ಮ್ಯೂಚುವಲ್‌ ಫಂಡ್‌ಗಳ ಮೂಲಕ ಯಾವ ರೀತಿಯ ಆರ್ಥಿಕ ಗುರಿಗಳನ್ನು ನಾನು ಸಾಧಿಸಬಹುದು?

ಮ್ಯೂಚುವಲ್‌ ಫಂಡ್‌ಗಳ ಮೂಲಕ ಯಾವ ರೀತಿಯ ಆರ್ಥಿಕ ಗುರಿಗಳನ್ನು  ನಾನು ಸಾಧಿಸಬಹುದು? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ನಿಮ್ಮ ಹಣಕಾಸು ಗುರಿ ಯಾವುದೇ ಆಗಿದ್ದರೂ, ಇದಕ್ಕಾಗಿ ನೀವು ಸೂಕ್ತ ಸ್ಕೀಮ್ ಅನ್ನು ಕಂಡುಕೊಳ್ಳಬಹುದು ಎಂಬುದು ಮ್ಯೂಚುವಲ್‌ ಫಂಡ್‌ಗಳಲ್ಲಿನ ಒಂದು ಉತ್ತಮ ಸಂಗತಿಯಾಗಿದೆ.

ನೀವು ದೀರ್ಘಕಾಲೀನ ಹಣಕಾಸು ಗುರಿಗಳನ್ನು ಹೊಂದಿದ್ದರೆ, ಅಂದರೆ ನಿಮ್ಮ ನಿವೃತ್ತಿಗೆ ಯೋಜನೆ ರೂಪಿಸುವುದು ಅಥವಾ ನಿಮ್ಮ ಮಗುವಿನ ಭವಿಷ್ಯದ ಶಿಕ್ಷಣಕ್ಕಾಗಿ ಹಣ ಕೂಡಿಡುವಂಥ ಯೋಜನೆಯಾಗಿದ್ದರೆ ಈಕ್ವಿಟಿ ಫಂಡ್‌ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

ನಿರ್ದಿಷ್ಟ ಸಮಯಕ್ಕೆ ಆದಾಯ ಪಡೆಯುವುದು ನಿಮ್ಮ ಉದ್ದೇಶವಾಗಿದ್ದರೆ ಫಿಕ್ಸೆಡ್‌ ಇನ್‌ಕಮ್ ಫಂಡ್ ಅನ್ನು ಪರಿಗಣಿಸಬಹುದು.

ನಿಮಗೆ ತಕ್ಷಣ ಒಂದಷ್ಟು ಹಣ ಸಿಕ್ಕಿದೆ, ನೀವು ಎಲ್ಲಿ ಈ ಹಣವನ್ನು ಹೂಡಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ ಎಂಬುದಾದರೆ, ಲಿಕ್ವಿಡ್ ಫಂಡ್ ಅನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಕಾರ್ಯಕಾರಿ ಬಂಡವಾಳವನ್ನು ಇಟ್ಟುಕೊಳ್ಳಲು ಸೇವಿಂಗ್ಸ್‌ ಅಕೌಂಟ್ ಅಥವಾ ಚಾಲ್ತಿ ಖಾತೆಗೆ ಹೋಲಿಸಿದರೆ ಲಿಕ್ವಿಡ್ ಫಂಡ್ ಒಂದು ಉತ್ತಮ ಪರ್ಯಾಯವಾಗಿದೆ.

ತೆರಿಗೆ ಉಳಿತಾಯಕ್ಕೆ ಹೂಡಿಕೆ ಆಯ್ಕೆಗಳನ್ನು ಕೂಡ ಮ್ಯೂಚುವಲ್ ಫಂಡ್‌ಗಳು ಒದಗಿಸುತ್ತವೆ. ಇದೇ ಉದ್ದೇಶಕ್ಕೆ ಈಕ್ವಿಟಿ ಲಿಂಕ್ಡ್‌ ಸೇವಿಂಗ್ ಸ್ಕೀಮ್‌ಗಳನ್ನು (ಇಎಲ್‌ಎಸ್‌ಎಸ್‌) ಅನ್ನು ವಿನ್ಯಾಸ ಮಾಡಲಾಗಿದೆ

ವಾಸ್ತವವಾಗಿ ಎಲ್ಲ ಹೂಡಿಕೆ ಅಗತ್ಯಗಳಿಗೆ ಮ್ಯೂಚುವಲ್‌ ಫಂಡ್‌ಗಳು ಒಂದು ಉತ್ತಮ ಅವಕಾಶವಾಗಿದೆ.

441
ನಾನು ಹೂಡಿಕೆ ಮಾಡಲು ಸಿದ್ಧ