ನಾವು ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡಬಹುದಾದರೆ, ಗೋಲ್ಡ್‌ ಮ್ಯೂಚುವಲ್‌ ಫಂಡ್‌ಗಳು ಏಕೆ ಬೇಕು?

ನಾವು ಗೋಲ್ಡ್ ಇಟಿಎಫ್‌ನಲ್ಲಿ ಹೂಡಿಕೆ ಮಾಡಬಹುದಾದರೆ, ಗೋಲ್ಡ್‌ ಮ್ಯೂಚುವಲ್‌ ಫಂಡ್‌ಗಳು ಏಕೆ ಬೇಕು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಗೋಲ್ಡ್‌ ಇಟಿಎಫ್‌ ಎಂಬುದು ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್ (ಇಟಿಎಫ್‌) ಆಗಿದ್ದು ದೇಶೀಯ ಭೌತಿಕ ಚಿನ್ನದ ಬೆಲೆಯನ್ನು ಟ್ರ್ಯಾಕ್ ಮಾಡುತ್ತದೆ. ಇವು ಪ್ಯಾಸಿವ್ ಹೂಡಿಕೆ ಸಲಕರಣೆಯಾಗಿದ್ದು, ಚಿನ್ನದ ಬೆಲೆಯನ್ನು ಆಧರಿಸಿರುತ್ತವೆ ಮತ್ತು ಗೋಲ್ಡ್ ಬುಲಿಯನ್‌ನಲ್ಲಿ ಹೂಡಿಕೆ ಮಾಡುತ್ತವೆ. ಭಾರತದಲ್ಲಿ, ಚಿನ್ನವನ್ನು ಸಾಮಾನ್ಯವಾಗಿ ಆಭರಣ ರೂಪದಲ್ಲಿ ಇಟ್ಟುಕೊಳ್ಳಲಾಗುತ್ತದೆ. ಇದರಲ್ಲಿ ಮೇಕಿಂಗ್ ಮತ್ತು ವೇಸ್ಟೇಜ್‌ ಅಂಶವೂ ಇರುತ್ತದೆ (ಸಾಮಾನ್ಯವಾಗಿ ಇದು ಬಿಲ್‌ ಮೌಲ್ಯಕ್ಕಿಂತ ಶೇ. 10 ಕ್ಕೂ ಹೆಚ್ಚು ಇರುತ್ತದೆ). ಗೋಲ್ಡ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದಾಗ ಇದನ್ನು ನಿವಾರಿಸಲಾಗುತ್ತದೆ.

ಗೋಲ್ಡ್ ಇಟಿಎಫ್‌ ಖರೀದಿ ಮಾಡಿದಾಗ ನೀವು ಚಿನ್ನವನ್ನು ಎಲೆಕ್ಟ್ರಾನಿಕ್‌ ರೂಪದಲ್ಲಿ ಖರೀದಿ ಮಾಡಿರುತ್ತೀರಿ. ನೀವು ಸ್ಟಾಕ್‌ಗಳಲ್ಲಿ ಟ್ರೇಡ್ ಮಾಡಿದ ರೀತಿಯಲ್ಲಿಯೇ ಗೋಲ್ಡ್ ಇಟಿಎಫ್‌ಗಳನ್ನು ನೀವು ಖರೀದಿ ಮತ್ತು ಮಾರಾಟ ಮಾಡಬಹುದು. ಗೋಲ್ಡ್ ಇಟಿಎಫ್‌ ಅನ್ನು ನೀವು ವಾಸ್ತವವಾಗಿ ರಿಡೀಮ್ ಮಾಡಿದಾಗ ನೀವು ಭೌತಿಕ ಚಿನ್ನವನ್ನು ಪಡೆಯುವುದಿಲ್ಲ. ಆದರೆ ಇದಕ್ಕೆ ಸಮಾನವಾದ ನಗದನ್ನು ಪಡೆಯುತ್ತೀರಿ. ಗೋಲ್ಡ್ ಇಟಿಎಫ್‌ನಲ್ಲಿ ಟ್ರೇಡ್ ಮಾಡುವಿಕೆಯು ಡಿಮಟೀರಿಯಲೈಸ್ ಮಾಡಿದ ಖಾತೆ (ಡಿಮ್ಯಾಟ್) ಮತ್ತು ಬ್ರೋಕರ್ ಮೂಲಕ ನಡೆಯುತ್ತದೆ. ಇದು ಚಿನ್ನದಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಹೂಡಿಕೆ ಮಾಡುವ ಅನುಕೂಲಕರ ವಿಧಾನವಾಗಿದೆ.

ಇದು ನೇರ ಚಿನ್ನದ ಬೆಲೆಯ ಮೇಲೆ ಪರಿಣಾಮ ಹೊಂದಿರುವುದರಿಂದ, ಗೋಲ್ಡ್ ಇಟಿಎಫ್‌ ಅನ್ನು ನಿರ್ವಹಿಸುವಲ್ಲಿ ಸಂಪೂರ್ಣ ಪಾರದರ್ಶಕತೆ ಇರುತ್ತದೆ. ಇದರ ವಿಶಿಷ್ಟ ರಚನೆ ಮತ್ತು ತಾಂತ್ರಿಕತೆಯಿಂದಾಗಿ ಭೌತಿಕ ಚಿನ್ನ ಹೂಡಿಕೆಗೆ ಹೋಲಿಸಿದರೆ ಇಟಿಎಫ್‌ಗಳು ಕಡಿಮೆ ವೆಚ್ಚವನ್ನು ಹೊಂದಿರುತ್ತವೆ.

437
ನಾನು ಹೂಡಿಕೆ ಮಾಡಲು ಸಿದ್ಧ