ಉಳಿತಾಯಕ್ಕಿಂತ ಹೂಡಿಕೆ ಯಾಕೆ ಉತ್ತಮ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಂದು 50 ಓವರ್‌ಗಳ ಕ್ರಿಕೆಟ್‌ಮ್ಯಾಚ್‌ನಲ್ಲಿ, 6ನೇ ನಂಬರಿನ ಬ್ಯಾಟ್ಸ್‌ಮನ್‌ಕೇವಲ 5ನೇ ಓವರ್‌ಗೆ ಬ್ಯಾಟ್ ಮಾಡಲು ಬರುವ ಸನ್ನಿವೇಶವನ್ನು ಊಹಿಸಿಕೊಳ್ಳಿ. ತಾನು ವಿಕೆಟ್ ಕಳೆದುಕೊಳ್ಳದೇ ಇರುವುದೇ ಅವರ ಮೊದಲ ಆದ್ಯತೆಯಾಗಿರುತ್ತದೆ. ಅವರು ರನ್ ಮಾಡಲು ಪ್ರಯತ್ನಿಸಬೇಕು.

ಹೂಡಿಕೆಗೆ ಉಳಿತಾಯ ಬೇಕೇ ಬೇಕು. ರನ್ ಹೊಡೆಯಲು ವಿಕೆಟ್ ಅನ್ನು ಉಳಿಸಿಕೊಳ್ಳಲೇ ಬೇಕು. ರಕ್ಷಣಾತ್ಮಕವಾಗಿ ಆಟವಾಡಿ ವಿಕೆಟ್ ಅನ್ನು ಉಳಿಸಿಕೊಳ್ಳಬಹುದು ಮತ್ತು ಎಲ್ಲ ರೀತಿಯ ಶಾಟ್‌ಗಳನ್ನು ಸಮರ್ಥವಾಗಿ ತಡೆಯಬಹುದು. ಆದರೆ, ಹಾಗೆ ಮಾಡಿದರೆ ಕಡಿಮೆ ಸ್ಕೋರ್ ಆಗುತ್ತದೆ. ಫೀಲ್ಡರ್‌ಗಳ ಮಧ್ಯೆ ಡ್ರೈವ್ ಮಾಡಿ ಅಥವಾ ಕಟ್‌ಮತ್ತು ನಡ್ಜ್‌ಮಾಡಿ ಒಂದಷ್ಟು ಬೌಂಡರಿಗಳನ್ನೂ ಅವರು ಹೊಡೆಯಬೇಕಾಗುತ್ತದೆ.

ಇದೇ ರೀತಿ, ಹಣಕಾಸು ಗುರಿಯನ್ನು ಪೂರೈಸುವುದಕ್ಕೆ ಅಗತ್ಯವಾದ ದೊಡ್ಡ ಮೊತ್ತವನ್ನು ಸಂಚಯಗೊಳಿಸಲು, ಹಣದುಬ್ಬರವನ್ನು ತಡೆಯಲು ಕೆಲವು ಹೂಡಿಕೆ ರಿಸ್ಕ್‌ಗಳನ್ನು ನಾವು ತೆಗೆದುಕೊಳ್ಳಬೇಕಾಗುತ್ತದೆ. ಹೂಡಿಕೆ ಎಂಬುದು ಲೆಕ್ಕಾಚಾರ ಮಾಡಿ ರಿಸ್ಕ್‌ಗಳನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ನಿರ್ವಹಿಸುವುದಾಗಿದೆ. ಆದರೆ ರಿಸ್ಕ್‌ಗಳನ್ನೇ ದೂರವಿಡಲಾಗದು.

ಇದೇ ಸಮಯದಲ್ಲಿ, ಕ್ರಿಕೆಟ್‌ನ ಉದಾಹರಣೆಯಂತೆ ವಿಕೆಟ್‌ಉಳಿಸಿಕೊಳ್ಳಲು ಮತ್ತು ಉತ್ತಮ ಸ್ಕೋರ್‌ಗಳನ್ನೂ ಮಾಡಲು ಲೆಕ್ಕಾಚಾರ ಮಾಡಿ ರಿಸ್ಕ್‌ತೆಗೆದುಕೊಳ್ಳಬೇಕು. ಗಾಬರಿಯಲ್ಲಿ ಬ್ಯಾಟ್ ಬೀಸಬಾರದು. ಅನಗತ್ಯ ರಿಸ್ಕ್‌ತೆಗೆದುಕೊಳ್ಳುವುದು ಒಂದು ಕೆಟ್ಟ ಸ್ಟ್ರಾಟಜಿ.

ಹೀಗಾಗಿ ಉಳಿತಾಯ ಮಾಡುವುದು ಅಗತ್ಯವಾಗಿದ್ದರೂ, ದೀರ್ಘ ಕಾಲದ ಗುರಿಗಳನ್ನು ಸಾಧಿಸಲು ಹೂಡಿಕೆ ಮಾಡುವುದೂ ಅಷ್ಟೇ ಪ್ರಮುಖವಾಗಿರುತ್ತದೆ.

434
ನಾನು ಹೂಡಿಕೆ ಮಾಡಲು ಸಿದ್ಧ