ಡೈರೆಕ್ಟ್ ಪ್ಲಾನ್ / ರೆಗ್ಯುಲರ್ ಪ್ಲಾನ್ ಯಾವುದು?

ಡೈರೆಕ್ಟ್ ಪ್ಲಾನ್ / ರೆಗ್ಯುಲರ್ ಪ್ಲಾನ್ ಯಾವುದು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಲ್ಲ ಮ್ಯೂಚುವಲ್‌ ಫಂಡ್ ಸ್ಕೀಮ್‌ಗಳು ಎರಡು ಪ್ಲಾನ್‌ಗಳನ್ನು ಹೊಂದಿರುತ್ತವೆ. ಅವುಗಳೆಂದರೆ ಡೈರೆಕ್ಟ್ ಮತ್ತು ರೆಗ್ಯುಲರ್. ಡೈರೆಕ್ಟ್ ಪ್ಲಾನ್‌ನಲ್ಲಿ, ಎಎಂಸಿಯಲ್ಲಿ ನೇರವಾಗಿ ಹೂಡಿಕೆದಾರರು ಹೂಡಿಕೆ ಮಾಡುತ್ತಾರೆ. ಇದರಲ್ಲಿ ವಹಿವಾಟು ನಡೆಸಲು ಯಾವುದೇ ವಿತರಕರು ಇರುವುದಿಲ್ಲ. ರೆಗ್ಯುಲರ್ ಪ್ಲಾನ್‌ನಲ್ಲಿ, ಡಿಸ್ಟ್ರಿಬ್ಯೂಟರ್, ಬ್ರೋಕರ್ ಅಥವಾ ಬ್ಯಾಂಕರ್‌ನಂತಹ ದಲ್ಲಾಳಿಯ ಮೂಲಕ ಹೂಡಿಕೆದಾರರು ಹೂಡಿಕೆ ಮಾಡುತ್ತಾರೆ. ಈ ದಲ್ಲಾಳಿಗಳಿಗೆ ಎಎಂಸಿಗಳು ವಿತರಣಾ ಶುಲ್ಕ ಪಾವತಿ ಮಾಡುತ್ತವೆ. ಇದನ್ನು ಪ್ಲಾನ್‌ನ ಮೇಲೆ ವಿದಿಸಲಾಗಿರುತ್ತದೆ.

ಹೀಗಾಗಿ, ಡೈರೆಕ್ಟ್ ಪ್ಲಾನ್‌ನಲ್ಲಿ ವಿತರಣೆ ಶುಲ್ಕ ಇಲ್ಲದಿರುವುದರಿಂದ ಖರ್ಚಿನ ಅನುಪಾತ ಕಡಿಮೆ ಇರುತ್ತದೆ. ಆದರೆ ವಹಿವಾಟು ನಡೆಸಲು ವಿತರಕರಿಗೆ ಕಮಿಷನ್ ಪಾವತಿ ಮಾಡಿದ್ದಕ್ಕಾಗಿ ರೆಗ್ಯುಲರ್ ಪ್ಲಾನ್ ಸ್ವಲ್ಪ ಹೆಚ್ಚಿನ ಖರ್ಚಿನ ಅನುಪಾತ ಹೊಂದಿರುತ್ತದೆ.

ಎಂಎಫ್ ಸ್ಕೀಮ್‌ಗಳನ್ನು ನಿರ್ವಹಣೆ ಮಾಡುವಾಗ ವೆಚ್ಚ ಮತ್ತು ಖರ್ಚು ಉಂಟಾಗುತ್ತದೆ. ಫಂಡ್ ಮ್ಯಾನೇಜ್‌ಮೆಂಟ್‌ ವೆಚ್ಚಗಳು, ಸೇಲ್ಸ್‌ ಮತ್ತು ವಿತರಣೆ ವೆಚ್ಚಗಳು, ಕಸ್ಟಾಡಿಯನ್‌ ಮತ್ತು ರಿಜಿಸ್ಟ್ರಾರ್‌ ಫೀಗಳು ಇತ್ಯಾದಿ ಇರುತ್ತವೆ. ಇಂತಹ ಎಲ್ಲ ವೆಚ್ಚಗಳನ್ನು ಫಂಡ್‌ನ ಖರ್ಚಿನ ಅನುಪಾತದ ಮೂಲಕ ಭರಿಸಲಾಗುತ್ತದೆ. ನಿಯಂತ್ರಕ ಸೆಬಿ ನಿಗದಿಸಿದ ಮಿತಿಯೊಳಗೆ ಈ ವೆಚ್ಚಗಳು ಇರುತ್ತವೆ.

ಹೀಗಾಗಿ, ಡೈರೆಕ್ಟ್ ಪ್ಲಾನ್ ಮೂಲಕ ನೇರವಾಗಿ ಹೂಡಿಕೆದಾರರು ಹೂಡಿಕೆ ಮಾಡಲು ಬಯಸಿದರೆ, ವೆಚ್ಚದಲ್ಲಿ ಉಳಿತಾಯಕ್ಕೆ ಅನುಗುಣವಾಗಿ ಅಧಿಕ ರಿಟರ್ನ್ ಅನ್ನು ಪಡೆಯುತ್ತಾರೆ. ಆದರೆ ವಿತರಣೆ ಮತ್ತು ಇದಕ್ಕೆ ಸಂಬಂಧಿಸಿದ ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

434
435
ನಾನು ಹೂಡಿಕೆ ಮಾಡಲು ಸಿದ್ಧ