ನಿಗದಿತ ಸಮಯದ ವರೆಗೆ ಹೂಡಿಕೆ ಮಾಡಿಕೊಂಡೇ ಇರಬೇಕಾದ ಫಂಡ್‌ಗಳು ಇವೆಯೇ?

ನಿಗದಿತ ಸಮಯದ ವರೆಗೆ ಹೂಡಿಕೆ ಮಾಡಿಕೊಂಡೇ ಇರಬೇಕಾದ ಫಂಡ್‌ಗಳು ಇವೆಯೇ? zoom-icon
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಅತ್ಯಂತ ಮಹತ್ವದ ಅನುಕೂಲವೆಂದರೆ ಲಿಕ್ವಿಡಿಟಿ ಆಗಿದೆ. ಅಂದರೆ ಹೂಡಿಕೆಯನ್ನು ನಗದು ರೂಪದಲ್ಲಿ ಪರಿವರ್ತಿಸುವ ಅನುಕೂಲ.

ಆದಾಯ ತೆರಿಗೆ 80ಸಿಸಿ ವಿಭಾಗದ ಅಡಿಯಲ್ಲಿ ತೆರಿಗೆ ಲಾಭಗಳನ್ನು ಒದಗಿಸುವ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್‌ಗಳು (ಇಎಲ್‌ಎಸ್‌ಎಸ್‌) 3 ವರ್ಷಗಳವರೆಗೆ ಲಾಕ್‌ ಇನ್‌ ಯೂನಿಟ್‌ಗಳನ್ನು ಹೊಂದಿರುವ ನಿಯಮಾವಳಿಯನ್ನು ಅನುಸರಿಸುತ್ತವೆ.

ಇದರಲ್ಲಿ ಇನ್ನೂ ಒಂದು ಸ್ಕೀಮ್‌ ಗಳ ವಿಭಾಗವಿದ್ದು ಇದನ್ನು “ಫಿಕ್ಸೆಡ್‌ ಮೆಚ್ಯುರಿಟಿ ಪ್ಲಾನ್‌ಗಳು” (ಎಫ್‌ಎಂಪಿಗಳು) ಎಂದು ಕರೆಯಲಾಗುತ್ತದೆ. ಇದರಲ್ಲಿ ಹೂಡಿಕೆದಾರರು ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡಿರಬೇಕಾಗುತ್ತದೆ ಮತ್ತು ಸ್ಕೀಮ್‌ನ ಕೊಡುಗೆ ದಾಖಲೆಯಲ್ಲಿ ಮೊದಲೇ ವಿವರಿಸಲಾಗಿರುತ್ತದೆ. ಈ ಸ್ಕೀಮ್‌ಗಳು ಮೂರು ತಿಂಗಳಿಂದ ಕೆಲವು ವರ್ಷಗಳವರೆಗೆ ಹೂಡಿಕೆ ಅವಧಿಯನ್ನು ಹೊಂದಿರುತ್ತವೆ.

ಕೆಲವು ಓಪನ್‌ ಎಂಡ್ ಸ್ಕೀಮ್‌ಗಳು ಎಕ್ಸಿಟ್ ಲೋಡ್ ಅವಧಿಯನ್ನು ನಿರ್ದಿಷ್ಟಪಡಿಸಬಹುದು. ಉದಾಹರಣೆಗೆ, 6 ತಿಂಗಳುಗಳಲ್ಲಿ ರಿಡೀಮ್ ಮಾಡಿಕೊಳ್ಳುವ ಯೂನಿಟ್‌ಗಳ ಮೇಲೆ ಎನ್‌ಎವಿಗೆ ಅನುಗುಣವಾಗಿ ಶೇ. 0.50 ರಷ್ಟು ಎಕ್ಸಿಟ್ ಲೋಡ್‌ ವಿಧಿಸಲಾಗುವುದು ಎಂದು ಸ್ಕೀಮ್‌ ನಿರ್ದಿಷ್ಟಪಡಿಸಬಹುದು.

ನಿರ್ದಿಷ್ಟ ಕಾಲಾವಧಿಯ ನಿಯಮ ಮತ್ತು ನೀತಿಗಳು ಇದ್ದರೂ, ಪ್ರತಿ ಸ್ಕೀಮ್‌ಗಳ ವಿಧಕ್ಕೂ ಸೂಕ್ತವಾದ ಅಥವಾ ಸರಿಯಾದ ಕಾಲಾವಧಿಯನ್ನು ತಿಳಿಯಲು ಹೂಡಿಕೆ ಸಲಹೆಗಾರರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

439
ನಾನು ಹೂಡಿಕೆ ಮಾಡಲು ಸಿದ್ಧ