ನಾನು ಮ್ಯೂಚುಯಲ್ ಫಂಡ್ ಅನ್ನು ಹೇಗೆ ಆಯ್ಕೆ ಮಾಡುವುದು?

ನಾನು ಮ್ಯೂಚುಯಲ್ ಫಂಡ್ ಅನ್ನು ಹೇಗೆ ಆಯ್ಕೆ ಮಾಡುವುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

“ನಾನು ಹೇಗೆ ನನ್ನ ಸಾರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳಬೇಕು?” ಎಂದು ಟ್ರಾವೆಲ್‌ ಏಜೆಂಟ್‌ ಬಳಿ ಕೇಳುವುದನ್ನು ಊಹಿಸಿಕೊಳ್ಳಿ. “ಇದು ನೀವು ಎಲ್ಲಿಗೆ ಹೋಗುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ” ಎಂದು ಅವರು ಮೊದಲು ಹೇಳುತ್ತಾರೆ. ನಾನು 5 ಕಿ.ಮೀ ವರೆಗೆ ಪ್ರಯಾಣಿಸಬೇಕಾಗಿದೆ ಎಂದಾದರೆ ಅಟೋ ರಿಕ್ಷಾ ಉತ್ತಮವಾದ ವಿಧಾನ. ನವದೆಹಲಿಯಿಂದ ಕೊಚ್ಚಿಗೆ ಪ್ರಯಾಣ ಮಾಡುವುದಾದರೆ ವಿಮಾನ ಪ್ರಯಾಣ ಸೂಕ್ತವಾಗಿರಬಹುದು. ಕಡಿಮೆ ದೂರಕ್ಕೆ ವಿಮಾನ ಪ್ರಯಾಣ ಸೌಲಭ್ಯವಿರುವುದಿಲ್ಲ ಮತ್ತು ದೂರದ ಪ್ರಯಾಣಕ್ಕೆ ಅಟೋ ರಿಕ್ಷಾ ಅನುಕೂಲಕರವೂ ಅಲ್ಲ ಮತ್ತು ಅತ್ಯಂತ ನಿಧಾನವೂ ಆಗಿರುತ್ತದೆ.

ಮ್ಯೂಚುವಲ್‌ ಫಂಡ್‌ಗಳಲ್ಲೂ ಆರಂಭದ ಅಂಶವು ನಿಮ್ಮ ಅಗತ್ಯಗಳು ಯಾವುವು ಎಂಬುದೇ ಆಗಿರುತ್ತದೆ.

ಇದು ನಿಮ್ಮ ಹಣಕಾಸು ಗುರಿಗಳು ಮತ್ತು ರಿಸ್ಕ್ ತಾಳಿಕೆ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.

ನೀವು ಮೊದಲು ನಿಮ್ಮ ಹಣಕಾಸು ಗುರಿಗಳನ್ನು ಗುರುತಿಸಿಕೊಳ್ಳಬೇಕು. ಅಲ್ಪಕಾಲದ ಅಗತ್ಯಗಳು ಅಥವಾ ಗುರಿಗಳಿಗೆ ಕೆಲವು ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಸೂಕ್ತವಾಗಿರುತ್ತವೆ. ಇನ್ನು ಕೆಲವು ದೀರ್ಘಕಾಲದ ಗುರಿಗಳಿಗೆ ಸೂಕ್ತವಾಗಿರುತ್ತವೆ.

ನಂತರದಲ್ಲಿ ನಿಮ್ಮ ರಿಸ್ಕ್ ತಾಳಿಕೆಯ ಸಾಮರ್ಥ್ಯ ಬರುತ್ತದೆ. ವಿಭಿನ್ನ ವ್ಯಕ್ತಿಗಳು ವಿಭಿನ್ನ ರಿಸ್ಕ್ ತಾಳಿಕೆ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಪತಿ ಮತ್ತು ಪತ್ನಿ ಜಂಟಿ ಹಣಕಾಸು ವಹಿವಾಟನ್ನು ಹೊಂದಿರಬಹುದು. ಆದರೆ ಅವರ ರಿಸ್ಕ್ ಪ್ರೊಫೈಲ್‌ಗಳು ವಿಭಿನ್ನವಾಗಿರುತ್ತದೆ. ಕೆಲವರಿಗೆ ಅಧಿಕ ರಿಸ್ಕ್ ಉತ್ಪನ್ನಗಳು ಸೂಕ್ತವಾಗಿರುತ್ತವೆ. ಕೆಲವರಿಗೆ ಅದು ಸೂಕ್ತವಾಗಿರುವುದಿಲ್ಲ.

ನಿಮ್ಮ ಅಪಾಯದ ಪ್ರಮಾಣವನ್ನು ನಿರ್ಣಯಿಸಲು ಹೂಡಿಕೆ ಸಲಹೆಗಾರರು ಅಥವಾ ಮ್ಯೂಚುವಲ್ ಫಂಡ್ ವಿತರಕರಂತಹ ಹಣಕಾಸು ತಜ್ಞರಿಂದ ನೀವು ಸಹಾಯ ಪಡೆಯಬಹುದು.

436
436
ನಾನು ಹೂಡಿಕೆ ಮಾಡಲು ಸಿದ್ಧ