ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಯಾವ ಮಾಹಿತಿ ಮತ್ತು ರಿಸ್ಕ್ ಮಾನದಂಡಗಳನ್ನು ಪರಿಗಣಿಸಬೇಕು?

ಈಕ್ವಿಟಿ ಫಂಡ್ನಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ಯಾವ ಮಾಹಿತಿ ಮತ್ತು ರಿಸ್ಕ್ ಮಾನದಂಡಗಳನ್ನು ಪರಿಗಣಿಸಬೇಕು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಿಮ್ಮ ಪೋರ್ಟ್ಫೋಲಿಯೋಗೆ ಒಂದು ಈಕ್ವಿಟಿ ಫಂಡ್ ಅನ್ನು ಆಯ್ಕೆ ಮಾಡುವುದಕ್ಕೆ ಎರಡು ಹಂತಗಳನ್ನು ಹೊಂದಿರುವ ಸೈದ್ಧಾಂತಿಕ ಆಯ್ಕೆ ಪ್ರಕ್ರಿಯೆ ಅಗತ್ಯವಿರುತ್ತದೆ. ಮೊದಲನೆಯದು ನಿಮ್ಮ ಬಗ್ಗೆ ಆಗಿರುತ್ತದೆ ಮತ್ತು ನಿಮ್ಮ ಈಕ್ವಿಟಿ ಪೋರ್ಟ್ಫೋಲಿಯೋದಲ್ಲಿ ಅಥವಾ ನಿಮ್ಮ ಹಣಕಾಸು ಗುರಿಯಲ್ಲಿ ಕಾಲಾವಧಿ, ಈಕ್ವಿಟಿ ಫಂಡ್ ಹೂಡಿಕೆಯ ವಿಧ ಮತ್ತು ನಿಮ್ಮ ರಿಸ್ಕ್ ತಾಳಿಕೊಳ್ಳುವಿಕೆಯ ವಿಶ್ಲೇಷಣೆಯನ್ನು ಮಾಡುವುದರೊಂದಿಗೆ ಈಕ್ವಿಟಿ ಮ್ಯೂಚುವಲ್ ಫಂಡ್ಗೆ ಇರುವ ಅಗತ್ಯವನ್ನು ಗುರುತಿಸುವುದರೊಂದಿಗೆ ಆರಂಭವಾಗುತ್ತದೆ. ಈ ಮೂರು ಸಂಗತಿಗಳು ಒಮ್ಮೆ ಸುಸ್ಥಿತಿಗೆ ಬಂದ ನಂತರ, ಈ ಪೈಕಿ ಸೂಕ್ತವಾದ ಫಂಡ್ ಅನ್ನು ಆಯ್ಕೆ ಮಾಡುವುದು ಪ್ರಕ್ರಿಯೆಯಲ್ಲಿ ನಂತರದ ಹಂತವಾಗಿರುತ್ತದೆ. ಅಂದರೆ ಇದು ಎರಡನೆಯ ಹಂತವಾಗಿರುತ್ತದೆ.

ಎರಡನೇ ಹಂತದಲ್ಲಿ, ಫಂಡ್ಗಳಲ್ಲಿನ ನಿರ್ದಿಷ್ಟ ಮಾಹಿತಿಯನ್ನು ಹುಡುಕಿ ವಿವಿಧ ರಿಸ್ಕ್ ಮಾನದಂಡಗಳನ್ನು ವಿಶ್ಲೇಷಿಸುವ ಮೂಲಕ ಹೆಚ್ಚು ಗುಣಾತ್ಮಕ ಅನುಸಂಧಾನವನ್ನು ಬಳಸಿ ಎಲ್ಲ ಸೂಕ್ತ ಫಂಡ್ಗಳನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತದೆ. ಫಂಡ್ ಪೋರ್ಟ್ಫೋಲಿಯೋ, ವಿಂಟೇಜ್, ಫಂಡ್ ಮ್ಯಾನೇಜರ್ಗಳು, ವೆಚ್ಚ ಅನುಪಾತ, ಅದರ ಬೆಂಚ್ಮಾರ್ಕ್ ಮತ್ತು ಕಾಲಾಂತರದಲ್ಲಿ ಅದರ ಬೆಂಚ್ಮಾರ್ಕ್ಗೆ ಸಂಬಂಧಿಸಿದಂತೆ ಫಂಡ್ ಹೇಗೆ ಕಾರ್ಯನಿರ್ವಹಿಸಿದೆ ಎಂಬುದರ ಮಾಹಿತಿಯನ್ನು ನೀವು ನೋಡಬೇಕು. 

ಪೋರ್ಟ್ಫೋಲಿಯೋವನ್ನು ನೀವು ನೋಡಿದಾಗ, ವಲಯ ನಿಯೋಜನೆ ಮತ್ತು ಸ್ಟಾಕ್ ಆಯ್ಕೆಯ ವಿಚಾರದಲ್ಲಿ ಇದು ಎಷ್ಟು ವೈವಿಧ್ಯಮಯವಾಗಿದೆ ಎಂದು ನೋಡಿ. ಇದನ್ನು ಫಂಡ್ನ ಅಗ್ರ 10 ಸೆಕ್ಟರ್ ಮತ್ತು ಸ್ಟಾಕ್ ಹೋಲ್ಡಿಂಗ್ ಮೂಲಕ ಅರಿಯಬಹುದು. ನೀವು ವಿಂಟೇಜ್ ಅನ್ನು ನೋಡಿದಾಗ, ಎಷ್ಟು ಆರ್ಥಿಕ ಆವರ್ತನಗಳನ್ನು ಫಂಡ್ ಎದುರಾಗಿದೆ ಎಂಬುದರ ಕಲ್ಪನೆಯನ್ನು ಇದು ನಿಮಗೆ ನೀಡುತ್ತದೆ. ಗೂಳಿ ಓಟದ ಸಮಯದಲ್ಲಿ ಬಹುತೇಕ ಫಂಡ್ಗಳು ಉತ್ತಮವಾಗಿಯೇ ಕಾರ್ಯನಿರ್ವಹಿಸುತ್ತವೆ. ಆದರೆ, ಗೂಳಿ ಮತ್ತು ಕರಡಿ ಓಟದ ಸಮಯದಲ್ಲಿ ಫಂಡ್ ಹೇಗೆ ಕಾರ್ಯನಿರ್ವಸಿದೆ ಎಂಬುದು ಪೋರ್ಟ್ಫೋಲಿಯೋದ ಸಹಿಷ್ಣುತೆಗೆ ಸೂಚ್ಯಂಕವಾಗಿರುತ್ತದೆ. ಫಂಡ್ನ ವಿಂಟೇಜ್ಗೂ ಫಂಡ್ ಮ್ಯಾನೇಜರ್ ಟ್ರ್ಯಾಕ್ ರೆಕಾರ್ಡ್ಗೂ ನೇರ ಸಂಪರ್ಕವಿರುತ್ತದೆ. ತನ್ನ ಟ್ರ್ಯಾಕ್ ರೆಕಾರ್ಡ್ ಕುರಿತ ಉತ್ತಮ ನೋಟಕ್ಕೆ ಫಂಡ್ ಮ್ಯಾನೇಜರ್ ನಿರ್ವಹಿಸಿರುವ ಇತರ ಫಂಡ್ಗಳನ್ನು ನೀವು ನೋಡಬಹುದು.

ಕಾರ್ಯಾಚರಣೆ ದೃಷ್ಟಿಯಿಂದ ಫಂಡ್ ಅನ್ನು ಎಷ್ಟು ಚೆನ್ನಾಗಿ  ನಿರ್ವಹಿಸಲಾಗಿದೆ ಎಂಬುದರ ಪ್ರಮುಖ ಸೂಚಕವೇ ವೆಚ್ಚ ಅನುಪಾತವಾಗಿದ್ದು, ಇದು ಫಂಡ್ ಕಾರ್ಯಕ್ಷಮತೆಗಿಂತ ವಿಭಿನ್ನವಾಗಿದೆ. ಕಡಿಮೆ ವೆಚ್ಚ ಅನುಪಾತವು ಹೂಡಿಕೆದಾರರಿಗೆ ಉತ್ತಮವಾಗಿದೆ.

ಮುಂದುವರಿದು, ಪ್ರಮಾಣಿತ ವ್ಯತ್ಯಯ ಮತ್ತು ಬೀಟಾದಂತಹ ಪ್ರಮುಖ ಈಕ್ವಿಟಿ ಫಂಡ್ ರಿಸ್ಕ್ ಸೂಚ್ಯಂಕಗಳನ್ನು ನೋಡಿ. ರಿಟರ್ನ್ಗಳಲ್ಲಿ ನಿರೀಕ್ಷಿಸಿದ ರಿಟರ್ನ್ಗಳು ಅಥವಾ ಫ್ಲಕ್ಚುವೇಶನ್ಗಳಲ್ಲಿ ಫಂಡ್ನ ಸ್ಥಿತ್ಯಂತರದ ಬಗ್ಗೆ ಒಂದು ಐಡಿಯಾವನ್ನು ಹಿಂದಿನದು ನೀಡುತ್ತದೆ. ಪ್ರಮಾಣಿತ ವ್ಯತ್ಯಯ ಹೆಚ್ಚಿದ್ದಷ್ಟೂ ನೀವು ಫಂಡ್ಗಳ ರಿಟರ್ನ್ಗಳಲ್ಲಿ ಹೆಚ್ಚು ಸ್ಥಿತ್ಯಂತರವನ್ನು ನಿರೀಕ್ಷಿಸಬಹುದು. ಅಂದರೆ, ಫಂಡ್ನ ಸರಾಸರಿ ನಿರೀಕ್ಷಿತ ರಿಟರ್ನ್ನಿಂದ ಎರಡೂ ವಿಧಗಳಲ್ಲಿ ರಿಟರ್ನ್ ಹೆಚ್ಚು ಫ್ಲಕ್ಚುವೇಟ್ ಆಗುವ (ಧನಾತ್ಮಕ ಮತ್ತು ಋಣಾತ್ಮಕ) ಸಾಧ್ಯತೆ ಇರುತ್ತದೆ. ಮಾರುಕಟ್ಟೆ ಚಲನೆಗಳಿಗೆ ಫಂಡ್ ಹೊಂದಿರುವ ಸಂವೇದನಾಶೀಲತೆಗೆ ಬೀಟಾ ಒಂದು ಸೂಚಕವಾಗಿದೆ. ಬೀಟಾ >1 ಎಂಬುದು ಫಂಡ್ನ ಎನ್ಎವಿಯು ಮಾರುಕಟ್ಟೆ ಚಲನೆಗೆ ಹೆಚ್ಚು ಸಂವೇದನಾಶೀಲವಾಗಿದೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ, ಮಾರುಕಟ್ಟೆ ಏರುತ್ತಿರುವ ಸಂದರ್ಭದಲ್ಲಿ ಮಾರ್ಕೆಟ್ಗಿಂತ ಹೆಚ್ಚು ಏರುತ್ತದೆ ಮತ್ತು ಮಾರುಕಟ್ಟೆ ಇಳಿಯುವ ಸಮಯದಲ್ಲಿ ಮಾರ್ಕೆಟ್ ಇಳಿದಿದ್ದಕ್ಕಿಂತ ಹೆಚ್ಚು ಇಳಿಯುತ್ತದೆ. ಬೀಟಾ = 1 ಎಂಬುದು ಫಂಡ್ನ ಎನ್ಎವಿಯು ಮಾರುಕಟ್ಟೆ ಚಲನೆಗೆ ಪೂರಕವಾಗಿ ಚಲಿಸುತ್ತದೆ ಎಂದು ಸೂಚಿಸುತ್ತದೆ. ಕಡಿಮೆ ರಿಸ್ಕ್ನ ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಸಾಮಾನ್ಯವಾಗಿ ಬೀಟಾ <1 ಹೊಂದಿರುತ್ತವೆ.

ನಿಮ್ಮ ಪೋರ್ಟ್ಫೋಲಿಯೋವನ್ನು ಅಂತಿಮವಾಗಿ ಆಯ್ಕೆ ಮಾಡುವುದಕ್ಕೂ ಮುನ್ನ ಫಂಡ್ಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲು ಮತ್ತು ಅವುಗಳ ವಿಶ್ಲೇಷಣೆ ನಡೆಸಲು ನೀವು ಸ್ವಲ್ಪ ಸಮಯವನ್ನು ವೆಚ್ಚ ಮಾಡಿ ಅಥವಾ ಹಣಕಾಸು ಸಲಹೆಗಾರರ ಸಲಹೆಯನ್ನು ಪಡೆಯಿರಿ.

435
ನಾನು ಹೂಡಿಕೆ ಮಾಡಲು ಸಿದ್ಧ