ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳನ್ನು ರಿಡೀಮ್ ಮಾಡುವಾಗ ಯಾವ ವೆಚ್ಚವನ್ನು ಭರಿಸಬೇಕಾಗುತ್ತದೆ

ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳನ್ನು ರಿಡೀಮ್ ಮಾಡುವಾಗ ಯಾವ ವೆಚ್ಚವನ್ನು ಭರಿಸಬೇಕಾಗುತ್ತದೆ zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಓಪನ್ ಎಂಡೆಡ್‌ ಮ್ಯೂಚುವಲ್‌ ಫಂಡ್‌ಗಳು ಯಾವುದೇ ವೆಚ್ಚವಿಲ್ಲದೇ ಕೆಲವು ಸಮಯದ ನಂತರ ಯೂನಿಟ್‌ಗಳನ್ನು ರಿಡೀಮ್ ಮಾಡಲು ಹೂಡಿಕೆದಾರರಿಗೆ ಅನುವು ಮಾಡುತ್ತದೆ. ಈ ನಿಗದಿತ ಅವಧಿಗೂ ಮುನ್ನ ಹೂಡಿಕೆದಾರರು ತಮ್ಮ ಯೂನಿಟ್‌ಗಳನ್ನು ರಿಡೀಮ್ ಮಾಡಿಕೊಳ್ಳಲು ಬಯಸಿದರೆ ಎಕ್ಸಿಟ್ ಲೋಡ್ ವಿಧಿಸಲಾಗುತ್ತದೆ. ಫಂಡ್‌ನಲ್ಲಿ ನಿರ್ದಿಷ್ಟ ಸಮಯವನ್ನು ಪೂರ್ಣಗೊಳಿಸುವುದಕ್ಕೂ ಮೊದಲೇ ತಮ್ಮ ಹೂಡಿಕೆಯನ್ನು ಹೂಡಿಕೆದಾರರು ಮಾರಾಟ ಮಾಡಿದರೆ ಮ್ಯೂಚುವಲ್‌ ಫಂಡ್‌ಗಳು ಎಕ್ಸಿಟ್ ಲೋಡ್ ಅನ್ನು ವಿಧಿಸುತ್ತವೆ. ದೀರ್ಘಕಾಲೀನ ಹೋಲ್ಡಿಂಗ್ ಅವಧಿ ಅಗತ್ಯವಿರುವ ಫಂಡ್‌ಗಳಿಗೆ ಅಲ್ಪಾವಧಿ ಗುರಿಗಳನ್ನು ಹೊತ್ತು ಹೂಡಿಕೆ ಮಾಡುವ ಹೂಡಿಕೆದಾರರನ್ನು ನಿರುತ್ಸಾಹಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಲಿಕ್ವಿಡ್ ಫಂಡ್‌ಗಳು ಸಾಮಾನ್ಯವಾಗಿ ಎಕ್ಸಿಟ್ ಲೋಡ್ ಹೊಂದಿರುವುದಿಲ್ಲ.

ಸ್ಕೀಮ್ ಮಾಹಿತಿ ದಾಖಲೆಯಲ್ಲಿ ನಮೂದಿಸಿದಂತೆ ನೀಡಿದ ಸಮಯಕ್ಕೂ ಮೊದಲು ಯೂನಿಟ್‌ಗಳನ್ನು ರಿಡೀಮ್ ಮಾಡಿದರೆ ಎನ್‌ಎವಿ ಶೇಕಡಾವಾರು ರೂಪದಲ್ಲಿ ಎಕ್ಸಿಟ್ ಲೋಡ್ ವಿಧಿಸಲಾಗುತ್ತದೆ. ಅಂದರೆ, ಒಂದು ವರ್ಷದೊಳಗೆ ಹೂಡಿಕೆಯನ್ನು ರಿಡೀಮ್ ಮಾಡಿದರೆ ಸ್ಕೀಮ್ 1% ಎಕ್ಸಿಟ್ ಲೋಡ್ ಹೊಂದಿದೆ. ಸ್ಕೀಮ್‌ನ ಎನ್‌ಎವಿ ರೂ. 100 ಆಗಿದ್ದರೆ ಮತ್ತು ಒಂದು ವರ್ಷಕ್ಕೂ ಮೊದಲೇ ನೀವು ರಿಡೀಮ್ ಮಾಡಿದರೆ ನಿಮ್ಮ ಹೋಲ್ಡಿಂಗ್‌ನ ಪ್ರತಿ ಯೂನಿಟ್‌ ಮೇಲೆ ರೂ. 99 ಮಾತ್ರ ಸ್ವೀಕರಿಸುತ್ತೀರಿ. ಯಾಕೆಂದರೆ 1% ಅನ್ನು ಅವಧಿಗೂ ಪೂರ್ವ ರಿಡೆಂಪ್ಷನ್‌ ಮಾಡಿದ್ದಕ್ಕಾಗಿ ಕಡಿತಗೊಳಿಸಲಾಗುತ್ತದೆ.

ನೀವು ಮಾಡಿದ ಹೂಡಿಕೆಯ ವಿಧ ಮತ್ತು ಹೂಡಿಕೆಯನ್ನು ಎಷ್ಟು ಕಾಲದವರೆಗೆ ಮಾಡಿದ್ದೀರಿ ಅಂದರೆ, ಅಲ್ಪಾವಧಿ ಅಥವಾ ದೀರ್ಘಾವಧಿ ಎಂಬುದನ್ನು ಆಧರಿಸಿ ಕ್ಯಾಪಿಟಲ್ ಗೇನ್ಸ್‌ ತೆರಿಗೆಯನ್ನು ನೀವು ಭರಿಸಬೇಕಾಗುತ್ತದೆ. ಈಕ್ವಿಟಿ ಆಧರಿತ ವಹಿವಾಟುಗಳು ಕೂಡ ಎಸ್‌ಟಿಟಿಗೆ (ಸೆಕ್ಯುರಿಟೀಸ್‌ ವಹಿವಾಟು ತೆರಿಗೆ) ಒಳಪಟ್ಟಿರುತ್ತವೆ. ಈ ಫಂಡ್‌ಗಳಿಂದ ನೀವು ಯೂನಿಟ್‌ಗಳನ್ನು ಖರೀದಿ ಅಥವಾ ಮಾರಾಟ ಮಾಡಿದಾಗಲೂ ನೀವು ನಿಮ್ಮ ವಹಿವಾಟಿಗೆ ಸೇರುವ ಎಸ್‌ಟಿಟಿ ಅನ್ನು ಪಾವತಿ ಮಾಡುತ್ತೀರಿ.

436
ನಾನು ಹೂಡಿಕೆ ಮಾಡಲು ಸಿದ್ಧ