ಮ್ಯೂಚುವಲ್ ಫಂಡ್‌ಗಳಲ್ಲಿ ನ್ಯೂ ಫಂಡ್ ಆಫರ್ (ಎನ್‌ಎಫ್‌ಒ) ಎಂದರೇನು?

ಮ್ಯೂಚುವಲ್ ಫಂಡ್‌ಗಳಲ್ಲಿ ನ್ಯೂ ಫಂಡ್ ಆಫರ್ (ಎನ್‌ಎಫ್‌ಒ) ಎಂದರೇನು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್‌ಗಳ ವಿಶ್ವದಲ್ಲಿ, ಎನ್‌ಎಫ್‌ಒ ಎಂಬ ಪದವನ್ನು ನೀವು ಆಗಾಗ ಕೇಳಿರಬಹುದು. ಇದನ್ನು ನ್ಯೂ ಫಂಡ್ ಆಫರ್ ಎಂದು ಕರೆಯಲಾಗುತ್ತದೆ. ಮಾರ್ಕೆಟ್‌ನಲ್ಲಿ ಒಂದು ಕಂಪನಿಯು ಒಂದು ಉತ್ಪನ್ನವನ್ನು ಬಿಡುಗಡೆ ಮಾಡಿದಂತೆ ಎಂದು ಇದನ್ನು ನೀವು ಭಾವಿಸಬಹುದು. ಈ ಸನ್ನಿವೇಶದಲ್ಲಿ, “ಉತ್ಪನ್ನ” ಎಂಬುದೇ ಮ್ಯೂಚುವಲ್ ಫಂಡ್ ಸ್ಕೀಮ್ ಆಗಿರುತ್ತದೆ ಮತ್ತು ಎನ್‌ಎಫ್‌ಒ ಎಂಬುದು ಹೊಸ ಸ್ಕೀಮ್‌ನ ಯುನಿಟ್‌ಗಳ ಆಫರ್ ಅನ್ನು ಪ್ರತಿನಿಧಿಸುತ್ತದೆ.   

“ಮ್ಯೂಚುವಲ್ ಫಂಡ್‌ಗಳಲ್ಲಿ ಎನ್‌ಎಫ್‌ಒ ಎಂದರೇನು?” ಎಂಬ ಪ್ರಶ್ನೆಗೆ ಉತ್ತರಿಸಲು, ಸರಳವಾಗಿ ಹೇಳುವುದಾದರೆ, ಯಾವುದೇ ಈಗಾಗಲೇ ಇರುವ ಮ್ಯೂಚುವಲ್ ಫಂಡ್‌ ಅಥವಾ ಹೊಸ ಮ್ಯೂಚುವಲ್ ಫಂಡ್‌ ಆರಂಭಿಸಿ ಹೊಸ ಮ್ಯೂಚುವಲ್ ಫಂಡ್ ಸ್ಕೀಮ್ ಎಂದಾಗಿದೆ. 

ನೀವು ಒಂದು ಎನ್‌ಎಫ್‌ಒದಲ್ಲಿ ಹೂಡಿಕೆ ಮಾಡಿದಾಗ, ನೀವು ಮ್ಯೂಚುವಲ್ ಫಂಡ್‌ಗೆ ನಿಮ್ಮ ಹಣವನ್ನು ಹಾಕುತ್ತಿರುತ್ತೀರಿ ಮತ್ತು ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ಸ್ಕೀಮ್‌ನ ಉದ್ದೇಶಗಳ ಪ್ರಕಾರ ವಿವರಿಸಿದಂತೆ ಹೂಡಿಕೆ ಮಾಡಲು ಬಳಸುತ್ತಿರುತ್ತಾರೆ.

ಎನ್‌ಎಫ್‌ಒ ಅವಧಿಯಲ್ಲಿ, ಆಫರ್ ಬೆಲೆಯಲ್ಲಿ ಈ ಹೊಸ ಸ್ಕೀಮ್‌ನ ಯುನಿಟ್‌ಗಳನ್ನು ಹೂಡಿಕೆದಾರರು ಖರೀದಿ ಮಾಡಬಹುದು. ಇದಕ್ಕೆ ಸಾಮಾನ್ಯವಾಗಿ ಫಿಕ್ಸೆಡ್‌ ಮೊತ್ತವನ್ನು ನಿಗದಿ ಮಾಡಲಾಗಿರುತ್ತದೆ (ಉದಾ., ಒಂದು ಯುನಿಟ್‌ಗೆ ರೂ. 10). ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ನಂತರ ಒಟ್ಟುಗೂಡಿಸಲಾಗುತ್ತದೆ. ಎನ್‌ಎಫ್ಒ ಅವಧಿ ಮುಗಿದ ನಂತರ, ಸ್ಕೀಮ್‌ನ ಉದ್ದೇಶಗಳನ್ನು ಆಧರಿಸಿ ವಿವಿಧ ಹಣಕಾಸು ಸಲಕರಣೆಗಳಲ್ಲಿ ಈ ಸಂಗ್ರಹವಾದ ಹಣವನ್ನು ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಆರಂಭಿಸುತ್ತದೆ. ಇದು ಆರಂಭದಿಂದಲೇ ಸ್ಕೀಮ್‌ನ ಪಯಣದ ಭಾಗವಾಗಲು ಹೂಡಿಕೆದಾರರಿಗೆ ಅನುವು ಮಾಡುತ್ತದೆ. 

ಆದರೆ, ಸ್ಕೀಮ್‌ನ ಹೂಡಿಕೆ ಉದ್ದೇಶಗಳಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎನ್‌ಎಫ್‌ಒದಲ್ಲಿ ಹೂಡಿಕೆ ಮಾಡುವುದಕ್ಕೂ ಮೊದಲು ನಿಮ್ಮ ಗುರಿಗಳು ಮತ್ತು ರಿಸ್ಕ್ ಪ್ರೊಫೈಲ್ ಅನ್ನು ವಿಶ್ಲೇಷಣೆ ಮಾಡಿಕೊಳ್ಳುವುದು ಅಗತ್ಯ.

ಸಾಮಾನ್ಯವಾಗಿ ಸಬ್‌ಸ್ಕ್ರಿಪ್ಷನ್ ಮಾಡಲು 15 ದಿನಗಳ ಕಾಲ ಅವಕಾಶ ನೀಡುವ ಎನ್‌ಎಫ್‌ಒ ಅವಧಿಯಲ್ಲಿ, ನಿಗದಿತ ಕೊಡುಗೆ ದರದಲ್ಲಿ ಹೊಸ ಸ್ಕೀಮ್‌ನ ಯುನಿಟ್‌ಗಳನ್ನು ಹೂಡಿಕೆದಾರರು ಖರೀದಿ ಮಾಡಬಹುದಾಗಿರುತ್ತದೆ (ಉದಾಹರಣೆಗೆ ಪ್ರತಿ ಯುನಿಟ್‌ಗೆ ರೂ. 10). ಫಂಡ್ ಮ್ಯಾನೇಜ್‌ಮೆಂಟ್ ಒದಗಿಸಿದ ಆಯ್ಕೆಗಳನ್ನು ಆಧರಿಸಿ, ಒಟ್ಟಾರೆ ಮೊತ್ತದಲ್ಲಿ ಹೂಡಿಕೆ ಮಾಡುವುದು ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್ (ಎಸ್‌ಐಪಿ) ಅನ್ನು ಹೂಡಿಕೆದಾರರು ಆರಿಸಿಕೊಳ್ಳಬಹುದು. 

NFOs ಹೊಸ ಹೂಡಿಕೆ ಪಯಣವನ್ನು ಆರಂಭಿಸುವುದಕ್ಕೆ ಹೂಡಿಕೆದಾರರಿಗೆ ಎನ್‌ಎಫ್‌ಒ ಒಂದು ಅವಕಾಶವಾಗಿದೆ. ಆದರೆ, ಎಚ್ಚರಿಕೆಯಿಂದ ಮೌಲ್ಯೀಕರಿಸಿಕೊಳ್ಳುವುದು ಇದರಲ್ಲಿ ಮುಖ್ಯವಾಗಿರುತ್ತದೆ. 

ಹಕ್ಕು ನಿರಾಕರಣೆ

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.
 

285
ನಾನು ಹೂಡಿಕೆ ಮಾಡಲು ಸಿದ್ಧ