ಮ್ಯೂಚುಯಲ್ ಫಂಡ್‌ಗಳಲ್ಲಿ ನಾಮನಿರ್ದೇಶನವು ಏಕೆ ಮುಖ್ಯವಾಗಿದೆ ಮತ್ತು ಅದನ್ನು ಮಾಡಿಸಲು ಇರುವ ಪ್ರಕ್ರಿಯೆ ಏನು?

Video
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಾವೆಲ್ಲರೂ ರಾಜರ ಬಗ್ಗೆ ಮತ್ತು ಒಬ್ಬ ಸೂಕ್ತ ಉತ್ತರಾಧಿಕಾರಿಯನ್ನು ಹೊಂದಬೇಕೆಂಬ ಅವರ ಅಪೇಕ್ಷೆಯ ಬಗ್ಗೆ ಕಥೆಗಳನ್ನು ಇತಿಹಾಸ ಮತ್ತು ಕಥೆ ಪುಸ್ತಕಗಳಲ್ಲಿ ಓದಿದ್ದೇವೆ. ರಾಜರು ತಮ್ಮ ರಾಜ್ಯವನ್ನು ಸರಿಯಾದ ಉತ್ತರಾಧಿಕಾರಿಗೆ ಹಸ್ತಾಂತರಿಸಿದಂತೆಯೇ, ಕಾನೂನುಬದ್ಧವಾಗಿ ಜಾರಿಗೊಳಿಸಬಹುದಾದ ಉಯಿಲಿನ ಮೂಲಕ ನಿಮ್ಮ ಪ್ರತಿಯೊಂದು ಸ್ವತ್ತುಗಳಿಗೆ ಒಬ್ಬ ಉತ್ತರಾಧಿಕಾರಿಯನ್ನು ಹೆಸರಿಸುವುದು ಸೂಕ್ತ. ಬಹುತೇಕ ಜನರು ತಮ್ಮ ಜೀವಿತಾವಧಿಯಲ್ಲಿ ಉಯಿಲನ್ನು ರಚಿಸುವುದಿಲ್ಲ. ಇದು ವ್ಯಕ್ತಿಯ ಮರಣದ ನಂತರ ಅವನ ಆಸ್ತಿಯನ್ನು ಯಾರು ಬಳುವಳಿಯಾಗಿ ಪಡೆಯುತ್ತಾರೆ ಎಂಬುದನ್ನು ವಿವಾದಾಸ್ಪದವಾಗಿಸಬಹುದು. ಇಲ್ಲಿಯೇ ನಾಮನಿರ್ದೇಶನವು ಮುಖ್ಯವಾಗುತ್ತದೆ.

ಮ್ಯೂಚುವಲ್ ಫಂಡ್‌ಗಳ ವಿಷಯದಲ್ಲಿ ನಾಮನಿರ್ದೇಶನವು ವೈಯಕ್ತಿಕ ಹೂಡಿಕೆದಾರರಿಗೆ ತಾವು ನಿಧನರಾದ ಸಂದರ್ಭದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಘಟಕಗಳ ಸ್ವಾಮ್ಯವನ್ನು ಅಥವಾ ಈ ಘಟಕಗಳ ವಿಮೋಚನಾ ಆದಾಯವನ್ನು ಯಾರು ಪಡೆಯಬೇಕು ಎಂಬುದನ್ನು ನಾಮನಿರ್ದೇಶಿಸುವುದನ್ನು ಸಾಧ್ಯವಾಗಿಸುವ ಒಂದು ಸೌಲಭ್ಯವಾಗಿದೆ. ಹೂಡಿಕೆದಾರರು ಅವನ/ಅವಳ ಖಾತೆಯಲ್ಲಿ ನಾಮನಿರ್ದೇಶಿತರನ್ನು ನಿರ್ದಿಷ್ಟಪಡಿಸದಿದ್ದರೆ, ಹೂಡಿಕೆದಾರರ ಕಾನೂನು ಉತ್ತರಾಧಿಕಾರಿ(ಗಳು) ಹೂಡಿಕೆಗಳ ಸ್ವಾಮ್ಯವನ್ನು ತಮ್ಮ ಕಾನೂನುಬದ್ಧ ಉತ್ತರಾಧಿಕಾರವನ್ನು ಸಾಬೀತುಪಡಿಸಿದ ನಂತರ ಮಾತ್ರ ಪಡೆಯಬಹುದಾಗಿರುತ್ತದೆ ಮತ್ತು ಅದು ಒಂದು ಸುದೀರ್ಘ ಅವಧಿಯ ಪ್ರಕ್ರಿಯೆಯಾಗಿದೆ.

ಆದ್ದರಿಂದ ಅಂತಹ ಒಂದು ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ಸ್ವತ್ತುಗಳನ್ನು ಸುಗಮವಾಗಿ ಬಳುವಳಿಯಾಗಿ ರವಾನಿಸಲು ನಿಮ್ಮ ಎಲ್ಲಾ ಮ್ಯೂಚುಯಲ್ ಫಂಡ್ ಹೂಡಿಕೆಗಳಲ್ಲಿ ನಾಮನಿರ್ದೇಶಿತರನ್ನು ಹೊಂದಿರುವುದು ಉತ್ತಮ. ಮ್ಯೂಚುವಲ್ ಫಂಡ್‌ನೊಂದಿಗೆ ನೀವು ಒಂದು ಆನ್‌ಲೈನ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಮ್ಯೂಚುವಲ್ ಫಂಡ್ ಹೋಲ್ಡಿಂಗ್‌ನಲ್ಲಿ ಅಸ್ತಿತ್ವದಲ್ಲಿರುವ ನಾಮನಿರ್ದೇಶಿತರ ಪಟ್ಟಿಗೆ ವ್ಯಕ್ತಿಗಳನ್ನು ಸೇರಿಸುವುದನ್ನು ಅಥವಾ ಅದನ್ನು ಅಪ್ಡೇಟ್‌ ಮಾಡುವುದನ್ನು ಆನ್‌ಲೈನ್‌ನಲ್ಲಿ ಮಾಡಬಹುದು. ನಿಮ್ಮ ಖಾತೆಗೆ ಲಾಗಿನ್ ಮಾಡಿ ಮತ್ತು ನೀವು ನಾಮನಿರ್ದೇಶಿತರನ್ನು ಸೇರಿಸಲು / ಅಪ್ಡೇಟ್‌ ಮಾಡಲು ಬಯಸುವ ಫೋಲಿಯೊವನ್ನು ಆರಿಸಿಕೊಳ್ಳಿ. ಪ್ರತಿ ನಾಮನಿರ್ದೇಶಿತರು ಪಡೆಯುವ ಮಾಲೀಕತ್ವದ ಶೇಕಡಾವಾರು ಪ್ರಮಾಣದ ಜೊತೆಗೆ ಅವರ ಹೆಸರು ಮತ್ತು ವಿಳಾಸದಂತಹ ನಾಮನಿರ್ದೇಶನ ವಿವರಗಳನ್ನು ಭರ್ತಿ ಮಾಡಿ.

ಯಾವುದೇ ಶೇಕಡಾವಾರು ನಿರ್ದಿಷ್ಟಪಡಿಸದಿದ್ದರೆ, ಪ್ರತಿಯೊಬ್ಬ ನಾಮನಿರ್ದೇಶಿತರು ಸಮಾನ ಶೇಕಡಾವಾರು ಪ್ರಮಾಣಕ್ಕೆ ಅರ್ಹರಾಗಿರುತ್ತಾರೆ. ನಿಮಗೆ ಆನ್‌ಲೈನ್‌ನಲ್ಲಿ ಮಾಡಲು ಹಿತಕರವೆನಿಸದಿದ್ದರೆ, ನಿಮ್ಮ ಫೋಲಿಯೊದಲ್ಲಿ ನಾಮನಿರ್ದೇಶನ ವಿವರಗಳನ್ನು ಸೇರಿಸಲು / ಅಪ್ಡೇಟ್‌ ಮಾಡಲು ನೀವು ನಿಮ್ಮ ಹತ್ತಿರದ ಫಂಡ್ ಹೌಸ್‌ನ ಶಾಖೆ ಅಥವಾ ಹೂಡಿಕೆದಾರರ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದು. ನೀವು ಮಾಡಬೇಕಾಗಿರುವುದೇನೆಂದರೆ ಒಂದು ಲಿಖಿತ ಅರ್ಜಿಯನ್ನು ಸಲ್ಲಿಸುವುದು ಅಥವಾ ಸಾಮಾನ್ಯ ಅರ್ಜಿ ನಮೂನೆಯ ಸಂಬಂಧಿತ ವಿಭಾಗವನ್ನು ಭರ್ತಿ ಮಾಡುವುದು ಅಷ್ಟೇ. ನಾಮನಿರ್ದೇಶಿತರನ್ನು ಮತ್ತು ನಾಮನಿರ್ದೇಶಿತರ ಹೆಸರುಗಳನ್ನು ಸೇರಿಸಲು/ಅಪ್ಡೇಟ್‌ ಮಾಡಲು ನೀವು ಖಾತೆ/ಫೋಲಿಯೊವನ್ನು ನಿರ್ದಿಷ್ಟಪಡಿಸಬೇಕಾಗುತ್ತದೆ. ಒಂದು ಖಾತೆಯಲ್ಲಿ ಒಂದಕ್ಕಿಂತ ಹೆಚ್ಚು ನಾಮನಿರ್ದೇಶಿತರು ಇರುವ ಸಂದರ್ಭದಲ್ಲಿ, ನೀವು ಎಲ್ಲಾ ನಾಮನಿರ್ದೇಶಿತರ ನಡುವೆ ನಿಮ್ಮ ಹೂಡಿಕೆಗಳ ಶೇಕಡಾವಾರು ಹಂಚಿಕೆಯನ್ನು ನಿರ್ದಿಷ್ಟಪಡಿಸಬೇಕು.

ನಿಮ್ಮ ಎಲ್ಲಾ ಮ್ಯೂಚುವಲ್ ಫಂಡ್ ಹೂಡಿಕೆ ಖಾತೆಗಳನ್ನು ನಾಮನಿರ್ದೇಶಿತರ ವಿವರಗಳೊಂದಿಗೆ ಅಪ್ಡೇಟ್‌ ಮಾಡಿ ಮತ್ತು ಒಂದು ದುರದೃಷ್ಟಕರ ಘಟನೆಯ ಸಂದರ್ಭದಲ್ಲಿ ನಿಮ್ಮ ಹೂಡಿಕೆಗಳನ್ನು ಪಡೆಯಲು ಕಾನೂನುಬದ್ಧ ಉತ್ತರಾಧಿಕಾರವನ್ನು ಸಾಬೀತುಪಡಿಸಬೇಕಾಗುವ ತೊಂದರೆಯಿಂದ ನಿಮ್ಮ ಕುಟುಂಬದವರನ್ನು ಪಾರುಮಾಡಿ.

436
ನಾನು ಹೂಡಿಕೆ ಮಾಡಲು ಸಿದ್ಧ