ಮ್ಯೂಚುವಲ್‌ ಫಂಡ್‌ಗಳು ಮಾರ್ಕೆಟ್‌ ರಿಸ್ಕ್‌ಗೆ ಒಳಪಟ್ಟಿವೆ ಎಂದು ಏಕೆ ಅಬಾಧ್ಯತೆಯಲ್ಲಿ (ಡಿಸ್ ಕ್ಲೇಮರ್) ಹೇಳಲಾಗುತ್ತದೆ?

ಮ್ಯೂಚುವಲ್‌ ಫಂಡ್‌ಗಳು ಮಾರ್ಕೆಟ್‌ ರಿಸ್ಕ್‌ಗೆ ಒಳಪಟ್ಟಿವೆ ಎಂದು ಏಕೆ ಅಬಾಧ್ಯತೆಯಲ್ಲಿ (ಡಿಸ್ ಕ್ಲೇಮರ್) ಹೇಳಲಾಗುತ್ತದೆ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ಗಳು ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಸೆಕ್ಯುರಿಟಿಗಳ ವಿಧವು ಸ್ಕೀಮ್‌ನ ಉದ್ದೇಶವನ್ನು 

ಅವಲಂಬಿಸಿರುತ್ತವೆ.ಉದಾಹರಣೆಗೆ, ಒಂದು ಈಕ್ವಿಟಿ ಅಥವಾ ಗ್ರೋತ್‌ ಫಂಡ್‌ಗಳು ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿರುತ್ತವೆ. ಒಂದು ಲಿಕ್ವಿಡ್ ಫಂಡ್‌ ಡೆಪಾಸಿಟ್‌ನ ಸರ್ಟಿಫಿಕೇಟ್‌ಗಳು ಮತ್ತು ಕಮರ್ಷಿಯಲ್‌ ಪೇಪರ್‌ ಮೇಲೆ ಹೂಡಿಕೆ ಮಾಡುತ್ತವೆ.

ಈ ಎಲ್ಲ ಸೆಕ್ಯುರಿಟಿಗಳನ್ನು ‘ಮಾರ್ಕೆಟ್‌’ನಲ್ಲಿ ಟ್ರೇಡ್ ಮಾಡಲಾಗುತ್ತವೆ. ಕಂಪನಿ ಷೇರುಗಳನ್ನು ಸ್ಟಾಕ್‌ ಎಕ್ಸ್‌ಚೇಂಜ್‌ನಿಂದ ಖರೀದಿ ಮತ್ತು ಮಾರಾಟ ಮಾಡಲಾಗುತ್ತದೆ. ಇದು ಕ್ಯಾಪಿಟಲ್ ಮಾರ್ಕೆಟ್‌ನ ಒಂದು ಭಾಗವಾಗಿದೆ. ಇದೇ ರೀತಿ, ಸರ್ಕಾರಿ ಸೆಕ್ಯುರಿಟಿಗಳಂತಹ ಡೆಟ್ ಇನ್‌ಸ್ಟ್ರುಮೆಂಟ್‌ಗಳನ್ನು ಸ್ಟಾಕ್‌ ಎಕ್ಸ್‌ಚೇಂಜ್‌ನ ಪ್ಲಾಟ್‌ಫಾರಂ ಮೂಲಕ ಅಥವಾ ಎನ್‌ಡಿಎಸ್ ಎಂದು ಕರೆಯಬಹುದಾದ ವಿಶೇಷ ಸಿಸ್ಟಂಗಳ ಮೂಲಕ ಟ್ರೇಡ್‌ ಮಾಡಬಹುದಾಗಿದೆ. ಇವು ಸೆಕ್ಯುರಿಟಿಗಳ ಖರೀದಿ ಮತ್ತು ಮಾರಾಟಕ್ಕೆ ಮಾರ್ಕೆಟ್‌ಗಳಾಗಿ ಕೆಲಸ ಮಾಡುತ್ತವೆ ಮತ್ತು ಖರೀದಿದಾರರು ಮತ್ತು ಮಾರಾಟಗಾರರು ವೈವಿಧ್ಯ ರೀತಿಯಲ್ಲಿರುತ್ತಾರೆ. ಹೀಗಾಗಿ, ಖರೀದಿ ಮತ್ತು ಮಾರಾಟದ ಇಡೀ ಪ್ರಕ್ರಿಯೆ ಮತ್ತು ಬೆಲೆ ನಿರ್ಧಾರವನ್ನು ‘ಮಾರ್ಕೆಟ್’ ಮಾಡುತ್ತದೆ.

ಯಾವುದೇ ಸೆಕ್ಯುರಿಟಿಯ ಬೆಲೆಯು ಮಾರ್ಕೆಟ್ ಶಕ್ತಿಗಳನ್ನು ಅವಲಂಬಿಸಿರುತ್ತದೆ ಮತ್ತು ಮಾರ್ಕೆಟ್‌ ಯಾವುದೇ ಸುದ್ದಿ ಅಥವಾ ಬೆಳವಣಿಗೆಯನ್ನು ಆಧರಿಸಿ ವರ್ತಿಸುತ್ತದೆ. ಹೀಗಾಗಿ ಮಾರ್ಕೆಟ್‌ನ ದಿಕ್ಕನ್ನು ಊಹಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ. ಅಲ್ಪಾವಧಿಯಲ್ಲಿ ಒಂದು ‍ಷೇರು ಅಥವಾ ಸೆಕ್ಯುರಿಟಿಯ ಬೆಲೆಯನ್ನು ಊಹಿಸುವುದು ಅಸಾಧ್ಯ. ದಿಕ್ಕನ್ನು ನಿರ್ಧರಿಸುವಲ್ಲಿ ಹಲವು ಅಂಶಗಳು ಮತ್ತು ಭಾಗೀದಾರರು ಇರುತ್ತಾರೆ.

ಹೀಗಾಗಿ, ಪ್ರತಿ ಹೂಡಿಕೆದಾರರೂ ‘ಮಾರ್ಕೆಟ್’ ಎಂದು ಕರೆಯಲಾಗುವ ಸರ್ವ ಪ್ರಮುಖ ಸಂಸ್ಥೆಯಿಂದ ಒಂದು ಮಟ್ಟದ ರಿಸ್ಕ್‌ ಎಂದಿಗೂ ಇರುತ್ತದೆ ಎಂಬುದನ್ನು ಪ್ರತಿ ಹೂಡಿಕೆದಾರರೂ ತಿಳಿದುಕೊಂಡಿರಬೇಕು. ಸಾಧ್ಯವಾದಷ್ಟೂ ಮಟ್ಟಿಗೆ ಈ ರಿಸ್ಕ್ ಕಡಿಮೆ ಮಾಡಲು ಮ್ಯೂಚುವಲ್‌ ಫಂಡ್‌ಗಳನ್ನು ವಿನ್ಯಾಸ ಮಾಡಲಾಗಿದೆ ಎಂದೂ ಅವರು ತಿಳಿದುಕೊಳ್ಳಬೇಕು.

436
ನಾನು ಹೂಡಿಕೆ ಮಾಡಲು ಸಿದ್ಧ