ಮ್ಯೂಚುವಲ್‌ ಫಂಡ್ಸ್‌ನಿಂದ ನನ್ನ ಹಣವನ್ನು ನಾನು ಹಿಂಪಡೆಯುವುದು ಹೇಗೆ?

ಮ್ಯೂಚುವಲ್‌ ಫಂಡ್ಸ್‌ನಿಂದ ನನ್ನ ಹಣವನ್ನು ನಾನು ಹಿಂಪಡೆಯುವುದು ಹೇಗೆ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್ಸ್‌ನ ಒಂದು ಅತಿದೊಡ್ಡ ಅನುಕೂಲವೆಂದರೆ ಲಿಕ್ವಿಡಿಟಿ. ಹೂಡಿಕೆದಾರರ ಯೂನಿಟ್‌ಗಳನ್ನು ನಗದು ಸ್ವರೂಪಕ್ಕೆ ಸುಲಭವಾಗಿ ಪರಿವರ್ತಿಸಬಹುದು.

ಮ್ಯೂಚುವಲ್‌ ಫಂಡ್‌ಗಳನ್ನು ಭಾರತೀಯ ಷೇರು ವಿನಿಮಯ ಮಂಡಳಿಯು (ಸೆಬಿ) ನಿಯಂತ್ರಿಸುತ್ತಿದ್ದು, ಲಿಕ್ವಿಡಿಟಿಯನ್ನು ಖಚಿತಪಡಿಸುವ ನಿಯಮಗಳನ್ನು ರೂಪಿಸಿದೆ. ಹೆಚ್ಚಿನ ಸಂಖ್ಯೆಯ ಸ್ಕೀಮ್‌ಗಳನ್ನು ಹೊಂದಿರುವ ಓಪನ್‌ ಎಂಡ್ ಸ್ಕೀಮ್‌ಗಳು ಲಿಕ್ವಿಡಿಟಿಯನ್ನೇ ಪ್ರಮುಖ ಸೌಲಭ್ಯವನ್ನಾಗಿ ಒದಗಿಸುತ್ತಿವೆ. ಲಿಕ್ವಿಡಿಟಿ ಎಂಬುದು ಸುಲಭ ಲಭ್ಯತೆ ಅಥವಾ ನಗದಿಗೆ ಸ್ವತ್ತನ್ನು ಪರಿವರ್ತಿಸುವಿಕೆಯಾಗಿದೆ.

ರಿಡೆಂಪ್ಷನ್‌ ಮುಗಿದ ನಂತರ, ರಿಡೆಂಪ್ಷನ್‌ ದಾಖಲು ಮಾಡಿದ 3 ಕೆಲಸದ ದಿನಗಳೊಳಗೆ ಹೂಡಿಕೆದಾರರ ನಿಗದಿತ ಬ್ಯಾಂಕ್‌ ಖಾತೆಗೆ ಫಂಡ್ಸ್‌ ಅನ್ನು ವರ್ಗಾವಣೆ ಮಾಡಲಾಗುತ್ತದೆ.

ಆದರೆ, ಈ ವೇಳೆ ಎರಡು ಸಂಗತಿಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಒಂದು, ಕೆಲವು ಸ್ಕೀಮ್‌ಗಳಲ್ಲಿ ಎಕ್ಸಿಟ್ ಲೋಡ್ ಇರಬಹುದು. ಇಂತಹ ಸನ್ನಿವೇಶಗಳಲ್ಲಿ, ನಿರ್ದಿಷ್ಟ ಅವಧಿಗೂ ಮುನ್ನ, ಉದಾಹರಣೆಗೆ 3 ತಿಂಗಳಿಗೂ ಮುನ್ನ ರಿಡೆಂಪ್ಷನ್‌ಗಳನ್ನು ಮಾಡಿದರೆ ಸ್ವತ್ತು ಮೌಲ್ಯದ ಮೇಲೆ ಶೇ. 0.5 ರಷ್ಟು ಕನಿಷ್ಠ ಪ್ರಮಾಣದ ಲೋಡ್ ವಿಧಿಸಬಹುದು. ಅಲ್ಪಾವಧಿ ಹೂಡಿಕೆದಾರರನ್ನು ದೂರವಿಡಲು ಇಂತಹ ಲೋಡ್‌ಗಳನ್ನು ಫಂಡ್‌ ಮ್ಯಾನೇಜರುಗಳು ವಿಧಿಸುತ್ತಾರೆ. ಎರಡನೆಯದಾಗಿ, ರಿಡೆಂಪ್ಷನ್‌ಗೆ ಕನಿಷ್ಠ ಮೊತ್ತವನ್ನು ಎಎಂಸಿಗಳು ಸೂಚಿಸಬಹುದು. ಹೂಡಿಕೆ ಮಾಡುವುದಕ್ಕೂ ಮುನ್ನ ಎಲ್ಲ ಸ್ಕೀಮ್ ಸಂಬಂಧಿ ದಾಖಲೆಗಳನ್ನು ಓದುವಂತೆ ಹೂಡಿಕೆದಾರರಿಗೆ ಸಲಹೆ ಮಾಡಲಾಗಿದೆ.

440
438
ನಾನು ಹೂಡಿಕೆ ಮಾಡಲು ಸಿದ್ಧ