ಪ್ರತಿ ಮ್ಯೂಚುವಲ್ಫಂಡ್ಸ್ಕೀಮ್ ಒಂದು ಹೂಡಿಕೆ ಉದ್ದೇಶವನ್ನು ಹೊಂದಿದೆ ಮತ್ತು ಇದನ್ನು ನಿಗದಿತ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಾರೆ. ಇವರು ಈ ಫಂಡ್ನ ಉದ್ದೇಶ ಸಾಧನೆಗೆ ಪೂರಕ ಕಾರ್ಯನಿರ್ವಹಣೆ ಮಾಡಲು ಜವಾಬ್ದಾರರಾಗಿರುತ್ತಾರೆ.
ಫಂಡ್ನಿರ್ವಹಣೆ ತಂಡ ತೆಗೆದುಕೊಳ್ಳುವ ನಿರ್ಧಾರ ಹಾಗೂ ಮಾರ್ಕೆಟ್, ಈಕ್ವಿಟಿ ಅಥವಾ ಡೆಟ್ನ ನಡೆಯ ಮೇಲೆ ಈ ಕಾರ್ಯನಿರ್ವಹಣೆ ಬಾಧಿಸುತ್ತದೆ. ಇದೇ ರೀತಿ, ಪೋರ್ಟ್ಫೋಲಿಯೋ ಸೆಕ್ಯುರಿಟಿಗಳ ಆಯ್ಕೆಯನ್ನು ನಿರ್ದೇಶಿಸುವ ಪ್ರಕ್ರಿಯೆಯನ್ನು ಎಲ್ಲಾ ಫಂಡ್ನಿರ್ವಹಣೆ ತಂಡವು ಹೊಂದಿರುತ್ತದೆ. ಸ್ಕೀಮ್ನ ಕಾರ್ಯಕ್ಷಮತೆಯನ್ನು ಮಾರುಕಟ್ಟೆಯ ಸ್ಥಿತಿಗೆ ಅನುಗುನವಾಗಿ ಅಂತಿಮವಾಗಿ ಈ ಸೆಕ್ಯುರಿಟಿಗಳ ಕಾರ್ಯಕ್ಷಮತೆಯೇ ನಿರ್ಧರಿಸುತ್ತದೆ.
ಬೆಲೆ, ಗುಣಮಟ್ಟ, ರಿಸ್ಕ್, ಹಣಕಾಸುಗಳು, ಸುದ್ದಿ ಹರಿವು ಮತ್ತು ಆರ್ಥಿಕ ಅಭಿವೃದ್ಧಿಯ ಆಧಾರದಲ್ಲಿ ಸರಿಯಾದ ನಿರ್ಧಾರಗಳನ್ನು ಮಾಡಲು ಫಂಡ್ನಿರ್ವಹಣೆ ತಂಡವು ಉತ್ತಮ ಪ್ರಯತ್ನವನ್ನು ಮಾಡುತ್ತದೆ. ಉತ್ತಮ ಕೌಶಲವನ್ನು ಹೊಂದಿರುವ, ಉತ್ತಮ ಪ್ರಕ್ರಿಯೆಯನ್ನು ಅನುಸರಿಸುವ ಮತ್ತು ಸೂಕ್ತ ಅನುಭವವನ್ನು ಹೊಂದಿರುವ ತಂಡವು ಉತ್ತಮ ಕಾರ್ಯಕ್ಷಮತೆ ತೋರುತ್ತದೆ.
ವಾಸ್ತವ ಸನ್ನಿವೇಶದಲ್ಲಿ ಕಾರ್ಯಕ್ಷಮತೆಯನ್ನು ಅಳೆಯುವುದು ಅತ್ಯಂತ ಪ್ರಮುಖವಾಗಿದೆ. ಈಕ್ವಿಟಿ ಫಂಡ್ಗಳಿಗೆ ದೀರ್ಘಕಾಲೀನ, ಹೈಬ್ರಿಡ್ ಫಂಡ್ಗಳಿಗೆ ಮಧ್ಯಮಾವಧಿ ಅಥವಾ ಲಿಕ್ವಿಡ್ಫಂಡ್ಗಳಿಗೆ ಅತ್ಯಂತ ಕಡಿಮೆ ಅವಧಿ.