ಕಡಿಮೆ ವಯಸ್ಸಿನಲ್ಲೇ ನೀವು ಏಕೆ ಹೂಡಿಕೆಯನ್ನು ಆರಂಭಿಸಬೇಕು?

ಕಡಿಮೆ ವಯಸ್ಸಿನಲ್ಲೇ ನೀವು ಏಕೆ ಹೂಡಿಕೆಯನ್ನು ಆರಂಭಿಸಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಲತಾ ಮತ್ತು ನೇಹಾ ಸ್ನೇಹಿತೆಯರು. ಇಬ್ಬರೂ ಬೇರೆ ಬೇರೆ ವಯಸ್ಸಿನಲ್ಲಿ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಆರಂಭಿಸಿದರು. ಲತಾಗೆ 25 ವರ್ಷವಾದಾಗ ಆಕೆ ಪ್ರತಿ ತಿಂಗಳು ರೂ. 5,000 ಹೂಡಿಕೆ ಆರಂಭಿಸಿದಳು ಮತ್ತು ನೇಹಾ 35 ವರ್ಷವಾದಾಗ ಅಷ್ಟೇ ಹೂಡಿಕೆ ಆರಂಭಿಸಿದಳು. ಪ್ರತಿ ವರ್ಷ 12% ರಿಟರ್ನ್‌ ಊಹಿಸಿದರೆ, 60ನೇ ವರ್ಷದಲ್ಲಿ ಅವರಿಬ್ಬರ ಹೂಡಿಕೆ ಪೋರ್ಟ್‌ಫೋಲಿಯೋ ಹೀಗಿರುತ್ತದೆ:

  • 60ನೇ ವರ್ಷದಲ್ಲಿ ಲತಾ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಒಟ್ಟು ಹೂಡಿಕೆ ಮಾಡಿದ ಮೊತ್ತ 21 ಲಕ್ಷ ರೂ. ಆಗಿರುತ್ತದೆ ಮತ್ತು ಪೋರ್ಟ್‌ಫೋಲಿಯೋದ ಒಟ್ಟು ಮೌಲ್ಯ ರೂ. 3.22 ಕೋಟಿ ಆಗಿರುತ್ತದೆ.
  • 60ನೇ ವರ್ಷದಲ್ಲಿ ನೇಹಾ ಹೂಡಿಕೆ ಪೋರ್ಟ್‌ಫೋಲಿಯೋದಲ್ಲಿ ಒಟ್ಟು ಹೂಡಿಕೆ ಮಾಡಿದ ಮೊತ್ತ 15 ಲಕ್ಷ ರೂ. ಆಗಿರುತ್ತದೆ ಮತ್ತು ಪೋರ್ಟ್‌ಫೋಲಿಯೋದ ಮೌಲ್ಯವು 93.04 ಲಕ್ಷ ರೂ. ಆಗಿರುತ್ತದೆ.

ನೀವೇ ನೋಡುವಂತೆ ಲತಾ ಪೋರ್ಟ್‌ಫೋಲಿಯೋ ಗಮನಾರ್ಹವಾಗಿ ಏರಿಕೆ ಕಂಡಿದೆ. ಏಕೆಂದರೆ, ನೇಹಾಗಿಂತಲೂ ಮೊದಲೇ ಆಕೆ ಹೂಡಿಕೆ ಆರಂಭಿಸಿದ್ದಳು. ಮೊದಲೇ ಹೂಡಿಕೆ ಮಾಡುವುದನ್ನು ಆರಂಭಿಸುವುದರ ಅನುಕೂಲವು ಇದು ಸಂಚಯದ ಶಕ್ತಿಯನ್ನು ನೀಡುತ್ತದೆ ಮತ್ತು ನಿಮ್ಮ ಹೂಡಿಕೆಯ ಮೇಲೆ ರಿಟರ್ನ್ಸ್‌ ಹೆಚ್ಚಳ ಮಾಡುವ ಅವಕಾಶವೂ ಹೆಚ್ಚಿರುತ್ತದೆ.

ಲೇಖನದಲ್ಲಿ ನಮೂದಿಸಿದ ಲೆಕ್ಕಾಚಾರಗಳು ಚಿತ್ರಣದ ಉದ್ದೇಶಕ್ಕೆ ಮಾತ್ರ ಎಂಬುದನ್ನು ಗಮನಿಸಿ.

ಹೂಡಿಕೆ ಮತ್ತು ಉಳಿತಾಯದ ಪ್ರಾಮುಖ್ಯತೆ

ಉಳಿತಾಯ ಮತ್ತು ಹೂಡಿಕೆಯ ಆರ್ಥಿಕ ಅಬ್ಯಾಸವು ವ್ಯಕ್ತಿಗಳಿಗೆ ತಮ್ಮ ಹಣಕಾಸು ಉದ್ದೇಶಗಳಿಗೆ ಬೆಂಬಲ ನೀಡುವ ಮತ್ತು ಅವರ ಭವಿಷ್ಯದ ಭದ್ರತೆಯನ್ನು ಖಚಿತಪಡಿಸುವ ಸಾಮರ್ಥ್ಯವನ್ನುಹೊಂದಿವೆ.

ತುರ್ತು ಸನ್ನಿವೇಶಗಳಿಗೆ ಮತ್ತು ಅನಿರೀಕ್ಷಿತ ವೆಚ್ಚಗಳಿಗೆ ಹಣವನ್ನು ಸಂಚಯಗೊಳಿಸಿಕೊಳ್ಳಲು ಉಳಿತಾಯವು ಅನುವು ಮಾಡುತ್ತದೆ. ಇನ್ನೊಂದೆಡೆ, ಹೂಡಿಕೆಯು ನಿಮ್ಮ ಹಣವನ್ನು ಕೆಲಸಕ್ಕೆ ಹಚ್ಚಲು ಮತ್ತು ಅದರ ಮೇಲೆ ರಿಟರ್ನ್ಸ್‌ ಪಡೆಯಲು ಅನುವು ಮಾಡುತ್ತದೆ. ಇದರಿಂದ ಸಂಪತ್ತು ನಿರ್ಮಾಣವಾಗುತ್ತದೆ ಮತ್ತು ದೀರ್ಘಕಾಲೀನ ಹಣಕಾಸು ಗುರಿಗಳನ್ನು ಸಾಧಿಸಬಹುದು.

ಉಳಿತಾಯ ಮಾಡುವ ಮತ್ತು ಹೂಡಿಕೆ ಮಾಡುವ ಮೂಲಕ, ನೀವು ಗಟ್ಟಿಮುಟ್ಟಾದ ಆರ್ಥಿಕ ಅಡಿಪಾಯವನ್ನು ನಿರ್ಮಿಸಬಹುದು. ನಿಮ್ಮ ಹಣಕಾಸನ್ನು ದಕ್ಷವಾಗಿ ನಿರ್ವಹಿಸಬಹುದು ಮತ್ತು ಆರಾಮದಾಯಕ ಮತ್ತು ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಬಹುದು. ದೀರ್ಘಕಾಲದಲ್ಲಿ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಮೊದಲೇ ಆರಂಭಿಸುವುದು, ಶಿಸ್ತುಬದ್ಧವಾಗಿರುವುದು ಮತ್ತು ಸುಸ್ಥಿರವಾಗಿರುವುದು ಅತ್ಯಂತ ಮುಖ್ಯವಾಗಿದೆ.

 

ಮೊದಲೇ ಹೂಡಿಕೆಯನ್ನು ಆರಂಭಿಸುವ ಐದು ಪ್ರಯೋಜನಗಳು

ಮೊದಲೇ ಹೂಡಿಕೆ ಆರಂಭಿಸುವುದರ ಅನುಕೂಲವನ್ನು ಸಾಕಷ್ಟು ಪ್ರಚುರಪಡಿಸಲಾಗಿಲ್ಲ. ಈಗಲೇ ನೀವು ಹೂಡಿಕೆಯನ್ನು ಆರಂಭಿಸಬೇಕು ಎಂಬುದಕ್ಕೆ ಅಗ್ರ ಐದು ಕಾರಣಗಳು ಇಲ್ಲಿವೆ:

  1. ಸಂಚಯದ ಶಕ್ತಿ

ನೀವು ಎಷ್ಟು ಬೇಗ ಆರಂಭಿಸುತ್ತೀರೋ, ನಿಮ್ಮ ಹೂಡಿಕೆ ಬೆಳೆಯಲು ಮತ್ತು ಸಂಚಯವಾಗಲು ಹೆಚ್ಚು ಸಮಯವನ್ನು ಹೊಂದಿರುತ್ತದೆ. ಸಂಚಯದ ಶಕ್ತಿ ಎಂದರೆ ನಿಮ್ಮ ಹೂಡಿಕೆ ಹೆಚ್ಚು ರಿಟರ್ನ್ಸ್‌ ಅನ್ನು ಜನರೇಟ್ ಮಾಡುತ್ತದೆ ಮತ್ತು ಸಣ್ಣ ಹೂಡಿಕೆಯೂ ಕೂಡ ಕಾಲ ಸರಿದಂತೆ ಗಮನಾರ್ಹವಾಗಿ ಬೆಳೆಯುತ್ತದೆ. ಉದಾಹರಣೆಗೆ, 30 ವರ್ಷಗಳವರೆಗೆ ವಾರ್ಷಿಕ 12% ರಿಟರ್ನ್‌ನಲ್ಲಿ ಎಸ್‌ಐಪಿಯಲ್ಲಿ ಪ್ರತಿ ತಿಂಗಳು ರೂ. 500 ಹೂಡಿಕೆ ಮಾಡುತ್ತಿದ್ದರೆ, ನೀವು 17.47 ಲಕ್ಷ ರೂ. ಸಂಚಯ ಮಾಡಿರುತ್ತೀರಿ.

  1. ಮಾರುಕಟ್ಟೆ ಏರಿಳಿತದಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ

ಬೇಗ ಹೂಡಿಕೆ ಮಾಡಲು ಆರಂಭಿಸುವುದರಿಂದ ನಿಮಗೆ ಮಾರುಕಟ್ಟೆಯಲ್ಲಿ ಕುಸಿತ ಅಥವಾ ಏರಿಳಿತಗಳಿಂದ ಚೇತರಿಸಿಕೊಳ್ಳಲು ಮತ್ತು ನಿಮ್ಮ ಆರ್ಥಿಕ ಗುರಿಗಳನ್ನು ತಲುಪಲು ಹೆಚ್ಚು ಸಮಯ ಸಿಗುತ್ತದೆ. ಬೇಗ ಹೂಡಿಕೆ ಆರಂಭಿಸಿದಾಗ ನಿಮ್ಮ ಹೂಡಿಕೆಯ ವಿಚಾರದಲ್ಲಿ ಹೆಚ್ಚು ರಿಸ್ಕ್‌ ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ ಮತ್ತು ನಿಮ್ಮ ಹೂಡಿಕೆ ಉತ್ತಮ ರಿಟರ್ನ್ಸ್‌ ನೀಡದಿದ್ದರೆ ಚೇತರಿಸಿಕೊಳ್ಳಲು ನಿಮ್ಮ ಬಳಿ ಸಮಯ ಇರುತ್ತದೆ.

  1. ಆರ್ಥಿಕ ಶಿಸ್ತನ್ನು ರೂಪಿಸುವುದು

ಬೇಗ ಹೂಡಿಕೆ ಆರಂಭಿಸುವುದಕ್ಕೆ ಆರ್ಥಿಕ ಶಿಸ್ತು ಮತ್ತು ನಿಮ್ಮ ಹೂಡಿಕೆ ಪೋರ್ಟ್‌ಫೋಲಿಯೋಗೆ ನಿಯತವಾಗಿ ಹಣ ಹಾಕುತ್ತಿರಬೇಕಾಗುತ್ತದೆ. ಈ ಹವ್ಯಾಸವು ನಿಮ್ಮಲ್ಲಿ ಹಣಕಾಸಿನ ಕುರಿತ ಉತ್ತಮ ಹವ್ಯಾಸ ರೂಪಿಸಿಕೊಳ್ಳಲು ಸಹಾಯ ಮಾಡುತ್ತದೆಮತ್ತು ನಿಮ್ಮ ಆರ್ಥಿಕ ಗುರಿಗಳನ್ನು ಸಾಧಿಸುವುದನ್ನು ಸುಲಭ ಮಾಡುತ್ತದೆ. ಉದಾಹರಣೆಗೆ, ಪ್ರತಿ ತಿಂಗಳೂ ಎಸ್‌ಐಪಿಗಳಲ್ಲಿ ಸಣ್ಣ ಮಟ್ಟದ ಹೂಡಿಕೆ ಮಾಡುವ ಮೂಲಕ ನಿಮ್ಮ ಹೂಡಿಕೆ ಹವ್ಯಾಸವನ್ನು ನೀವು ಸ್ವಯಂಚಾಲಿತಗೊಳಿಸುತ್ತದೆ.

  1. ಉತ್ತಮ ಆರ್ಥಿಕ ಭದ್ರತೆ

ಬೇಗ ಹೂಡಿಕೆ ಮಾಡುವುದು ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸಲು ಮತ್ತು ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಸಹಾಯ ಮಾಡುತ್ತದೆ. ಮೊದಲೇ ಹೂಡಿಕೆ ಆರಂಭಿಸುವುದರಿಂದ, ಕಾಲಾನಂತರದಲ್ಲಿ ನೀವು ಗಮನಾರ್ಹ ಮೊತ್ತವನ್ನು ಸಂಚಯಗೊಳಿಸಿಕೊಳ್ಳಬಹುದು. ಇದು ನಿಮಗೆ ಆರ್ಥಿಕ ಸ್ಥಿರತೆ ಮತ್ತು ಮನಃಶಾಂತಿಯನ್ನು ನೀಡುತ್ತದೆ.

  1. ಕಡಿಮೆ ಜವಾಬ್ದಾರಿಗಳೊಂದಿಗೆ ಹೆಚ್ಚು ಹೂಡಿಕೆ

ನೀವು ಯುವಕರಾಗಿದ್ದಾಗ ಹೂಡಿಕೆಯನ್ನು ಆರಂಭಿಸುವಾಗ ನಿಮ್ಮ ಜವಾಬ್ದಾರಿಗಳು ಕಡಿಮೆ ಇರುತ್ತವೆ. ಅಂದರೆ, ನೀವು ಹೆಚ್ಚು ಹಣವನ್ನು ಹೂಡಿಕೆಗೆ ನಿಗದಿ ಮಾಡಬಹುದು. ನಿಮಗೆ ವಯಸ್ಸಾಗುತ್ತಿದ್ದಂತೆ, ನಿಮಗೆ ಹೆಚ್ಚು ಹೆಚ್ಚು ಹಣಕಾಸಿನ ಜವಾಬ್ದಾರಿಗಳಿರುತ್ತವೆ. ಕುಟುಂಬದ ಕಾಳಜಿ ವಹಿಸಬೇಕು, ಮಕ್ಕಳ ಶಿಕ್ಷಣಕ್ಕೆ ಹಣ ನೀಡಬೇಕು ಮತ್ತು ಆರೋಗ್ಯ ಸೇವೆ ಅಗತ್ಯಗಳಿಗೆ ಹಣ ನೀಡಬೇಕು ಇತ್ಯಾದಿ ಇರುತ್ತದೆ. ಇದರಿಂದ ಹೂಡಿಕೆ ಮಾಡಲು ಹೆಚ್ಚಿನ ಹಣ ನಿಮ್ಮ ಬಳಿ ಇಲ್ಲದಂತಾಗುತ್ತದೆ.

ಹೂಡಿಕೆ ಆರಂಭಿಸುವುದು ಹೇಗೆ?

 

ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಮಾಡುವುದು ದೀರ್ಘಕಾಲದಲ್ಲಿ ಸಂಪತ್ತನ್ನು ಸೃಷ್ಟಿಸಿಕೊಳ್ಳುವುದಕ್ಕೆ ಉತ್ತಮ ವಿಧಾನವಾಗಿದೆ. ಭಾರತದಲ್ಲಿ ಮ್ಯೂಚುವಲ್‌ ಫಂಡ್ಸ್‌ನಲ್ಲಿ ಹೂಡಿಕೆ ಆರಂಭಿಸುವುದಕ್ಕೆ ಇಲ್ಲಿ ಕೆಲವು ಹಂತಗಳನ್ನು ನೀಡಲಾಗಿದೆ:

 

  1. ನೀವು ಹೂಡಿಕೆ ಆರಂಭಿಸುವುದಕ್ಕೂ ಮೊದಲು, ನಿಮ್ಮ ಹೂಡಿಕೆ ಗುರಿಗಳನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ನೀವು ಹೂಡಿಕೆ ಮಾಡುವ ಮ್ಯೂಚುವಲ್‌ ಫಂಡ್‌ ವಿಧವನ್ನು ನಿರ್ಧಾರ ಮಾಡಲು ಇದು ಸಹಾಯ ಮಾಡುತ್ತದೆ.
  2. ನಿಮ್ಮ ಹೂಡಿಕೆ ಗುರಿಗಳನ್ನು ನೀವು ತಿಳಿದುಕೊಂಡ ನಂತರ, ನಿಮ್ಮ ಅಗತ್ಯಗಳಿಗೆ ಹೊಂದುವ ಮ್ಯೂಚುವಲ್‌ ಫಂಡ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಭಾರತದಲ್ಲಿ ಹಲವು ಮ್ಯೂಚುವಲ್‌ ಫಂಡ್‌ ಇವೆ. ಹೀಗಾಗಿ, ಸ್ವಲ್ಪ ಸಂಶೋಧನೆ ಮಾಡಿ ಮತ್ತು ಉತ್ತಮ ಟ್ರ್ಯಾಕ್‌ ರೆಕಾರ್ಡ್‌  ಹೊಂದಿರುವ ಫಂಡ್ ಆಯ್ಕೆ ಮಾಡಿ ಮತ್ತು ಅದು ನಿಮ್ಮ ಹೂಡಿಕೆ ಗುರಿಗಳಿಗೆ ಅನುಗುಣವಾಗಿದೆಯೇ ಎಂದು ನೋಡಿ.
  3. ಮ್ಯೂಚುವಲ್‌ ಫಂಡ್ ಅನ್ನು ನಿಯತವಾಗಿ ಮೇಲ್ವಿಚಾರಣೆ ಮಾಡುವದುರಿಂದ ತಮ್ಮ ಮ್ಯೂಚುವಲ್‌ ಫಂಡ್‌ನ ಕಾರ್ಯಕ್ಷಮತೆಯ ಬಗ್ಗೆ ಹೂಡಿಕೆದಾರರಿಗೆ ಮಾಹಿತಿ ಲಭ್ಯವಾಗುತ್ತಿರುತ್ತದೆ ಮತ್ತು ತಮ್ಮ ಹೂಡಿಕೆ ಕಾರ್ಯತಂತ್ರಕ್ಕೆ ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಬಹುದಾಗಿರುತ್ತದೆ. ತಮ್ಮ ಹಣಕಾಸಿನ ಗುರಿಗಳು ಮತ್ತು ಕಾಲಾವಧಿಗೆ ಹೂಡಿಕೆಯು ಹೊಂದುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೂಡಿಕೆದಾರರಿಗೆ ಇದು ಸಹಾಯ ಮಾಡುತ್ತದೆ.
  4. ಸರಿಯಾಗಿ ಮತ್ತು ನಿಮ್ಮ ಆರ್ಥಿಕ ಗುರಿಗಳಿಗೆ ಅನುಗುಣವಾಗಿ ಹೂಡಿಕೆ ಮಾಡಲು ಆರ್ಥಿಕ ಪರಿಣಿತರು ಅಥವಾ ವೃತ್ತಿಪರರ ಸಲಹೆಯನ್ನು ಕೂಡಾ ನೀವು ಪಡೆಯಬಹುದು.

 

ಇತ್ಯರ್ಥ

ನೀವು ಮೊದಲೇ ಹೂಡಿಕೆ ಮಾಡಲು ಪ್ರಾರಂಭಿಸಿದರೆ, ನಿಮ್ಮ ಕಡೆ ಇರುವ ಸಮಯದಿಂದ ಮತ್ತು ಸಂಯೋಜನೆಯ ಶಕ್ತಿಯಿಂದ ನೀವು ಪ್ರಯೋಜನ ಪಡೆಯಬಹುದು. ಆರಂಭಿಕ ಹೂಡಿಕೆಯ ಪ್ರಯೋಜನಗಳು ಮತ್ತು ಹೂಡಿಕೆಯನ್ನು ಹೇಗೆ ಪ್ರಾರಂಭಿಸುವುದು ಎಂದು ಈಗ ನಿಮಗೆ ತಿಳಿದಿದೆ, ಇನ್ನು ಮುಂದೆ ಕಾಯಬೇಡಿ. ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಈಗಲೇ ಪ್ರಾರಂಭಿಸಿ!

ಹಕ್ಕುತ್ಯಾಗ

ಮ್ಯೂಚುವಲ್ ಫಂಡ್ ಯೋಜನೆಗಳ ವಿವಿಧ ವರ್ಗಗಳ ಬಗ್ಗೆ ಎಎಂಎಫ್ಐ (AMFI) ವೆಬ್ ಸೈಟ್ ನಲ್ಲಿ ಪ್ರಸಾರವಾದ ಮಾಹಿತಿಯು ಮ್ಯೂಚುವಲ್ ಫಂಡ್ ಗಳ ಬಗ್ಗೆ ಜಾಗೃತಿ ಮೂಡಿಸಲು ಹಣಕಾಸು ಉತ್ಪನ್ನ ವರ್ಗವಾಗಿ ಜಾಗೃತಿ ಮೂಡಿಸಲು ಹೊರತು  ಮಾರಾಟ ಪ್ರಚಾರ ಅಥವಾ ವ್ಯವಹಾರದ ಕೋರಿಕೆಗಾಗಿ ಅಲ್ಲ. 

ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ಆಂತರಿಕ ಮೂಲಗಳು ಮತ್ತು ವಿಶ್ವಾಸಾರ್ಹವೆಂದು ನಂಬಲಾದ ಇತರ ಮೂರನೇ ಪಕ್ಷದ ಮೂಲಗಳ ಆಧಾರದ ಮೇಲೆ ಎಎಂಎಫ್ಐ ನಲ್ಲಿನ ವಿಷಯವನ್ನು ಸಿದ್ಧಪಡಿಸಿದೆ. ಆದಾಗ್ಯೂ, ಅಂತಹ ಮಾಹಿತಿಯ ನಿಖರತೆಯನ್ನು ಎಎಂಎಫ್ಐ ಖಾತರಿಪಡಿಸುವುದಿಲ್ಲ, ಅದರ ಸಂಪೂರ್ಣತೆಯನ್ನು ಖಾತರಿಪಡಿಸುವುದಿಲ್ಲ, ಅಥವಾ ಅಂತಹ ಮಾಹಿತಿಯನ್ನು ಬದಲಾಯಿಸಲಾಗುವುದಿಲ್ಲ ಎಂದು ಖಾತರಿಪಡಿಸುವುದಿಲ್ಲ. 

ಇಲ್ಲಿರುವ ವಿಷಯವು ವೈಯಕ್ತಿಕ ಹೂಡಿಕೆದಾರರ ಉದ್ದೇಶಗಳು, ಅಪಾಯದ ಸಾಧ್ಯತೆ ಅಥವಾ ಹಣಕಾಸಿನ ಅಗತ್ಯಗಳು ಅಥವಾ ಸಂದರ್ಭಗಳು ಅಥವಾ ಇಲ್ಲಿ ವಿವರಿಸಿದ ಮ್ಯೂಚುವಲ್ ಫಂಡ್ ಉತ್ಪನ್ನಗಳ ಸೂಕ್ತತೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಹೂಡಿಕೆದಾರರು ಈ ನಿಟ್ಟಿನಲ್ಲಿ ಹೂಡಿಕೆ ಸಲಹೆಗಾಗಿ ತಮ್ಮ ವೃತ್ತಿಪರ ಹೂಡಿಕೆ ಸಲಹೆಗಾರ/ ಸಮಾಲೋಚಕ/ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಲು ಸೂಚಿಸಲಾಗಿದೆ. 

ಮ್ಯೂಚುವಲ್ ಫಂಡ್ ಯೋಜನೆಯು ಠೇವಣಿ ಉತ್ಪನ್ನವಲ್ಲ ಮತ್ತು ಇದು ಮ್ಯೂಚುವಲ್ ಫಂಡ್ ಅಥವಾ ಅದರ ಎಎಂಸಿ (AMC) ಯಿಂದ ಬಾಧ್ಯತೆ ಅಥವಾ ಖಾತರಿ ಅಥವಾ ವಿಮೆಯಾಗಿಲ್ಲ. ಅಂತರ್ಗತ ಹೂಡಿಕೆಗಳ ಸ್ವರೂಪದಿಂದಾಗಿ, ಮ್ಯೂಚುವಲ್ ಫಂಡ್ ಉತ್ಪನ್ನದ ಆದಾಯ ಅಥವಾ ಸಂಭಾವ್ಯ ಆದಾಯವನ್ನು ಖಾತರಿಪಡಿಸಲಾಗುವುದಿಲ್ಲ. ಐತಿಹಾಸಿಕ ಕಾರ್ಯಕ್ಷಮತೆಯನ್ನು ಪ್ರಸ್ತುತಪಡಿಸಿದಾಗ, ಸಂಪೂರ್ಣವಾಗಿ ಉಲ್ಲೇಖ ಉದ್ದೇಶಗಳಿಗಾಗಿ ಮತ್ತು ಭವಿಷ್ಯದ ಫಲಿತಾಂಶಗಳ ಖಾತರಿಯಲ್ಲ.

ಮ್ಯೂಚುವಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಸ್ಕೀಮ್ ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಎಚ್ಚರಿಕೆಯಿಂದ ಓದಿ.

286
ನಾನು ಹೂಡಿಕೆ ಮಾಡಲು ಸಿದ್ಧ