ಫಿಕ್ಸೆಡ್ ಇನ್‌ಕಮ್‌ ಮ್ಯೂಚುವಲ್ ಫಂಡ್‌ಗಳು ಎಂದರೇನು?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಫಿಕ್ಸೆಡ್ ಇನ್‌ಕಮ್‌ ಫಂಡ್‌ಗಳು ಎಂದರೆ ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಅಸೆಟ್‌ಗಳನ್ನು ಹೊಂದಿರುವ ಮ್ಯೂಚುವಲ್ ಫಂಡ್ ಸ್ಕೀಮ್‌ಗಳಾಗಿರುತ್ತವೆ. ಇದರಲ್ಲಿ ಉದಾಹರಣೆಗೆ ಸರ್ಕಾರಿ ಸೆಕ್ಯುರಿಟಿಗಳು, ಡಿಬೆಂಚರ್‌ಗಳು, ಕಾರ್ಪೊರೇಟ್ ಬಾಂಡ್‌ಗಳು ಮತ್ತು ಇತರ ಹಣದ ಮಾರ್ಕೆಟ್ ಸಲಕರಣೆಗಳು ಇರುತ್ತವೆ. ಈ ಫಂಡ್‌ಗಳನ್ನೂ ಕೂಡಾ ವಿಶಾಲವಾಗಿ ಡೆಟ್ ಫಂಡ್‌ಗಳು ಎಂದು ಕರೆಯಲಾಗುತ್ತದೆ. ಕಾರ್ಪೊರೇಟ್ ಬಾಂಡ್ ಫಂಡ್‌ಗಳು, ಡೈನಾಮಿಕ್ ಬಾಂಡ್ ಫಂಡ್‌ಗಳು, ಬ್ಯಾಂಕಿಂಗ್ ಮತ್ತು ಪಿಎಸ್‌ಯು ಡೆಟ್ ಫಂಡ್‌ಗಳು, ಜಿಲ್ಟ್‌ ಫಂಡ್‌ಗಳು, ಲಿಕ್ವಿಡ್ ಫಂಡ್‌ಗಳು ಇತ್ಯಾದಿಯು ಫಿಕ್ಸೆಡ್ ಇನ್‌ಕಮ್ ಫಂಡ್‌ಗಳ ವರ್ಗಗಳಡಿಯಲ್ಲಿ ಬರುತ್ತವೆ.

ಫಿಕ್ಸೆಡ್ ಇನ್‌ಕಮ್‌ ಮ್ಯೂಚುವಲ್ ಫಂಡ್‌ ಸಾಮಾನ್ಯವಾಗಿ ಈ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ:

ಫಿಕ್ಸೆಡ್ ಇನ್‌ಕಮ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವುದು: ಬಾಂಡ್‌ಗಳು ಮತ್ತು ಇತರ ಫಿಕ್ಸೆಡ್ ಇನ್‌ಕಮ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡುವ ಮೂಲಕ ರಿಟರ್ನ್ಸ್ ಜನರೇಟ್ ಮಾಡುವ ಗುರಿಯನ್ನು ಇದು ಹೊಂದಿದೆ. ಅಂದರೆ, ಈ ಫಂಡ್‌ಗಳು ಬಾಂಡ್‌ಗಳನ್ನು ಖರೀದಿ ಮಾಡುತ್ತವೆ ಮತ್ತು ಹೂಡಿಕೆಗಳ ಮೇಲೆ ಬಡ್ಡಿ ಆದಾಯವನ್ನು ಗಳಿಸುತ್ತವೆ.

ಮಾರ್ಕೆಟ್ ಏರಿಳಿತ ಕಡಿಮೆ: ಫಿಕ್ಸೆಡ್ ಇನ್‌ಕಮ್‌ ಸೆಕ್ಯುರಿಟಿಗಳಲ್ಲಿ ಏರಿಳಿತ ಕಡಿಮೆ ಇರುತ್ತದೆ ಮತ್ತು ಮಾರುಕಟ್ಟೆಯ ಏರಿಳಿತದಿಂದ ಕಡಿಮೆ ಪರಿಣಾಮವನ್ನು ಹೊಂದಿರುತ್ತದೆ.

ವೈವಿಧ್ಯಮಯ ಪೋರ್ಟ್‌ಫೋಲಿಯೋ: ಡೆಟ್ ಫಂಡ್‌ಗಳು ಡೆಟ್ ಮತ್ತು ಮನಿ ಮಾರ್ಕೆಟ್ ಸಲಕರಣೆಗಳೆರಡರಲ್ಲೂ ಹೂಡಿಕೆ ಮಾಡುತ್ತವೆ (ಉದಾ., ವಾಣಿಜ್ಯ ಕಾಗದಪತ್ರಗಳು, ಟ್ರೆಷರಿ ಬಿಲ್‌ಗಳು ಮತ್ತು ಇನ್ನಷ್ಟು). ಇದರಿಂದ ಡೆಟ್ ಫಂಡ್‌ಗಳ ಪೋರ್ಟ್‌ಫೋಲಿಯೋ ವೈವಿಧ್ಯಮಯವಾಗುತ್ತದೆ ಮತ್ತು ಬ್ಯಾಂಕ್‌ ಡೆಪಾಸಿಟ್‌ಗಳಿಗಿಂತ ಹೆಚ್ಚು ರಿಟರ್ನ್ಸ್ ಅನ್ನು ನೀಡಬಹುದು. 

ಫಿಕ್ಸೆಡ್ ಇನ್‌ಕಮ್‌ ಫಂಡ್‌ಗಳ ಹೆಚ್ಚುವರಿ ವೈಶಿಷ್ಟ್ಯಗಳೆಂದರೆ:

  • ತನ್ನಲ್ಲಿರುವ ಬಾಂಡ್‌ಗಳು ಮತ್ತು ಡಿಬೆಂಚರುಗಳು ಕೊಡುವ ಬಡ್ಡಿಯನ್ನು ಡೆಟ್ ಫಂಡ್‌ಗಳು ಹೊಂದುವುದರ ಜೊತೆಗೆ, ಬೆಲೆ ಏರಿಕೆಯ ಅನುಕೂಲವನ್ನೂ ಪಡೆಯುತ್ತವೆ. 
  • ಅಲ್ಲದೆ, ಈ ಫಂಡ್‌ಗಳಿಗೆ ಲಾಕ್ ಇನ್ ಪೀರಿಯಡ್ ಇರುವುದಿಲ್ಲ. ಅಂದರೆ, ಹೂಡಿಕೆದಾರರು ತಮಗೆ ಬೇಕಾದಾಗ ಹಣವನ್ನು ವಾಪಸ್ ಪಡೆಯಬಹುದಾಗಿದ್ದು, ಇದು ಎಕ್ಸಿಟ್ ಲೋಡ್ ಮತ್ತು ಇತರ ವೆಚ್ಚಗಳು ಇದ್ದರೆ ಅದಕ್ಕೆ ಒಳಪಟ್ಟಿರುತ್ತವೆ.
  • ಇತರ ಮ್ಯೂಚುವಲ್ ಫಂಡ್‌ಗಳ (ಈಕ್ವಿಟಿಗಳೊಂದಿಗೆ) ಜೊತೆಗೆ ಫಿಕ್ಸೆಡ್ ಇನ್‌ಕಮ್ ಫಂಡ್‌ಗಳನ್ನು ಹೋಲಿಕೆ ಮಾಡಿದಾಗ, ತುಲನೆಯಲ್ಲಿ ರಿಸ್ಕ್‌ ಕಡಿಮೆ ಇರುತ್ತದೆ. ಇದು ಕೂಡಾ ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋಗೆ ಒಂದು ಹಂತದ ಸ್ಥಿರತೆಯನ್ನು ನೀಡುತ್ತದೆ ಮತ್ತು ನಿಮ್ಮ ಪೋರ್ಟ್‌ಫೋಲಿಯೋವನ್ನು ಸಮತೋಲನಗೊಳಿಸುತ್ತದೆ ಹಾಗೂ ಒಟ್ಟಾರೆ ರಿಸ್ಕ್ ಅನ್ನು ಕಡಿಮೆ ಮಾಡುತ್ತದೆ. 

ಆದರೂ, ಈ ಫಂಡ್‌ಗಳು ರಿಸ್ಕ್‌ನಿಂದ ಮುಕ್ತವಾಗಿವೆ ಎಂದರ್ಥವಲ್ಲ. ಅವುಗಳಿಗೆ ಈಗಲೂ ಒಂದು ಮಟ್ಟದ ರಿಸ್ಕ್‌ ಇರುತ್ತದೆ. 

ಹಕ್ಕು ನಿರಾಕರಣೆ: ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

285
ನಾನು ಹೂಡಿಕೆ ಮಾಡಲು ಸಿದ್ಧ