ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ತುಂಬಾ ಗೊಂದಲಮಯವಾಗಿದೆಯೇ?

ಮ್ಯೂಚುವಲ್ ಫಂಡ್ ಅನ್ನು ಆಯ್ಕೆ ಮಾಡುವುದು ತುಂಬಾ ಗೊಂದಲಮಯವಾಗಿದೆಯೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೌದು, ಹಲವು ರೀತಿಯ ಮ್ಯೂಚುವಲ್ ಫಂಡ್‌ ಸ್ಕೀಮ್‌ಗಳಿವೆ, ಅವುಗಳೆಂದರೆ - ಈಕ್ವಿಟಿ, ಡೆಟ್, ಮನಿಮಾರ್ಕೆಟ್‌, ಹೈಬ್ರಿಡ್‌ ಇತ್ಯಾದಿ. ಭಾರತದಲ್ಲಿ ಹಲವು ಮ್ಯೂಚುವಲ್‌ ಫಂಡ್‌ಗಳಿದ್ದು, ಇದರಲ್ಲಿ ನೂರಾರು ಸ್ಕೀಮ್‌ಗಳನ್ನು ನಿರ್ವಹಿಸಲಾಗುತ್ತಿದೆ. ಹೀಗಾಗಿ, ಒಂದು ಸ್ಕೀಮ್‌ಗೆ ಸೀಮಿತವಾಗುವುದು ಅತ್ಯಂತ ಸಂಕೀರ್ಣ ಮತ್ತು ಗೊಂದಲದ ಸಂಗತಿಯಾಗಿದೆ.

ಹೂಡಿಕೆ ಮಾಡಲು ಸ್ಕೀಮ್‌ ಆಯ್ಕೆ ಮಾಡುವುದು ಹೂಡಿಕೆದಾರರ ಮನಸಿನಲ್ಲಿ ಕೊನೆಯ ಸಂಗತಿಯಾಗಿರಬೇಕು. ಇದಕ್ಕೂ ಮೊದಲು ಹಲವು ಪ್ರಮುಖ ಹಂತಗಳಿವೆ. ಇದು ನಂತರದಲ್ಲಿ ಗೊಂದಲ ನಿವಾರಣೆಗೆ ಸಹಕಾರಿಯಾಗಲಿದೆ.

ಹೂಡಿಕೆದಾರರು ಮೊದಲು ಹೂಡಿಕೆ ಉದ್ದೇಶವನ್ನು ಹೊಂದಿರಬೇಕು. ಅಂದರೆ ನಿವೃತ್ತಿ ಯೋಜನೆ ಅಥವಾ ಮನೆಯನ್ನು ನವೀಕರಿಸುವುದು ಇತ್ಯಾದಿ. ಹೂಡಿಕೆದಾರರು ಎರಡು ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕೆ ಎಷ್ಟು ವೆಚ್ಚ ತಗಲುತ್ತದೆ ಮತ್ತು ಇದು ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಆತ ಖಚಿತಪಡಿಸಿಕೊಲ್ಳಬೇಕು. ಇದೇ ವೇಳೆ, ಎಷ್ಟು ರಿಸ್ಕ್ ತೆಗೆದುಕೊಳ್ಳಬೇಕು ಎಂದೂ ತಿಳಿದುಕೊಳ್ಳಬೇಕು.

ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಹೂಡಿಕೆದಾರರ ಗುರಿ ಮತ್ತು ಉದ್ದೇಶ ಹಾಗೂ ರಿಸ್ಕ್‌ ಪ್ರೊಫೈಲ್‌ ಆಧರಿಸಿ, ಫಂಡ್‌ನ ವಿಧವನ್ನು ಶಿಫಾರಸು ಮಾಡಲಾಗುತ್ತದೆ. ಅಂದರೆ ಈಕ್ವಿಟಿ ಅಥವಾ ಹೈಬ್ರಿಡ್ ಅಥವಾ ಡೆಟ್ ಫಂಡ್‌ ಶಿಫಾರಸು ಮಾಡಲಾಗುತ್ತದೆ. ಆಗ ಮಾತ್ರವೇ ನಿರ್ದಿಷ್ಟ ಸ್ಕೀಮ್‌ಗಳನ್ನು ಅವುಗಳ ಟ್ರ್ಯಾಕ್‌ ರೆಕಾರ್ಡ್‌, ಪೋರ್ಟ್‌ಫೋಲಿಯೋ ಹೊಂದಾಣಿಕೆ ಇತ್ಯಾದಿ ಗಳನ್ನು ಆಧರಿಸಿ ಆಯ್ಕೆ ಮಾಡಲಾಗುತ್ತದೆ.

ಈ ನಿಟ್ಟಿನಲ್ಲಿ, ಆರಂಭದಲ್ಲೇ ಹೂಡಿಕೆಯ ಉದ್ದೇಶದ ಬಗ್ಗೆ ಸ್ಪಷ್ಟತೆ ಇದ್ದರೆ, ಕೊನೆಯಲ್ಲಿ ಫಂಡ್ ಆಯ್ಕೆ ಬಗ್ಗೆ ಗೊಂದಲ ಕಡಿಮೆಯಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ