ಇಂಡೆಕ್ಸ್‌ಡ್‌ ಫಂಡ್‌ಗಳ ಮಿತಿಗಳು ಯಾವುವು?

ಇಂಡೆಕ್ಸ್‌ಡ್‌ ಫಂಡ್‌ಗಳ ಮಿತಿಗಳು ಯಾವುವು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಇಂಡೆಕ್ಸ್‌ ಫಂಡ್‌ಗಳು ತಮ್ಮ ಪ್ಯಾಸಿವ್ ಶೈಲಿಯಿಂದಾಗಿ ಮೂರು ಮುಖ್ಯ ಅನಾನುಕೂಲತೆಗಳನ್ನು ಹೊಂದಿರುತ್ತವೆ. ಮಾರ್ಕೆಟ್‌ನ ಕುಸಿತವನ್ನು ನಿರ್ವಹಿಸುವಲ್ಲಿ ಫ್ಲೆಕ್ಸಿಬಿಲಿಟಿಯನ್ನು ಫಂಡ್‌ ಮ್ಯಾನೇಜರ್‌ಗೆ ಒದಗಿಸುವುದಿಲ್ಲ. ಅನುಕೂಲಕರವಲ್ಲದ ಆರ್ಥಿಕ ಅಥವಾ ಮಾರ್ಕೆಟ್‌ ಸ್ಥಿತಿಗಳಿಂದಾಗಿ ನೆಗೆಟಿವ್ ರಿಟರ್ನ್ಸ್‌ ಅನ್ನು ಫಂಡ್ ಪ್ರತಿಫಲಿಸುತ್ತಿದ್ದರೆ, ಇಳಿಕೆ ಗತಿಯನ್ನು ಉತ್ತಮವಾಗಿ ನಿರ್ವಹಿಸಲು ಸ್ಟಾಕ್‌ಗಳ ಆಯ್ಕೆಯಲ್ಲಿ ಫಂಡ್‌ ಮ್ಯಾನೇಜರ್‌ಗೆ ಅವಕಾಶವಿರುತ್ತದೆ. ಆದರೆ, ಮಾರ್ಕೆಟ್‌ ಮೇಲೆ ಏರುವಾಗ ಮತ್ತು ಇಳಿಯುವಾಗಲೂ ಇಂಡೆಕ್ಸ್ ಫಂಡ್‌ ಅನ್ನು ಬೆಂಚ್‌ಮಾರ್ಕ್‌ ಅನುಸರಿಸಬೇಕು.

ಸಕ್ರಿಯ ಫಂಡ್ ಮ್ಯಾನೇಜರ್‌ ಎಂದಿಗೂ ಅಲ್ಫಾ ನಿರ್ವಹಣೆಗೆ ಅಂದರೆ, ಫಂಡ್‌ನ ಬೆಂಚ್‌ಮಾರ್ಕ್‌ಗಿಂತ ಹೆಚ್ಚಿನ ರಿಟರ್ನ್‌ ಪಡೆಯುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ, ಆಕ್ಟಿವ್ ಫಂಡ್‌ಗಳು ಹೆಚ್ಚುವರಿ ರಿಸ್ಕ್ ತೆಗೆದುಕೊಂಡು ತಮ್ಮ ಬೆಂಚ್‌ಮಾರ್ಕ್‌ಗಿಂತ ಹೆಚ್ಚಿನ ರಿಟರ್ನ್‌ ಅನ್ನು ಉತ್ಪಾದಿಸಬಹುದು. ಆದರೆ, ಇಂಡೆಕ್ಸ್‌ ಫಂಡ್‌ಗಳು ಕಡಿಮೆ ರಿಸ್ಕ್‌ನ ಉತ್ಪನ್ನಗಳಾಗಿದ್ದು, ಸಂಬಂಧಿಸಿದ ಬೆಂಚ್‌ಮಾರ್ಕನ್ನಷ್ಟೇ ಅನುಕರಿಸುತ್ತವೆ. ಹೀಗಾಗಿ, ಬೆಂಚ್‌ಮಾರ್ಕ್ ಇಂಡೆಕ್ಸ್‌ನ ಹೆಚ್ಚುವರಿಯಲ್ಲಿ ರಿಟರ್ನ್‌ ಬಯಸುತ್ತಿರುವ ಹೂಡಿಕೆದಾರರು, ಸರಾಸರಿ ಮಾರ್ಕೆಟ್‌ ರಿಟರ್ನ್‌ ಅನ್ನು ಜನರೇಟ್‌ ಮಾಡುವುದರಿಂದ ಇಂಡೆಕ್ಸ್ ಫಂಡ್ ಅನ್ನು ದೂರವಿಡುವುದು ಉತ್ತಮ.

ಇಂಡೆಕ್ಸ್‌ ಅನ್ನು ಅನುಸರಿಸಿ, ಅದಕ್ಕೆ ಅನುಗುಣವಾಗಿ ರಿಟರ್ನ್ಸ್ ಅನ್ನು ನೀಡುವ ಉದ್ದೇಶವನ್ನೇ ಇಂಡೆಕ್ಸ್ ಫಂಡ್‌ಗಳು ಹೊಂದಿದ್ದರೂ, ವಾಸ್ತವದಲ್ಲಿ ಟ್ರ್ಯಾಕಿಂಗ್ ದೋಷದಿಂದಾಗಿ ರಿಟರ್ನ್ಸ್‌ನಲ್ಲಿ ತಮ್ಮ ಬೆಂಚ್‌ಮಾರ್ಕ್‌ಗಿಂತ ಹಿಂದೆಯೇ ಉಳಿಯುತ್ತವೆ. ಇಂಡೆಕ್ಸ್‌ನಲ್ಲಿ ಬದಲಾವಣೆಯಾದಾಗ ಪ್ರತಿ ಬಾರಿ ಪೋರ್ಟ್‌ಫೋಲಿಯೋ ಹೊಂದಾಣಿಕೆ ಮಾಡಿದಾಗಲೂ ಇಂಡೆಕ್ಸ್ ಫಂಡ್‌ ವೆಚ್ಚ ಮಾಡಬೇಕಾಗುತ್ತದೆ. ಆದರೆ ಇಂಡೆಕ್ಸ್‌ನಲ್ಲಿ ಕಾಂಪೊಸಿಶನ್ ಬದಲಾವಣೆಯಾದಾಗ ಅದರಲ್ಲಿ ವಹಿವಾಟು ವೆಚ್ಚ ಇರುವುದಿಲ್ಲ. ಇಂಡೆಕ್ಸ್ ಫಂಡ್‌ಗೆ ವಿಧಿಸಲ್ಪಡುವ ವಹಿವಾಟು ವೆಚ್ಚದಿಂದಾಗಿ, ರಿಟರ್ನ್‌ ಮತ್ತು ಬೆಂಚ್‌ಮಾರ್ಕ್‌ ರಿಟರ್ನ್‌ ಅನ್ನು ಹೋಲಿಸಿದರೆ ರಿಟರ್ನ್ ಕಡಿಮೆಯಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ