ಹೂಡಿಕೆ ಮಾಡಲು ಡೈರೆಕ್ಟ್ ಮ್ಯೂಚುವಲ್‌ ಫಂಡ್‌ ಪ್ಲಾಟ್‌ಫಾರಂಗಳು ಎಷ್ಟು ಸುರಕ್ಷಿತವಾಗಿವೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಡೈರೆಕ್ಟ್ ಮ್ಯೂಚುವಲ್‌ ಫಂಡ್‌ ಹೂಡಿಕೆ ಪ್ಲಾಟ್‌ಫಾರಂಗಳನ್ನು ಉಚಿತವಾಗಿ ಅಥವಾ ಶುಲ್ಕದ ಮೇಲೆ ಒದಗಿಸುವ ಹಲವು ಫಿನ್‌ಟೆಕ್‌ ಕಂಪನಿಗಳಿವೆ. ಬಹುತೇಕ ಈ ಪ್ಲಾಟ್‌ಫಾರಂಗಳು ಸೆಬಿಯಲ್ಲಿ ನೋಂದಣಿಯಾಗಿರುತ್ತವೆ. ಹೀಗಾಗಿ, ಇವು ಸೆಬಿ ನಿಗದಿಸಿದ ಭದ್ರತೆ ಮತ್ತು ಗೌಪ್ಯತೆ ನಿಯಮಗಳಿಂದ ಉತ್ತಮವಾಗಿ ನಿಯಂತ್ರಿಸಲ್ಪಟ್ಟಿವೆ ಮತ್ತು ಆಡಳಿತಕ್ಕೆ ಒಳಪಟ್ಟಿವೆ. ಇಂದು ಫಾರ್ಚೂನ್ 500 ಕಂಪನಿಗಳೂ ಕೂಡ ಹ್ಯಾಕ್ ಆಗಬಹುದಾಗಿವೆ. ಇದೇ ರೀತಿ, ಮ್ಯೂಚುವಲ್‌ ಫಂಡ್ ಪ್ಲಾಟ್‌ಫಾರಂಗಳೂ ಇರುತ್ತವೆ. ಆದರೆ, ಹೀಗಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತವೆ.

ಬಹುತೇಕ ಡೈರೆಕ್ಟ್ ಪ್ಲಾಟ್‌ಫಾರಂಗಳ ಮಾಲೀಕತ್ವವನ್ನು ಸ್ಟಾರ್ಟಪ್‌ಗಳು ಹೊಂದಿವೆ. ಇವು ತುಂಬಾ ಕಾಲದಿಂದ ಮಾರುಕಟ್ಟೆಯಲ್ಲಿಲ್ಲ. ಈ ಪೈಕಿ ಕೆಲವು ಮುಚ್ಚಬಹುದು ಅಥವಾ ದೊಡ್ಡ ಸಂಸ್ಥೆಗಳು ಇವುಗಳನ್ನು ಖರೀದಿ ಮಾಡಬಹುದು. ಭವಿಷ್ಯದಲ್ಲಿ ಇವರು ಅಸ್ತಿತ್ವವನ್ನು ಕಳೆದುಕೊಂಡರೂ ಕೂಡ ನಿಮ್ಮ ಹೂಡಿಕೆಯ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಯಾಕೆಂದರೆ, ನೀವು ಹೂಡಿಕೆ ಮಾಡಿದ ಹಣವು ಮ್ಯೂಚುವಲ್ ಫಂಡ್‌ನ ಖಾತೆಗೆ ಹೋಗುತ್ತದೆ ಮತ್ತು ನಿಮ್ಮ ಹೂಡಿಕೆಯ ಖಾತೆಯಲ್ಲಿ ಸೆಬಿ ಗುರುತಿಸಿದ ರಿಜಿಸ್ಟ್ರಾರ್ ಇರುತ್ತಾರೆ. 

ನಿಮ್ಮ ಹೂಡಿಕೆಯನ್ನು ನೀವು ಪಡೆಯಲು ಫಂಡ್ ಹೌಸ್ ಅನ್ನು ನೀವು ಯಾವುದೇ ಸಮಯದಲ್ಲಿ ಸಂಪರ್ಕಿಸಬಹುದು. ಡೈರೆಕ್ಟ್ ಪ್ಲಾಟ್‌ಫಾರಂಗಳ ಬಳಕೆದಾರರ ಅನುಭವ, ಶುಲ್ಕ, ಅವು ಒದಗಿಸುವ ಸೇವೆಗಳು ಮತ್ತು ಫಂಡಿಂಗ್ ಟೀಮ್‌ ಬಗ್ಗೆ ನಿಮ್ಮ ವಿಶ್ವಾಸ ಮೂಡಿಸಿದರೆ ನೀವು ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಭವಿಷ್ಯ ಮತ್ತು ನೀವು ಮಾಡಿದ ಹೂಡಿಕೆಯ ಬಗ್ಗೆ ಚಿಂತೆ ಮಾಡಬೇಡಿ. ಇವು ಎಂದಿಗೂ ಫಂಡ್‌ ಹೌಸ್‌ನಲ್ಲಿ ಸುರಕ್ಷಿತವಾಗಿಯೇ ಇರುತ್ತವೆ.

436
ನಾನು ಹೂಡಿಕೆ ಮಾಡಲು ಸಿದ್ಧ