ಮ್ಯೂಚುವಲ್ಫಂಡ್ಸ್ ಬಳಸಿಕೊಂಡು ನಿವೃತ್ತಿ ನಿಧಿಯನ್ನು ನಿರ್ಮಿಸಿಕೊಳ್ಳುವುದು ಹೇಗೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಮ್ಮ ನಿವೃತ್ತಿ ಜೀವನ ಕೂಡಾ ನಾವು ಕೆಲಸ ಮಾಡಿದ ಅವಧಿಯಷ್ಟೇ ದೀರ್ಘವಾಗಿರುತ್ತದೆ. ಸುಮಾರು 25-30 ವರ್ಷಗಳವರೆಗೆ ಬೇಕಾಗುವಷ್ಟು ಹಣ ಬೇಕಾಗುತ್ತದೆ ಎಂದು ಬಹುತೇಕ ಜನರಿಗೆ ಅರ್ಥವಾಗಿರುವುದಿಲ್ಲ. ಸರಿಯಾದ ಆರ್ಥಿಕ ಯೋಜನೆ ಇಲ್ಲದೇ, ಎಲ್ಲ ವೆಚ್ಚಗಳು ಮತ್ತು ತುರ್ತು ಪರಿಸ್ಥಿತಿಯ ಅಗತ್ಯವನ್ನು ಪೂರೈಸಲು ನಿಮ್ಮ ಉಳಿತಾಯ ಸಾಲದೇ ಇರಬಹುದು. 25-30 ವರ್ಷಗಳ ನಿವೃತ್ತಿ ಜೀವನಕ್ಕೆ ಸಾಲುವಷ್ಟು ನಿಧಿಯನ್ನು ನೀವು ಹೇಗೆ ನಿರ್ಮಿಸುತ್ತೀರಿ? ಮೊದಲನೆಯದಾಗಿ, ನಿವೃತ್ತಿ ನಂತರ ನಿಮ್ಮ ವಾರ್ಷಿಕ ವೆಚ್ಚ ಎಷ್ಟಾಗಬಹುದು ಎಂದು ಲೆಕ್ಕ ಮಾಡಿ. ಇದಕ್ಕಾಗಿ ನಮ್ಮ ಹಣದುಬ್ಬರ ಕ್ಯಾಲಕ್ಯುಲೇಟರ್ ಅನ್ನು ಬಳಸಿ. ನಿಮ್ಮ 25-30 ವರ್ಷಗಳ ನಿವೃತ್ತಿ ಜೀವನಕ್ಕೆ ಅಗತ್ಯವಿರುವ ಒಟ್ಟು ನಿಧಿಯನ್ನು ನಿರ್ಧರಿಸಿ. ನಿಮ್ಮ ಮನಸಿನಲ್ಲಿ ನಿವೃತ್ತಿ ನಿಧಿಯ ಮೊತ್ತ ಮೂಡಿದ ನಂತರ, ಆ ನಿವೃತ್ತಿ ನಿಧಿಯನ್ನು ರೂಪಿಸುವುದಕ್ಕೆ ನೀವು ಕೆಲಸ ಮಾಡುತ್ತಿರುವ ಸಮಯದಲ್ಲಿ ಹೂಡಿಕೆ ಮಾಡಬೇಕಿರುವ ಮಾಸಿಕ SIP (ಎಸ್.ಐ.ಪಿ) ಲೆಕ್ಕ ಹಾಕಲು ನೀವು ನಮ್ಮ ಗುರಿ SIP (ಎಸ್.ಐ.ಪಿ) ಕ್ಯಾಲಕ್ಯುಲೇಟರ್ ಅನ್ನು ಬಳಸಬಹುದು. SIP (ಎಸ್.ಐ.ಪಿ) ಮೂಲಕ ಮ್ಯೂಚುವಲ್ಫಂಡ್ನಲ್ಲಿ ಹೂಡಿಕೆ ಮಾಡುವ ಅನುಕೂಲವೆಂದರೆ, ಇದರಿಂದ ನಿಮ್ಮ ಜೇಬಿಗೆ ಭಾರವಾಗುವುದಿಲ್ಲ. ನಿಮ್ಮ ಮಾಸಿಕ ಆದಾಯದಿಂದಲೇ ಇದನ್ನು ನಿರ್ವಹಿಸಬಹುದು.

ಮುಂದೆ, ನಿಮ್ಮ ರಿಸ್ಕ್ತಾಳಿಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ದೀರ್ಘಕಾಲದಲ್ಲಿ ಗ್ರೋತ್ಗೆ ಕೆಲವು ಮ್ಯೂಚುವಲ್ಫಂಡ್ಗಳನ್ನು ಆಯ್ಕೆ ಮಾಡಿ. ದೀರ್ಘಕಾಲಕ್ಕೆ ಈಕ್ವಿಟಿ ಫಂಡ್ಗಳನ್ನು ಶಿಫಾರಸು ಮಾಡಲಾಗಿದ್ದು, ನೀವು ಡೆಟ್ ಅಥವಾ ಹೈಬ್ರಿಡ್ಫಂಡ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಆಯ್ಕೆ ಮಾಡುವ ಮ್ಯೂಚುವಲ್ಫಂಡ್ಸ್ಕೀಮ್ಗಳ ವಿಭಾಗ ಮತ್ತು ವಿಧಕ್ಕೆ ನಿಮ್ಮ ರಿಟರ್ನ್ನಿರೀಕ್ಷೆಗಳನ್ನೂ ಹೊಂದಿಸಿ.

ಆರಂಭ ಎಂಬುದು ಅರ್ಧ ಕೆಲಸ ಮುಗಿದಂತೆ. ಸಾಧ್ಯವಾದಷ್ಟೂ ಉತ್ತಮವಾಗಿ ಶಿಸ್ತನ್ನು ರೂಢಿಸಿಕೊಂಡರೆ, ಸಂತೃಪ್ತ ನಿವೃತ್ತಿ ಜೀವನವನ್ನು ನಡೆಸುವುದಕ್ಕಾಗಿ ನಿಮ್ಮ ಹಣಕಾಸು ಗುರಿಗಳನ್ನು ಸಾಧಿಸಲು ಕಡಿಮೆ ಪ್ರಯತ್ನ ಸಾಕಾಗುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ