ಎರಡು ಅಥವಾ ಹೆಚ್ಚು ಕಂತುಗಳನ್ನು ತಪ್ಪಿಸಿದರೆ ಮ್ಯೂಚುವಲ್‌ ಫಂಡ್‌ಗಳು ಏನಾಗುತ್ತವೆ?

ಎರಡು ಅಥವಾ ಹೆಚ್ಚು ಕಂತುಗಳನ್ನು ತಪ್ಪಿಸಿದರೆ ಮ್ಯೂಚುವಲ್‌ ಫಂಡ್‌ಗಳು ಏನಾಗುತ್ತವೆ?
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಿಯತ ಸಕಾಲಿಕ ಹೂಡಿಕೆಗಳು ಅಥವಾ/ಮತ್ತು ಲಂಪ್‌ಸಮ್‌ ಹೂಡಿಕೆಗಳ ಮೂಲಕ ಮ್ಯೂಚುವಲ್‌ ಫಂಡ್‌ಗಳಲ್ಲಿ ನೀವು ಹೂಡಿಕೆ ಮಾಡಬಹುದು. 1ನೆ ಪ್ರಕರಣದಲ್ಲಿ, ನೀವು ಹೂಡಿಕೆ ಮಾಡುವ ಆವರ್ತನವನ್ನು ನೀವು ಆಯ್ಕೆ ಮಾಡಬೇಕು. ನಿತ್ಯ/ಸಾಪ್ತಾಹಿಕ/ಮಾಸಿಕ ಆವರ್ತನಕ್ಕೆ ಎಸ್‌ಐಪಿ ಮೂಲಕ ನಿಮ್ಮ ಹೂಡಿಕೆಯನ್ನು ನೀವು ಸ್ವಯಂಚಾಲಿತವಾಗಿಸಬಹುದು.

ಈ ಅಟೊಮೇಶನ್‌ ಅನ್ನು ಪೋಸ್ಟ್‌ ಡೇಟೆಡ್‌ ಚೆಕ್‌ಗಳು ಅಥವಾ ಬ್ಯಾಂಕ್‌ ಖಾತೆಗಳಿಂದ ಎಲೆಕ್ಟ್ರಾನಿಕ್‌ ಡೆಬಿಟ್‌ ಮೂಲಕ ಮಾಡಬಹುದು. “ಡೈರೆಕ್ಟ್ ಡೆಬಿಟ್‌” ಸೌಲಭ್ಯ ಅಥವಾ ಎನ್‌ಎಸಿಎಚ್ (ನ್ಯಾಷನಲ್ ಆಟೊಮೇಟೆಡ್ ಕ್ಲಿಯರಿಂಗ್ ಹೌಸ್) ಮೂಲಕ ಎಲೆಕ್ಟ್ರಾನಿಕ್ ಡೆಬಿಟ್‌ಗಳನ್ನು ಸೆಟಪ್‌ ಮಾಡಬಹುದು. ಅರ್ಜಿ ನಮೂನೆಗಳು ಸಂಬಂಧಿತ ಮ್ಯೂಚುವಲ್‌ ಫಂಡ್‌ಗಳಿಗೆ ಲಭ್ಯವಿರುತ್ತದೆ.

ಪ್ರತಿ ತಿಂಗಳೂ ನೀವು ಹೊಸ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುವುದಿಲ್ಲ ಅಥವಾ ಯಾವ ಸ್ಕೀಮ್‌ನಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ಯೋಚನೆ ಮಾಡಬೇಕಾಗುವುದಿಲ್ಲ. ಹೀಗಾಗಿ ಇದು ನಿಮ್ಮ ಶ್ರಮವನ್ನು ಕಡಿಮೆ ಮಾಡುತ್ತದೆ. ಕೇವಲ ಸ್ಕೀಮ್‌, ಮೊತ್ತ ಮತ್ತು ದಿನಾಂಕವನ್ನು ಆಯ್ಕೆ ಮಾಡಿ ಮತ್ತು ನೀವು ಆಯ್ಕೆ ಮಾಡಿದ ಅವಧಿಗೆ ಸ್ವಯಂಚಾಲಿತವಾಗಿ ನಿಮ್ಮ ವಹಿವಾಟು ನಡೆಯುತ್ತದೆ. ಆರು ತಿಂಗಳು ಅಥವಾ ಹೆಚ್ಚು ಅವಧಿಗೆ ನೀವು ಎಸ್‌ಐಪಿ ನಿಗದಿಸಬಹುದು. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸೂಕ್ತ ಬ್ಯಾಲೆನ್ಸ್‌ ಇರುವುದನ್ನು ಖಚಿತಪಡಿಸಿಕೊಳ್ಳಿ.

ಇಲ್ಲಿ ನಿಮ್ಮ ಪ್ರಶ್ನೆಯೂ ಪ್ರಾಮುಖ್ಯತೆ ಪಡೆಯುತ್ತದೆ. ನೀವು ಎರಡು ಅಥವಾ ಮೂರು ಸತತ ಕಂತುಗಳನ್ನು ತಪ್ಪಿಸಿದರೆ, ಪೋಸ್ಟ್ ಡೇಟೆಡ್‌ ಚೆಕ್‌ಗಳ ಡೆಪಾಸಿಟ್ ಮಾಡುವುದನ್ನು ಫಂಡ್ ಹೌಸ್ ನಿಲ್ಲಿಸುತ್ತದೆ ಮತ್ತು ಎಲ್ಲ ಬಳಸದ ಚೆಕ್‌ಗಳನ್ನು ವಾಪಸು ಮಾಡುತ್ತದೆ ಅಥವಾ ನಿಮ್ಮ ಖಾತೆಯಿಂದ ಡೆಬಿಟ್‌ ಮಾಡುವುದನ್ನು ನಿಲ್ಲಿಸುತ್ತದೆ. ದಂಡ ವಿಧಿಸುವುದಿಲ್ಲ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವುದೂ ಇಲ್ಲ.

ಯಾವುದೇ ಸಮಯದಲ್ಲಿ ಅದೇ ಮೊತ್ತಕ್ಕೆ ನೀವು ಎಸ್‌ಐಪಿ ಅನ್ನು ಪುನಃ ಆರಂಭಿಸಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ