ನೀವು ಮ್ಯೂಚುಯಲ್ ಫಂಡ್‌ನ ನೇರ ಯೋಜನೆಯಲ್ಲಿ ಹೂಡಿಕೆ ಮಾಡಬೇಕೇ?

ನೀವು ಮ್ಯೂಚುಯಲ್ ಫಂಡ್‌ನ ನೇರ ಯೋಜನೆಯಲ್ಲಿ ಹೂಡಿಕೆ ಮಾಡಬೇಕೇ?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮಾರ್ಕೆಟ್‌ನಲ್ಲಿ ಲಭ್ಯವಿರುವ ಸಾವಿರಾರು ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳ ಪೈಕಿ ಒಬ್ಬ ವ್ಯಕ್ತಿಯು ತನ್ನ ಪೋರ್ಟ್‌ಫೋಲಿಯೋಗೆ ಹೆಚ್ಚು ಸೂಕ್ತವಾದ 4-5 ಫಂಡ್‌ಗಳನ್ನು ಆಯ್ಕೆ ಮಾಡುವುದು ಹೇಗೆ? ನೀವು ಮ್ಯೂಚುವಲ್‌ ಫಂಡ್‌ಗೆ ಹೊಸಬರಾಗಿದ್ದರೆ, ಸಲಹೆಗಾರರು/ವಿತರಕರ ಸಹಾಯದಿಂದ ರೆಗ್ಯುಲರ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತ. ಡೈರೆಕ್ಟ್ ಪ್ಲಾನ್‌ನಲ್ಲಿ ನಿಮಗೆ ಮ್ಯೂಚುವಲ್‌ ಫಂಡ್‌ಗಳು ಹೇಗೆ ಕೆಲಸ ಮಾಡುತ್ತವೆ, ಫಂಡ್‌ನಲ್ಲಿ ನೀವು ಯಾವುದನ್ನು ನೋಡಬೇಕು ಮತ್ತು ಯಾವ ರೀತಿಯ ಫಂಡ್‌ನಲ್ಲಿ ಹೂಡಿಕೆ ಮಾಡಬೇಕು ಇತ್ಯಾದಿಯನ್ನು ತಿಳಿದಿರಬೇಕಾಗುತ್ತದೆ. ನಿಮ್ಮ ಭವಿಷ್ಯದ ಗುರಿಗಳನ್ನು ಮುಂದೂಡಬಹುದಾದ ತಪ್ಪು ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ರೆಗ್ಯುಲರ್ ಪ್ಲಾನ್‌ನಲ್ಲಿ ವಿತರಕರ ಕಮಿಷನ್ ಅನ್ನು ಭರಿಸುವುದು ಉತ್ತಮವಾಗಿದೆ.

ಫಂಡ್‌ಗಳ ವಿಧ, ಫಂಡ್‌ಗಳು ತಮ್ಮ ಹೂಡಿಕೆ ಉದ್ದೇಶಕ್ಕೆ ಅನುಗುಣವಾಗಿ ಹೇಗೆ ಪೋರ್ಟ್‌ಫೋಲಿಯೋ ನಿರ್ಮಿಸುತ್ತವೆ, ಫಂಡ್‌ನಲ್ಲಿನ ರಿಸ್ಕ್‌ನ ಮಟ್ಟ, ಅಲ್ಪಾವಧಿ ಅಥವಾ ದೀರ್ಘಾವಧಿಗೆ ಫಂಡ್ ಸೂಕ್ತವೇ, ನಿಯತ ಆದಾಯ ಅಥವಾ ಸಂಪತ್ತು ರಚನೆಯನ್ನು ಒದಗಿಸುತ್ತದೆಯೇ, ಫಂಡ್‌ನ ಕಾರ್ಯಕ್ಷಮತೆ ಸೂಚಕಗಳು ಯಾವುವು ಮತ್ತು ಅಂತಿಮವಾಗಿ ನೀವು ಯಾಕೆ ಹೂಡಿಕೆ ಮಾಡುತ್ತಿದ್ದೀರಿ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ನಿಮ್ಮ ಗುರಿಗೆ ಸರಿಯಾದ ಫಂಡ್‌ಗಳನ್ನು ಆಯ್ಕೆ ಮಾಡಲು ನಿಮಗೆ ಮಾರ್ಗದರ್ಶನ ಅಗತ್ಯವಿದೆ. ಕೆಲವು ಕಾಲದಿಂದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿರುವ ಹೂಡಿಕೆದಾರರಿಗೆ ಮತ್ತು ಈ ಉತ್ಪನ್ನಗಳನ್ನು ತಿಳಿದುಕೊಂಡಿರುವವರಿಗೆ ಡೈರೆಕ್ಟ್ ಪ್ಲಾನ್ ಚೆನ್ನಾಗಿ ಕೆಲಸ ಮಾಡುತ್ತದೆ. ರೆಗ್ಯುಲರ್ ಪ್ಲಾನ್‌ನಲ್ಲಿ ಹೂಡಿಕೆ ಆರಂಭಿಸುವುದು ಮತ್ತು ನಿಮ್ಮ ಪ್ರಸ್ತುತ ಪೋರ್ಟ್‌ಫೋಲಿಯೋದಲ್ಲಿ ಸ್ವಲ್ಪ ಅನುಭವವನ್ನು ಪಡೆದ ನಂತರ ಭವಿಷ್ಯದ ಖರೀದಿಗಳಿಗೆ ಡೈರೆಕ್ಟ್ ಪ್ಲಾನ್‌ಗೆ ಬದಲಾಗುವುದು ಉತ್ತಮವಾಗಿದೆ.

436
ನಾನು ಹೂಡಿಕೆ ಮಾಡಲು ಸಿದ್ಧ