ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ ಯಾಕೆ ಡೆಟ್ ಫಂಡ್‌ಗಳು ಕಡಿಮೆ ರಿಟರ್ನ್ಸ್‌ ಅನ್ನು ಕೊಡುತ್ತವೆ?

ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ಹೋಲಿಸಿದರೆ ಯಾಕೆ ಡೆಟ್ ಫಂಡ್‌ಗಳು ಕಡಿಮೆ ರಿಟರ್ನ್ಸ್‌ ಅನ್ನು ಕೊಡುತ್ತವೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೂಡಿಕೆ ಮಾಡುವ ವಿಧಾನವನ್ನು ಆಧರಿಸಿ ಮ್ಯೂಚುವಲ್‌ ಫಂಡ್‌ಗಳು ರಿಟರ್ನ್ಸ್‌ ನೀಡುತ್ತವೆ. ಈ ಹೂಡಿಕೆಗೆ ರಿಸ್ಕ್ ಕೂಡ ಇರುತ್ತವೆ. ಸಮೋಸದ ರುಚಿಗಿಂತ ಕೇಕ್‌ನ ರುಚಿ ವಿಭಿನ್ನವಾಗಿರುತ್ತದೆ. ಯಾಕೆಂದರೆ ಎರಡನ್ನೂ ವಿಭಿನ್ನ ಪದಾರ್ಥಗಳಿಂದ ವಿಭಿನ್ನ ರೀತಿಯಲ್ಲಿ ತಯಾರಿಸಲಾಗುತ್ತದೆ. ಇದೇ ರೀತಿ, ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ಮತ್ತು ಫಿಕ್ಸೆಡ್‌ ಇನ್‌ಕಮ್‌ ಫಂಡ್‌ಗಳು ವಿಭಿನ್ನ ರೀತಿಯ ರಿಟರ್ನ್ಸ್‌ ಅನ್ನು ನೀಡುತ್ತವೆ. ಯಾಕೆಂದರೆ, ವಿಭಿನ್ನ ರೀತಿಯ ಸೆಕ್ಯುರಿಟಿಗಳು ಇದರ ಪೋರ್ಟ್‌ಫೋಲಿಯೋದಲ್ಲಿರುತ್ತವೆ ಮತ್ತು ಇದರಲ್ಲಿನ ಸೆಕ್ಯುರಿಟಿಗಳು ರಿಟರ್ನ್ಸ್‌ ಜನರೇಟ್ ಮಾಡುವ ವಿಧಾನವೂ ವಿಭಿನ್ನವಾಗಿರುತ್ತವೆ.

ಬಾಂಡ್‌ಗಳು, ಡಿಬೆಂಚರುಗಳು ಮತ್ತು ಮನಿ ಮಾರ್ಕೆಟ್‌ ಇನ್‌ಸ್ಟ್ರುಮೆಂಟ್‌ಗಳಂತಹ ಬಡ್ಡಿ ಪಾವತಿ ಮಾಡುವ ಸೆಕ್ಯುರಿಟಿಗಳಲ್ಲಿ ಫಿಕ್ಸೆಡ್ ಇನ್‌ಕಮ್‌ ಫಂಡ್‌ ಹೂಡಿಕೆ ಮಾಡುತ್ತವೆ. ಈ ಮ್ಯೂಚುವಲ್‌ ಫಂಡ್‌ಗಳಿಗೆ ನಿಯತ ಅವಧಿಯಲ್ಲಿ ಫಿಕ್ಸೆಡ್‌ ಬಡ್ಡಿ ಪಾವತಿ ಮಾಡುವ ಭರವಸೆಯನ್ನು ಈ ಸೆಕ್ಯುರಿಟಿಗಳು ನೀಡುತ್ತವೆ. ಮಾರ್ಕೆಟ್‌ನಲ್ಲಿರುವ ಸಾಲದ ದರಕ್ಕೆ ಈ ದರವು ಲಿಂಕ್ ಆಗಿರುತ್ತದೆ. ಈ ಸೆಕ್ಯುರಿಟಿಗಳನ್ನು ನೀಡಿದವರು ತಮ್ಮ ಭರವಸೆಗಳನ್ನು ಈಡೇರಿಸಲಾಗದೇ ಇದ್ದರೆ, ಹೂಡಿಕೆಯ ಮೇಲಿನ  ರಿಸ್ಕ್ ಗೆ ಪರಿಹಾರವಾಗಿ ಪ್ರಸ್ತುತ ಸಾಲದ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪಾವತಿ ಮಾಡುವ ಭರವಸೆಯನ್ನು ಅವು ನೀಡುತ್ತವೆ. ಹೊಸ ಕಂಪನಿಗೆ ಹೋಲಿಸಿದರೆ ಉತ್ತಮವಾಗಿ ಸ್ಥಾಪಿತವಾದ ಕಾರ್ಪೊರೇಟ್‌, ಅದರ ಬಾಂಡ್ ಮೇಲೆ  ಕಡಿಮೆ ಬಡ್ಡಿಯನ್ನು ನೀಡುವ ಸಾಧ್ಯತೆ ಇರುತ್ತದೆ (ಕಡಿಮೆ ರಿಸ್ಕ್ ಪ್ರೀಮಿಯಂ). ಯಾಕೆಂದರೆ ಹೊಸ ಸಂಸ್ಥೆಗಿಂತ ಇದರ ಕ್ರೆಡಿಟ್‌ ರೇಟಿಂಗ್‌ ಹೆಚ್ಚಿರುತ್ತದೆ.

ಹೂಡಿಕೆಯ ಮೇಲಿನ ರಿಟರ್ನ್ಸ್‌ನೇರವಾಗಿ ರಿಸ್ಕಗೆ ಸಂಬಂಧ ಹೊಂದಿರುತ್ತದೆ. ಸಾಮಾನ್ಯವಾಗಿ ಈಕ್ವಿಟಿ ಗಳಿಗಿಂತ ಡೆಟ್ ಸೆಕ್ಯುರಿಟಿಗಳನ್ನು ಕಡಿಮೆ ರಿಸ್ಕ್ನದ್ದು ಎಂದು ಕರೆಯಲಾಗುತ್ತದೆ. ಹೀಗಾಗಿ, ಫಿಕ್ಸೆಡ್ ಇನ್‌ಕಮ್‌ಫಂಡ್‌ನಂತಹ ಕಡಿಮೆ ರಿಸ್ಕ್ ಹೂಡಿಕೆಯು ಕಡಿಮೆ ರಿಟರ್ನ್ಸ್‌ಅನ್ನು ನೀಡುತ್ತದೆ. ಈಕ್ವಿಟಿ ಫಂಡ್‌ಗಳಲ್ಲಿ ಇದು ತದ್ವಿರುದ್ಧವಾಗಿರುತ್ತದೆ.

439
ನಾನು ಹೂಡಿಕೆ ಮಾಡಲು ಸಿದ್ಧ