ಇಟಿಎಫ್‌ಗಳಲ್ಲಿ ಯಾರು ಹೂಡಿಕೆ ಮಾಡಬೇಕು?

ಇಟಿಎಫ್‌ಗಳಲ್ಲಿ ಯಾರು ಹೂಡಿಕೆ ಮಾಡಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸ್ಟಾಕ್ ಮಾರ್ಕೆಟ್‌ನಲ್ಲಿ ತೊಡಗಿಸಿಕೊಳ್ಳುವ  ಕಡಿಮೆ ವೆಚ್ಚದ ವಿಧಾನವೇ ಇಟಿಎಫ್‌ಗಳಾಗಿವೆ. ಎಕ್ಸ್‌ಚೇಂಜ್‌ನಲ್ಲಿ ಲಿಸ್ಟ್ ಆಗಿರುವುದರಿಂದ ಮತ್ತು ಸ್ಟಾಕ್‌ಗಳ ರೀತಿ ಟ್ರೇಡ್ ಆಗುವುದರಿಂದ ಇವು ಲಿಕ್ವಿಡಿಟಿ ಮತ್ತು ರಿಯಲ್‌ ಟೈಮ್‌ ಸೆಟಲ್‌ಮೆಂಟ್‌ ಒದಗಿಸುತ್ತವೆ. ನಿಮ್ಮ ಆಯ್ಕೆಯ ಕೆಲವು ಷೇರುಗಳಲ್ಲಿ ಹೂಡಿಕೆ ಮಾಡುವುದಕ್ಕೆ ಹೋಲಿಸಿದರೆ ವೈವಿಧ್ಯತೆಯನ್ನು ಒದಗಿಸುವ ಇಟಿಎಫ್‌ಗಳು ಸ್ಟಾಕ್‌ ಇಂಡೆಕ್ಸ್ ಅನ್ನು ಪುನರಾವರ್ತಿಸುತ್ತವೆ.

ಷೇರುಗಳ ಮೌಲ್ಯ ಇಳಿಕೆಯಾದಾಗ ಲಾಭ ಪಡೆಯುವ ರೀತಿ ಮಾರಾಟ ಮಾಡುವುದು (ಸೆಲ್ಲಿಂಗ್ ಶಾರ್ಟ್) ಅಥವಾ ಸಾಲದಲ್ಲಿ ಷೇರುಗಳನ್ನು ಖರೀದಿಸುವುದು (ಬೈಯಿಂಗ್ ಆನ್ ಮಾರ್ಜಿನ್ಸ್) ಈ ವಹಿವಾಟುಗಳನ್ನು ನೀವು ಮಾಡಲು ಬಯಸಿದರೆ ಇಟಿಎಫ್‌ಗಳು ಹೊಂದಾಣಿಕೆಯನ್ನು ಒದಗಿಸುತ್ತವೆ. ಕಮಾಡಿಟಿಗಳು, ವಿದೇಶಿ ಸೂಚ್ಯಂಕಗಳು ಮತ್ತು ಅಂತಾರಾಷ್ಟ್ರೀಯ ಸೆಕ್ಯುರಿಟಿಗಳಂತಹ ಪರ್ಯಾಯ ಹೂಡಿಕೆ ಆಯ್ಕೆಗಳಿಗೂ ಇಟಿಎಫ್‌ಗಳು ಪ್ರವೇಶಾವಕಾಶ ನೀಡುತ್ತವೆ. ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಲಭ್ಯವಿರದ ಆಯ್ಕೆಗಳು ಮತ್ತು ಫ್ಯೂಚರ್ಸ್‌ಗಳನ್ನು ಬಳಸಿಕೊಂಡು ಷೇರುಗಳ ಮೌಲ್ಯದ ಪ್ರತಿಕೂಲ ಏರಿಳಿತಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲೂ (ಹೆಡ್ಜಿಂಗ್) ಕೂಡ ಸಾಧ್ಯವಿದೆ.

ಅದಾಗ್ಯೂ, ಎಲ್ಲ ಹೂಡಿಕೆದಾರರಿಗೆ ಇಟಿಎಫ್‌ಗಳು ಸೂಕ್ತವಲ್ಲ. ಯಾವುದೇ ನಿರ್ದಿಷ್ಟ ಸ್ಟಾಕ್‌ಗಳನ್ನು ಆಯ್ಕೆ ಮಾಡುವ ಅಗತ್ಯವಿಲ್ಲದೇ, ದೀರ್ಘಕಾಲಕ್ಕೆ ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಪ್ರಯೋಜನವನ್ನು ಅನುಭವಿಸಲು ಬಯಸುವ ಹೊಸ ಹೂಡಿಕೆದಾರರಿಗೆ ಇಂಡೆಕ್ಸ್ ಫಂಡ್‌ಗಳು ಉತ್ತಮ ಆಯ್ಕೆಯಾಗಿವೆ. 

ಸರಿಯಾದ ಇಟಿಎಫ್‌ಗಳನ್ನು ಆಯ್ಕೆ ಮಾಡಲು ಬಹುತೇಕ ರಿಟೇಲ್‌ ಹೂಡಿಕೆದಾರರು ಹೊಂದಿರುವುದಕ್ಕಿಂತ ಹೆಚ್ಚಿನ ಉತ್ತಮ ತಿಳಿವಳಿಕೆ ಬೇಕಾಗುತ್ತದೆ. ಹೀಗಾಗಿ, ನಿಮ್ಮ ಇಟಿಎಫ್‌ ಹೂಡಿಕೆಗಳನ್ನು ನಿರ್ವಹಣೆ ಮಾಡಲು ಒಂದಿಷ್ಟು ಹೂಡಿಕೆ ಶೈಲಿಗಳ ಅನುಭವ ಹೊಂದಿರಬೇಕಾಗುತ್ತದೆ. 

436
ನಾನು ಹೂಡಿಕೆ ಮಾಡಲು ಸಿದ್ಧ