ತನ್ನಕನಸಿನ ಮನೆಗೆ ಡೌನ್ ಪೇಮೆಂಟ್ ಮಾಡಲು ಸಾಕಷ್ಟು ಹಣವನ್ನು ಸಂಚಯಗೊಳಿಸಲು ನರೇಂದ್ರ ಗುರಿ ಹಾಕಿಕೊಂಡಿದ್ದಾರೆ. ಯಾವುದೋ ಮ್ಯೂಚುವಲ್ ಫಂಡ್‌ನಲ್ಲಿ ಅವರು ಎಸ್‌ಐಪಿ ಶುರುಮಾಡಿದ್ದಾರೆ. ಅವರ ಗುರಿ ತಲುಪಲು ಸಾಧ್ಯವಾಗದಿದ್ದರೂ, ಅವರು ಈ ವರೆಗೆ ಸಂಚಯಗೊಳಿಸಿದ್ದು ಅವರಿಗೆ ಖುಷಿ ನೀಡಿದೆ.
ಕೆಲವು ಸ್ಟಾರ್ ಉದ್ಯೋಗಿಗಳಿಗೆ ಭಾರಿ ನಗದು ಬಹುಮಾನ ನೀಡುವುದಾಗಿ ಅವರ ಕಂಪನಿ ಘೋಷಿಸಿದಾಗ ಅವರಿಗೆ ತುಂಬಾ ಆಶ್ಚರ್ಯ ಮತ್ತು ಖುಷಿಯಾಯಿತು ಯಾಕೆಂದರೆ ಇವರೂ ಅದರಲ್ಲಿ ಒಬ್ಬರಾಗಿದ್ದರು !
ಮನೆ ಖರೀದಿಗೆ ಸ್ವಲ್ಪ ಸಮಯ ಇನ್ನೂ ಹಿಡಿಯಲಿದ್ದು, ಅದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರಿಗೆ ಸರಿಯಾಗಿ ತಿಳಿದಿಲ್ಲ. ಇದರಿಂದ ಪಾವತಿ ಕೂಡ ನಂತರ ಮಾಡಿದರೆ ಸಾಕಾಗಬಹುದು ಎಂದು ಅವರಿಗೆ ಅನ್ನಿಸುತ್ತಿದೆ.
ಹಾಗಾದರೆ ಆ ಹಣವನ್ನು ಅವರು ಏನು ಮಾಡಬೇಕು?
ಅವರ ಸಲಹೆಗಾರರು ಲಿಕ್ವಿಡ್ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡುವಂತೆ ಸಲಹೆ ಮಾಡಿದರು. ಯಾಕೆಂದರೆ ಇದು ಕಡಿಮೆ ಅವಧಿಯಲ್ಲಿ ಹಣವನ್ನು ಇಡಲು ಸೂಕ್ತ ಎಂದು ಅವರು ಈ ಸಲಹೆ ಮಾಡಿದ್ದರು. ಅಷ್ಟಕ್ಕೂ ಎಷ್ಟು ಕಾಲ ಹಿಡಿಯುತ್ತದೆ ಎಂಬುದು ಸ್ಪಷ್ಟವಿರಲಿಲ್ಲ. ಅಗತ್ಯವಿದ್ದಷ್ಟು ಹಣವನ್ನು ಅಂದರೆ ಒಟ್ಟು ಅಥವಾ ಭಾಗಶಃ ಹಣವನ್ನು ತೆಗೆಯುವ ಅನುಕೂಲವನ್ನೂ ಇದು ನೀಡುತ್ತದೆ.
ಹೀಗಾಗಿ ದೀರ್ಘಕಾಲಿಕ ಮತ್ತು ಅಲ್ಪಕಾಲಿಕ ಗುರಿಗಳಿಗೆ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಸಾಕಷ್ಟು ಇವೆ.