ಮ್ಯೂಚುವಲ್‌ ಫಂಡ್‌ಗಳಲ್ಲಿ ನಾನು ಹೂಡಿಕೆ ಮಾಡಬಹುದಾದ ಗರಿಷ್ಠ ಮತ್ತು ಕನಿಷ್ಠ ಅವಧಿ ಯಾವುದು?

ಮ್ಯೂಚುವಲ್‌ ಫಂಡ್‌ಗಳಲ್ಲಿ ನಾನು ಹೂಡಿಕೆ ಮಾಡಬಹುದಾದ ಗರಿಷ್ಠ ಮತ್ತು ಕನಿಷ್ಠ ಅವಧಿ ಯಾವುದು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಗೆ ಕನಿಷ್ಠ ಅವಧಿಯು ಒಂದು ದಿನವಾಗಿದ್ದು, ಎಷ್ಟಾದರೂ ಗರಿಷ್ಠ ಅವಧಿಗೆ ನೀವು ಹೂಡಿಕೆ ಮಾಡಬಹುದಾಗಿದೆ.

ಕನಿಷ್ಠ ಒಂದು ದಿನ ಎಂಬುದನ್ನು ಅರ್ಥಮಾಡಿಕೊಳ್ಳುವುದು ಸುಲಭ, ಅಂದರೆ, ಒಂದು ನಿರ್ದಿಷ್ಟ ಎನ್‌ಎವಿಯಲ್ಲಿ ಯೂನಿಟ್‌ಗಳನ್ನು ಪಡೆಯುವುದು ಮತ್ತು ಮರುದಿನದ ಎನ್‌ಎವಿಯಲ್ಲಿ ರಿಡೀಮ್‌ ಮಾಡಿಕೊಳ್ಳುವುದು. ಆದರೆ, ಗರಿಷ್ಠ ಅವಧಿಯ “ಅನಂತ” ಎಂಬುದರ ಅರ್ಥವೇನು? ನಿತ್ಯದ ಎನ್‌ಎವಿ ಹೊಂದಿರುವ ಓಪನ್‌ ಎಂಡ್‌ ಸ್ಕೀಮ್‌ಗಳಿದ್ದು, ಇವು 20 ಕ್ಕಿಂತ ಹೆಚ್ಚು ವರ್ಷಗಳಿಂದ ಚಾಲ್ತಿಯಲ್ಲಿವೆ. ಹಾಗೂ ಅಷ್ಟೂ ಅವಧಿಗೆ ಹೂಡಿಕೆ ಮಾಡಿರುವ ಹೂಡಿಕೆದಾರರೂ ಇದ್ದಾರೆ! ಸ್ಕೀಮ್‌ ಎಷ್ಟುಕಾಲದವರೆಗೆ ಇರುತ್ತದೆಯೋ ಮತ್ತು ಮಾರಾಟ ಮತ್ತು ಖರೀದಿ ಬೆಲೆಯ ಆಧಾರದಲ್ಲಿ ಎನ್‌ಎವಿಯನ್ನು ಕೊಡುತ್ತಿರುತ್ತದೆಯೋ, ಹೂಡಿಕೆದಾರರು ಅಲ್ಲಿಯವರೆಗೂ ಹೂಡಿಕೆ ಮಾಡುತ್ತಿರಬಹುದು. ಟ್ರಸ್ಟಿಗಳಿಂದ ಸೂಕ್ತ ಅನುಮತಿಯನ್ನು ಪಡೆದು ಓಪನ್‌ ಎಂಡ್‌ ಫಂಡ್‌ ಅನ್ನು ಫಂಡ್‌ ಹೌಸ್‌ ಸ್ಥಗಿತಗೊಳಿಸಲು ನಿರ್ಧರಿಸುವವರೆಗೂ ಚಾಲ್ತಿಯಲ್ಲಿರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ