ಎಸ್‌ಐಪಿ ಪ್ರಯೋಜನಗಳು ಯಾವುವು?

ಎಸ್‌ಐಪಿ ಪ್ರಯೋಜನಗಳು ಯಾವುವು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು ಎಸ್‌ಐಪಿ (ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌) ಒಂದು ಮ್ಯೂಚುವಲ್ ಫಂಡ್‌ನಲ್ಲಿ ನಿರ್ದಿಷ್ಟ ಅಂತರದಲ್ಲಿ ಫಿಕ್ಸೆಡ್ ಮೊತ್ತವನ್ನು ಹೂಡಿಕೆ ಮಾಡಲು ಹೂಡಿಕೆದಾರರಿಗೆ ಅನುವು ಮಾಡುತ್ತದೆ. ಪ್ರಾಥಮಿಕವಾಗಿ, ಎಸ್‌ಐಪಿಗಳು ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ಗಳು ಎಂದರೆ ಸರಳವಾಗಿ ಸಣ್ಣ ಮೊತ್ತವನ್ನು ನಿಯತ ಕಾಲದಲ್ಲಿ ಹೂಡಿಕೆ ಮಾಡುವುದು ಎಂದರ್ಥ.

ಎಸ್‌ಐಪಿ ಪ್ರಯೋಜನಗಳಲ್ಲಿ ಪ್ರಮುಖವಾದವುಗಳೆಂದರೆ:

- ಇದು ಯಾವುದೇ ಹೂಡಿಕೆದಾರರಿಗೆ ಅನುಕೂಲಕರ ಹೂಡಿಕೆ ಆಯ್ಕೆಯಾಗಿದೆ. ಏಕೆಂದರೆ, ಹೂಡಿಕೆ ಮಾಡುವ ಮೊತ್ತ, ಹೂಡಿಕೆಯ ಆವರ್ತನ ಮತ್ತು ಹೂಡಿಕೆಯ ಅವಧಿಯನ್ನು ಆಯ್ಕೆ ಮಾಡಲು ಅವರಿಗೆ ಅವಕಾಶ ಸಿಗುತ್ತದೆ. ಕೈಯಲ್ಲಿ ಒಟ್ಟಾರೆ ಮೊತ್ತವನ್ನು ಹೊಂದಿಲ್ಲದ ಹೂಡಿಕೆದಾರರಿಗೆ ಇದು ಅನುಕೂಲಕರ ವಿಧಾನವಾಗಿದೆ.

- ಪ್ರತಿ ತಿಂಗಳಿಗೆ ರೂ. 100 ರಷ್ಟು ಕಡಿಮೆ ಮೊತ್ತದಿಂದ ಹೂಡಿಕೆದಾರರು ಹೂಡಿಕೆ ಮಾಡುವುದನ್ನು ಆರಂಭಿಸಬಹುದು.
- ಇದು ವ್ಯಕ್ತಿಗಳಲ್ಲಿ ಶಿಸ್ತುಬದ್ಧ ಹೂಡಿಕೆಯ ಹವ್ಯಾಸವನ್ನು ಮೂಡಿಸುತ್ತದೆ. ಪ್ರತಿ ದಿನ, ವಾರ, ತಿಂಗಳು ಅಥವಾ ತ್ರೈಮಾಸಿಕದಲ್ಲಿ ಆಯ್ಕೆ ಮಾಡಿದ ಆವರ್ತನದಲ್ಲಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆದಾರರು ತೆಗೆದಿಡಬೇಕಾಗುತ್ತದೆ. 
- ರೂಪಾಯಿ ವೆಚ್ಚ ಸರಾಸರಿ ಮಾಡುವಿಕೆಯು ಎಸ್‌ಐಪಿ ಹೂಡಿಕೆಯ ಇನ್ನೊಂದು ಪ್ರಯೋಜನವಾಗಿದೆ. ಕಾಲಾನಂತರದಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ನಿಮ್ಮ ಹೂಡಿಕೆಯ ವೆಚ್ಚವನ್ನು ಸರಾಸರಿ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ. ಇದರಿಂದ ಮಾರ್ಕೆಟ್‌ನಲ್ಲಿನ ಅಸ್ಥಿರತೆಯನ್ನು ಒಂದು ಹಂತಕ್ಕೆ ನಿವಾರಿಸಬಹುದು. 
- ದೀರ್ಘ ಅವಧಿಯವರೆಗೆ ವ್ಯಕ್ತಿಯು ಹೂಡಿಕೆ ಮಾಡಿದಾಗ ಸಂಚಯದ ಶಕ್ತಿಯನ್ನು ಎಸ್‌ಐಪಿಗಳು ಒದಗಿಸುತ್ತವೆ.

ಹಕ್ಕು ನಿರಾಕರಣೆ
ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

285
ನಾನು ಹೂಡಿಕೆ ಮಾಡಲು ಸಿದ್ಧ