ಕೆವೈಸಿ ಪ್ರಕ್ರಿಯೆ ಎಂದರೇನು?

ಕೆವೈಸಿ ಪ್ರಕ್ರಿಯೆ ಎಂದರೇನು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಕೆವೈಸಿ ಎಂಬುದು “ನೋ ಯುವರ್ ಕಸ್ಟಮರ್” (ನಿಮ್ಮ ಗ್ರಾಹಕರನ್ನು ಅರಿತುಕೊಳ್ಳಿ) ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಯಾವುದೇ ಹಣಕಾಸು ಸಂಸ್ಥೆಯಲ್ಲಿ ಖಾತೆ ತೆರೆಯುವಿಕೆ ಪ್ರಕ್ರಿಯೆ ನಡೆಸುವಾಗ ಈ ಪದಗುಚ್ಛವನ್ನು ಗ್ರಾಹಕರ ಗುರುತಿಸುವಿಕೆ ಪ್ರಕ್ರಿಯೆಗೆ ಬಳಸಲಾಗುತ್ತದೆ. ಹೂಡಿಕೆದಾರರ ಗುರುತು ಮತ್ತು ವಿಳಾಸವನ್ನು ಸಂಬಂಧಿಸಿದ ದಾಖಲೆಗಳಾದ ಫೋಟೋ ಐಡಿ (ಉದಾ., ಪ್ಯಾನ್ ಕಾರ್ಡ್‌, ಆಧಾರ್ ಕಾರ್ಡ್‌) ಮತ್ತು ವಿಳಾಸ ದಾಖಲೆ ಮತ್ತು ಇನ್‌ಪರ್ಸನ್‌ ಪರಿಶೀಲನೆ (ಐಪಿವಿ) ಮೂಲಕ ಕೆವೈಸಿ ಸಾಬೀತುಪಡಸಲಾಗುತ್ತದೆ. 2002 ರ ಹಣ ದುರ್ಬಳಕೆ ತಡೆ ಕಾಯ್ದೆ ಮತ್ತು ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು, ಹಣ ದುರ್ಬಳಕೆ ತಡೆಯ (ಎಎಂಎಲ್‌) ಮಾನದಂಡಗಳು / ಭಯೋತ್ಪಾದನೆಗಾಗಿ ಹಣಕಾಸು ನೆರವಿನ ವಿರುದ್ಧ ಹೋರಾಟ(ಸಿಎಫ್‌ಟಿ) / ಸೆಕ್ಯುರಿಟಿ ಮಾರ್ಕೆಟ್‌ ಮಧ್ಯವರ್ತಿಗಳ ಬಾಧ್ಯತೆ ಕುರಿತ ಸೆಬಿ ಮಾಸ್ಟರ್‌ ಸರ್ಕ್ಯುಲರ್ ಪ್ರಕಾರ ಕೆವೈಸಿಗೆ ಬದ್ಧವಾಗುವುದು ಕಡ್ಡಾಯವಾಗಿದೆ.

ನೋ ಯುವರ್ ಕಸ್ಟಮರ್ ಅನ್ನು ಸಾಮಾನ್ಯವಾಗಿ 2 ಭಾಗಗಳಲ್ಲಿ ವಿಭಜಿಸಲಾಗುತ್ತದೆ:

ಭಾಗ 1 ರಲ್ಲಿ ಕೇಂದ್ರೀಯ ಕೆವೈಸಿ ರಿಜಿಸ್ಟ್ರಿ (ಸಮಾನ ಕೆವೈಸಿ) ಶಿಫಾರಸು ಮಾಡಿದಂತೆ ಹೂಡಿಕೆದಾರರ ಪ್ರಾಥಮಿಕ ಮತ್ತು ಸಮಾನ ಕೆವೈಸಿ ವಿವರಗಳನ್ನು ಒಳಗೊಂಡಿರುತ್ತದೆ. ಇದನ್ನು ಎಲ್ಲ ನೋಂದಾಯಿತ ಹಣಕಾಸು ಮಧ್ಯವರ್ತಿಗಳು ಬಳಸುತ್ತಾರೆ ಮತ್ತು

ಭಾಗ 2 ರಲ್ಲಿ ಮ್ಯೂಚುವಲ್‌ಫಂಡ್‌, ಸ್ಟಾಕ್ ಬ್ರೋಕರ್, ಹೂಡಿಕೆದಾರರ ಖಾತೆಯನ್ನು ತೆರೆಯುವ ಡೆಪಾಸಿಟರಿ ಪಾರ್ಟಿಸಿಪಂಟ್‌ನಂತಹ ಹಣಕಾಸು ಮಧ್ಯವರ್ತಿಗಳು ಪ್ರತ್ಯೇಕವಾಗಿ ಹೆಚ್ಚುವರಿ ಕೆವೈಸಿ ಮಾಹಿತಿಯನ್ನು (ಹೆಚ್ಚುವರಿ ಕೆವೈಸಿ) ಪಡೆಯಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ