ಹೂಡಿಕೆ ಮಾಡುವಾಗ ಊಹಾಪೋಹಗಳನ್ನು ನಿರ್ವಹಿಸುವುದು ಹೇಗೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮಾರುಕಟ್ಟೆ ಯಾವ ಕಡೆಗೆ ಹೋಗುತ್ತದೆ ಎಂದು ಊಹಿಸಲು ಸಾಧ್ಯವಾಗದೇ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಕಳೆದುಕೊಂಡ ಅಥವಾ ಮಾರುಕಟ್ಟೆ ಯಾವ ಕಡೆಗೆ ಸಾಗುತ್ತದೆ ಎಂದು ತಿಳಿದುಕೊಂಡು ಹಣ ಗಳಿಕೆ ಮಾಡಿದ ಎಷ್ಟು ಜನರನ್ನು ನೀವು ನೋಡಿದ್ದೀರಿ? ಮುಂದೆ ಮಾರ್ಕೆಟ್ ಯಾವ ಕಡೆಗೆ ಸಾಗುತ್ತದೆ ಎಂದು ಅತ್ಯುತ್ತಮ ಮಾರ್ಕೆಟ್ ವಿಶ್ಲೇಷಕರು ಕೂಡಾ ನಿಖರವಾಗಿ ಹೇಳಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಹಣಕಾಸು ಮಾರ್ಕೆಟ್‌ಗಳು ಭಾವನೆಗಳನ್ನು ಆಧರಿಸಿರುತ್ತವೆ ಮತ್ತು ಮಾರ್ಕೆಟ್ ಭಾವನೆಗಳು ಮಾರುಕಟ್ಟೆ ಸುದ್ದಿಯನ್ನು ಆಧರಿಸಿರುತ್ತವೆ.

ಇಂದು ಒಬ್ಬ ಹೂಡಿಕೆದಾರರು ಮಾರ್ಕೆಟ್ ಸುದ್ದಿಗಳಿಗೆ ಸುಲಭ ಲಭ್ಯತೆಯನ್ನು ಹೊಂದಿರುತ್ತಾರೆ. ಇದು ವಾಸ್ತವವಾಗಿ ಸರಿಯಾಗಿರಬಹುದು ಅಥವಾ ಊಹಾಪೋಹವಾಗಿರಬಹುದು ಅಥವಾ ಕೇವಲ ಊಹೆಯಾಗಿರಬಹುದು. ವಾಸ್ತವವಾಗಿ ಸರಿಯಾದ ಸುದ್ದಿಯನ್ನು ಆಧರಿಸಿ ಮಾಡಿದ ಹೂಡಿಕೆ ನಿರ್ಧಾರಗಳು ಉತ್ತಮ ಫಲಿತಾಂಶಗಳನ್ನು ನೀಡಬಹುದು, ಊಹಾಪೋಹಗಳು ಅಥವಾ ಊಹೆಗಳನ್ನು ಆಧರಿಸಿ ಮಾಡಿದ ಹೂಡಿಕೆ ನಿರ್ಧಾರಗಳು ಹೂಡಿಕೆದಾರರಿಗೆ ನಷ್ಟಕ್ಕೆ ಕಾರಣವಾಗಬಹುದು.

ವರ್ತನಾ ಹಣಕಾಸು ಸಿದ್ಧಾಂತದ ಪ್ರಕಾರ, ಹೂಡಿಕೆದಾರರು ಸ್ವಭಾವಯುತವಾಗಿ ತರ್ಕಕ್ಕೆ ಹೊರತಾಗಿರುತ್ತಾರೆ. ಅಂದರೆ, ಅವರ ಹೂಡಿಕೆ ವರ್ತನೆಯು ಸಮಗ್ರ ಸಂಶೋಧನೆ ಮತ್ತು ವಿಶ್ಲೇಷಣೆಯ ಬೆಂಬಲವನ್ನು ಹೊಂದಿರುವುದಿಲ್ಲ. ಆದರೆ, ಅನುಕರಣೆಯ ಮಾನಸಿಕತೆಯೂ ಸೇರಿದಂತೆ ವಿವಿಧ ಅರಿವು ಮತ್ತು ಭಾವನಾತ್ಮಕ ತಾರತಮ್ಯಗಳಿಂದ ಪ್ರಭಾವಿತವಾಗಿರುತ್ತದೆ. ಹೀಗಾಗಿ, ಯಾವುದೇ ತಪ್ಪಾದ ಮಾರ್ಕೆಟ್ ಮಾಹಿತಿಯು ಹೂಡಿಕೆದಾರರಲ್ಲಿ ಗೊಂದಲವನ್ನು ಉಂಟು ಮಾಡಬಹುದು ಮತ್ತು ಹೂಡಿಕೆದಾರರ ಸಂಪತ್ತಿನಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಬಹುದು.

ಪರಿಶೀಲಿಸಿದ ಸುದ್ದಿಗಳಿಂದ ಊಹಾಪೋಹಗಳವರೆಗೆ ಎಲ್ಲ ರೀತಿಯ ಸುದ್ದಿಗಳಿಂದಲೂ ಮಾರ್ಕೆಟ್ ತುಂಬಿದ್ದಾಗ ಹೂಡಿಕೆದಾರರು ಸ್ಥಿರವಾಗಿರುವುದು ಹೇಗೆ? ಈ ವೇಳೆ, ವ್ಯಾಪಕವಾದ ಸಂಶೋಧನೆ ಮತ್ತು ವಿಶ್ಲೇಷಣೆಯನ್ನು ನಡೆಸಲು ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಕೊರತೆ ಹೊಂದಿರುವ ಕೋಟ್ಯಂತರ ಸಣ್ಣ ಹೂಡಿಕೆದಾರರ ನೆರವಿಗೆ ಬರುವುದು ಮ್ಯೂಚುವಲ್ ಫಂಡ್ ಹೂಡಿಕೆಯಾಗಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಿಕೆಯು ಈ ಮೇಲಿನ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಯಾಕೆಂದರೆ, ನಿಮ್ಮ ಪರವಾಗಿ ಹೂಡಿಕೆ ನಿರ್ಧಾರಗಳನ್ನು ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ತೆಗೆದುಕೊಳ್ಳುತ್ತಾರೆ.

ಫಂಡ್ ಮ್ಯಾನೇಜರ್‌ಗಳು ವಿಶ್ಲೇಷಣೆಯ ತಂಡವನ್ನು ಹೊಂದಿರುತ್ತಾರೆ. ಇವರು ಖರೀದಿ, ಇಟ್ಟುಕೊಳ್ಳುವುದು ಅಥವಾ ಮಾರಾಟ ಮಾಡುವುದಕ್ಕೂ ಮೊದಲು ಪ್ರತಿ ಷೇರನ್ನು ಮೌಲ್ಯಮಾಪನ ಮಾಡಲು ಎಲ್ಲ ಸಾರ್ವಜನಿಕ ಮಾಹಿತಿಯ ಆಧಾರದ ಮೇಲೆ ಅಪಾರ ಸಂಶೋಧನೆಯನ್ನು ನಡೆಸುತ್ತಾರೆ. ಫಂಡ್‌ನ ಪೋರ್ಟ್‌ಫೋಲಿಯೋ ಸುರಕ್ಷತೆಯ ಬಗ್ಗೆ ಅಥವಾ ಚಿಂತೆಗೆ ಕಾರಣವಾಗುವ ಫಂಡ್‌ ಬಗ್ಗೆ ಯಾವುದೇ ಮಾರುಕಟ್ಟೆ ಸುದ್ದಿ ಕಂಡುಬಂದರೆ ಮಾರ್ಗದರ್ಶನಕ್ಕಾಗಿನೀವು ಎಂದಿಗೂ ನಿಮ್ಮ ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರು ಅಥವಾ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್‌ರನ್ನು ಸಂಪರ್ಕಿಸಬಹುದು.

436
480
ನಾನು ಹೂಡಿಕೆ ಮಾಡಲು ಸಿದ್ಧ