ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಎಂದರೇನು?

ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳು ಎಂದರೇನು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್ಗಳ ಬಗ್ಗೆ ಜಾಗೃತಿ ಹೆಚ್ಚುತ್ತಿರುವುದು ಮತ್ತು ಖಚಿತ ಉಳಿತಾಯ ಉತ್ಪನ್ನಗಳ ಮೇಲಿನ ಬಡ್ಡಿ ದರ ಕುಸಿಯುತ್ತಿರುವುದರಿಂದ, ಬ್ಯಾಂಕ್ ಸ್ಥಿರ ಠೇವಣಿಗಳು, ಪಿಪಿಎಫ್ಗಳು ಮತ್ತು ಎನ್ಎಸ್ಸಿಗಳಂತಹ ಸಾಂಪ್ರದಾಯಿಕ ಉತ್ಪನ್ನಗಳನ್ನು ಬಳಸುತ್ತಿದ್ದ ರಿಸ್ಕ್ ತೆಗೆದುಕೊಳ್ಳಲು ಬಯಸದ ಹೂಡಿಕೆದಾರರು ಡೆಟ್ ಫಂಡ್ಗಳ ಕಡೆಗೆ ಮುಖ ಮಾಡಿದ್ದಾರೆ. ಜನಪ್ರಿಯ ಈಕ್ವಿಟಿ ಫಂಡ್ಗಳಿಗೆ ಹೋಲಿಸಿದರೆ ಈ ಡೆಟ್ ಫಂಡ್ಗಳು ಕಡಿಮೆ ಅಸ್ಥಿರವಾಗಿರುತ್ತವೆ ಮತ್ತು ಅವರ ಸ್ಥಿರ ಠೇವಣಿಗಳು, ಪಿಪಿಎಫ್ಗಳು ಮತ್ತು ಎನ್ಎಸ್ಸಿಗಳಿಗೆ ಹೋಲಿಸಿದರೆ ಹೆಚ್ಚು ತೆರಿಗೆ ದಕ್ಷವಾಗಿವೆ ಹಾಗೂ ಉತ್ತಮ ರಿಟರ್ನ್ಸ್ ಅನ್ನು ಒದಗಿಸುವ ಸಾಧ್ಯತೆ ಹೊಂದಿದೆ ಎನ್ನುವುದನ್ನು ಇಂತಹ ಹೂಡಿಕೆದಾರರು ಕಂಡುಕೊಂಡಿದ್ದಾರೆ. ಆದರೆ, ಹೂಡಿಕೆದಾರರಿಗೆ ಡೀಫಾಲ್ಟ್ ರಿಸ್ಕ್ ಈಗಲೂ ಇರುತ್ತದೆ. ಅಂದರೆ, ಅಸಲು ಮತ್ತು ಬಡ್ಡಿ ಪಾವತಿ ಕಳೆದುಕೊಳ್ಳುವುದು ಮತ್ತು ಬಡ್ಡಿ ದರದ ರಿಸ್ಕ್, ಅಂದರೆ ಬಡ್ಡಿ ದರದಲ್ಲಿ ಬದಲಾವಣೆಯಿಂದಾಗಿ ಬೆಲೆ ಏರಿಳಿತವಾಗಬಹುದು.

ಫಂಡ್ನ ಮೆಚ್ಯುರಿಟಿ ದಿನಾಂಕಕ್ಕೆ ತಮ್ಮ ಪೋರ್ಟ್ಫೋಲಿಯೋವನ್ನು ಹೊಂದಿಸುವ ಮೂಲಕ ಡೆಟ್ ಫಂಡ್ನಲ್ಲಿ ಇರುವ ರಿಸ್ಕ್ಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಟಾರ್ಗೆಟ್ ಮೆಚ್ಯೂರಿಟಿ ಫಂಡ್ಗಳು (ಟಿಎಂಎಫ್ಗಳು) ಸಹಾಯ ಮಾಡುತ್ತವೆ. ಇವು ಪ್ಯಾಸಿವ್ ಡೆಟ್ ಫಂಡ್ಗಳಾಗಿದ್ದು, ಇದಕ್ಕೆ ಹೊಂದಿಕೊಂಡಿರುವ ಬಾಂಡ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಹೀಗಾಗಿ, ಇಂತಹ ಫಂಡ್ಗಳ ಪೋರ್ಟ್ಫೋಲಿಯೋದಲ್ಲಿ ಬಾಂಡ್ ಇಂಡೆಕ್ಸ್ನಲ್ಲಿರುವ ಬಾಂಡ್ಗಳು ಇರುತ್ತವೆ ಮತ್ತು ಫಂಡ್ ಹೇಳಿರುವ ಮೆಚ್ಯುರಿಟಿಯನ್ನು ಹೊಂದಿರುವ ಮೆಚ್ಯುರಿಟಿಗಳನ್ನು ಈ ಬಾಂಡ್ಗಳು ಹೊಂದಿರುತ್ತವೆ. ಪೋರ್ಟ್ಫೋಲಿಯೋದಲ್ಲಿರುವ ಬಾಂಡ್ಗಳನ್ನು ಮೆಚ್ಯುರಿಟಿಯವರೆಗೆ ಇಟ್ಟುಕೊಳ್ಳಲಾಗುತ್ತದೆ ಮತ್ತು ಈ ಇಟ್ಟುಕೊಳ್ಳುವ ಅವಧಿಯಲ್ಲಿ ಪಡೆದ ಎಲ್ಲ ಬಡ್ಡಿ ಪಾವತಿಗಳನ್ನು ಫಂಡ್ನಲ್ಲಿ ಪುನಃ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಎಫ್ಎಂಪಿಗಳ ರೀತಿ ಸಂಚಯ ವಿಧಾನದಲ್ಲಿ ಟಾರ್ಗೆಟ್ ಮೆಚ್ಯುರಿಟಿ ಬಾಂಡ್ ಫಂಡ್ಗಳು ಕೆಲಸ ಮಾಡುತ್ತವೆ. ಆದರೆ, ಎಫ್ಎಂಪಿಗಳಿಗಿಂತ ಭಿನ್ನವಾಗಿ, ಟಿಎಂಎಫ್ಗಳು ಓಪನ್ ಎಂಡೆಡ್ ಆಗಿವೆ ಮತ್ತು ಟಾರ್ಗೆಟ್ ಮೆಚ್ಯುರಿಟಿ ಡೆಟ್ ಇಂಡೆಕ್ಸ್ ಫಂಡ್ಗಳು ಅಥವಾ ಟಾರ್ಗೆಟ್ ಮೆಚ್ಯುರಿಟಿ ಬಾಂಡ್ ಇಟಿಎಫ್ಗಳ ಪೈಕಿ ಒಂದನ್ನು ಒದಗಿಸಲಾಗುತ್ತದೆ. ಹೀಗಾಗಿ, ಎಫ್ಎಂಪಿಗಳಿಗಿಂತ ಟಿಎಂಎಫ್ಗಳು ಹೆಚ್ಚು ಲಿಕ್ವಿಡಿಟಿಯನ್ನು ಒದಗಿಸುತ್ತವೆ.

ಅವಧಿಯ ವಿಚಾರದಲ್ಲಿ ಟಿಎಂಎಫ್ಗಳ ಪೋರ್ಟ್ಫೋಲಿಯೋ ಒಂದೇ ರೀತಿಯದ್ದಾಗಿರುತ್ತದೆ. ಯಾಕೆಂದರೆ, ಫಂಡ್ನ ಪೋರ್ಟ್ಫೋಲಿಯೋದಲ್ಲಿರುವ ಎಲ್ಲ ಬಾಂಡ್ಗಳೂ ಮೆಚ್ಯುರಿಟಿಯವರೆಗೆ ಇರುತ್ತವೆ ಮತ್ತು ಫಂಡ್ ಹೇಳಿದ ಮೆಚ್ಯುರಿಟಿಯ ಸಮಯಕ್ಕೇ ಅವು ಮೆಚ್ಯೂರ್ ಆಗುತ್ತವೆ. ಮೆಚ್ಯುರಿಟಿಯವರೆಗೆ ಬಾಂಡ್ಗಳನ್ನು ಹೊಂದಿರುವ ಮೂಲಕ, ಕಾಲ ಸರಿದಂತೆ ಫಂಡ್ನ ಅವಧಿಯು ಕಡಿಮೆಯಾಗುತ್ತ ಸಾಗುತ್ತದೆ ಮತ್ತು ಬಡ್ಡಿ ದರದಲ್ಲಿ ಉಂಟಾಗುವ ಬದಲಾವಣೆಯಿಂದಾಗಿ ಹೂಡಿಕೆದಾರರಿಗೆ ಹೆಚ್ಚು ಬಾಧೆಯಾಗುವುದಿಲ್ಲ.

 ಟಿಎಂಎಫ್ಗಳನ್ನು ಸದ್ಯಕ್ಕೆ ಸರ್ಕಾರಿ ಸೆಕ್ಯುರಿಟಿಗಳು , ಪಿಎಸ್ಯು ಬಾಂಡ್ಗಳು ಮತ್ತು ಎಸ್ಡಿಎಲ್ಗಳಲ್ಲಿ (ರಾಜ್ಯ ಅಭಿವೃದ್ಧಿ ಸಾಲಗಳ) ಮೇಲೆ ಹೂಡಿಕೆ ಮಾಡಲು ನಿರ್ದೇಶಿತವಾಗಿವೆ. ಹೀಗಾಗಿ, ಇತರ ಡೆಟ್ ಫಂಡ್ಗಳಿಗೆ ಹೋಲಿಸಿದರೆ ಕಡಿಮೆ ಡೀಫಾಲ್ಟ್ ರಿಸ್ಕ್ ಹೊಂದಿರುತ್ತವೆ. ಈ ಫಂಡ್ಗಳು ಓಪನ್ ಎಂಡೆಡ್ ಆಗಿರುವುದರಿಂದ, ಡೀಫಾಲ್ಟ್ ಆಗುವ ಸಾಧ್ಯತೆ ಅಥವಾ ಕ್ರೆಡಿಟ್ ಇಳಿಕೆಯಂತಹ ವಿಪರೀತ ಬೆಳವಣಿಗೆಯು ಬಾಂಡ್ ವಿತರಕರಲ್ಲಿ ಉಂಟಾದಾಗ ಹೂಡಿಕೆಯನ್ನು ಹೂಡಿಕೆದಾರರು ಹಿಂಪಡೆಯುವ ಅವಕಾಶವನ್ನು ಹೊಂದಿರುತ್ತಾರೆ.

ಓಪನ್ ಎಂಡೆಡ್ ಆಗಿರುವುದು ಮತ್ತು ಲಿಕ್ವಿಡಿಟಿಯ ಸಾಧ್ಯತೆಯನ್ನು ಹೊಂದಿದ್ದರೂ, ಟಾರ್ಗೆಟ್ ಮೆಚ್ಯುರಿಟಿ ಫಂಡ್ಗಳನ್ನು ಮೆಚ್ಯುರಿಟಿಯವರೆಗೆ ಇಟ್ಟುಕೊಳ್ಳುವುದು ಸೂಕ್ತ. ಏಕೆಂದರೆ, ರಿಟರ್ನ್ನ ಊಹಾತ್ಮಕತೆಯನ್ನು ನೀಡುತ್ತದೆ. ಮೊದಲ ಬಾರಿಗೆ ಸಾಂಪ್ರದಾಯಿಕ ಡೆಪಾಸಿಟ್ಗಳಿಂದ ಡೆಟ್ ಫಂಡ್ಗಳಿಗೆ ಹೂಡಿಕೆದಾರರು ಬದಲಾಗುವ ಪ್ರಮುಖ ಅಂಶ ಇದಾಗಿದೆ.

436
ನಾನು ಹೂಡಿಕೆ ಮಾಡಲು ಸಿದ್ಧ