲಿ ಆಡುವ ರಿಸ್ಕ್‌ ಅನ್ನು ತಂಡ ತೆಗೆದುಕೊಳ್ಳದ ಹೊರತು, ಯಶಸ್ಸನ್ನು ಸವಿಯಲು ಅವುಗಳಿಗೆ ಸಾಧ್ಯವಿಲ್ಲ. ಇದೇ ನೀತಿ ಮ್ಯೂಚುವಲ್‌ ಫಂಡ್‌ಗಳ ವಿಚಾರಕ್ಕೂ ಅನ್ವಯಿಸುತ್ತದೆ. ಹೂಡಿಕೆ ಮಾಡುವ ಮೂಲಕ ನಿಮ್ಮ ಬಂಡವಾಳವನ್ನು ನೀವು ರಿಸ್ಕ್‌ಗೆ ಒಳಪಡಿಸದಿದ್ದರೆ, ಮ್ಯೂಚುವಲ್‌ ಫಂಡ್‌ನ ಇನ್ನೊಂದು ಮುಖದ ಅನುಭವ ನಿಮಗೆ ಉಂಟಾಗುವುದಿಲ್ಲ. ಅಂದರೆ ಎಫ್‌ಡಿ, ಭೌತಿಕ ಚಿನ್ನ, ರಿಯಲ್‌ ಎಸ್ಟೇಟ್‌ ಇತ್ಯಾದಿ ಇತರ ಆಯ್ಕೆಗಳಿಗಿಂತ ಹಣದುಬ್ಬರಕ್ಕೆ ಹೊಂದಿಸಿದ ಅಧಿಕ ಮೊತ್ತದ ರಿಟರ್ನ್ ಗಳಿಸುವ ಸಾಧ್ಯತೆಯ ಅನುಭವ ನಿಮಗೆ ಆಗುವುದಿಲ್ಲ.

436
ನಾನು ಹೂಡಿಕೆ ಮಾಡಲು ಸಿದ್ಧ