ಪ್ರತಿ ಗುರಿಗೂ ಒಂದು ಪ್ಲಾನ್‌

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಹೌದು, ನಿಮ್ಮ ಜೀವನದ ಗುರಿಗಳಿಗೆ ಪ್ಲಾನ್ ಮಾಡಲು ಮ್ಯೂಚುವಲ್‌ ಫಂಡ್‌ಗಳು ಸಹಾಯಕ!

· ರಜಪೂತ್‌, 15-20 ವರ್ಷಗಳ ನಂತರ ನಿವೃತ್ತಿಯಾದ ಮೇಲೆ ಗುಡ್ಡ ಪ್ರದೇಶದಲ್ಲಿ ಒಂದು ಫಾರ್ಮ್‌ಹೌಸ್‌ ಅನ್ನು ಖರೀದಿಸಿ ನಗರದಿಂದ ದೂರದಲ್ಲಿ ವಾಸಿಸುವ ಯೋಜನೆ ಹಾಕಿದ್ದಾರೆ.

· ಶ್ರೀಮತಿ ಪಟೇಲ್‌ಗೆ ಯಾವುದೇ ನಿವೃತ್ತಿ ಲಾಭಗಳು ಸಿಗಲಿಲ್ಲ. ಅವರ ಬಳಿ ಸೇವಿಂಗ್ಸ್‌ ಇದ್ದರೂ, ಅವರ ದೈನಂದಿನ ವೆಚ್ಚವನ್ನು ನಿಭಾಯಿಸಲು ನಿಯತ ಆದಾಯ ನೀಡುವ ಹೂಡಿಕೆಯೊಂದು ಅವರಿಗೆ ಬೇಕಾಗಿದೆ.

· ಅವರ ವಹಿವಾಟಿನಿಂದ ಗಳಿಸಿದ ಹೆಚ್ಚುವರಿ ಹಣ ಇದೆ ಮತ್ತು ಅವರು ಅದನ್ನು ಹಾಗೆಯೇ ಬ್ಯಾಂಕ್‌ ಖಾತೆಯಲ್ಲಿ ಬಿಟ್ಟಿದ್ದಾರೆ. ಅವರು ಸ್ವಲ್ಪ ದಿನಗಳ ನಂತರ ಪೂರೈಐಕೆದಾರರು ಮತ್ತು ಸಿಬ್ಬಂದಿಗೆ ಪಾವತಿಮಾಡಬೇಕು.

ಈ ಮೇಲಿನದು ನಿಜವಾದ ಜೀವನದ ಸನ್ನಿವೇಶಗಳು. ಈ ಹೂಡಿಕೆದಾರರಿಗೆ ಯಾವುದೇ ಆಯ್ಕೆಗಳು ಲಭ್ಯವಿವೆಯೇ?

ಹೌದು! ಮ್ಯೂಚುವಲ್‌ ಫಂಡ್‌ಗಳು!

ವಿಭಿನ್ನ ಹೂಡಿಕೆ ಉದ್ದೇಶಗಳಿಗೆ ವಿಭಿನ್ನ ರೀತಿಯ ಸ್ಕೀಮ್‌ಗಳನ್ನು ಮ್ಯೂಚುವಲ್‌ ಫಂಡ್‌ಗಳು ಒದಗಿಸುತ್ತವೆ. ಉದಾಹರಣೆಗೆ

-   ನಿವೃತ್ತಿಗೆ ಸಂಚಿತ ನಿಧಿಯನ್ನು ರೂಪಿಸುವಂತಹ ದೀರ್ಘಕಾಲದ ಗುರಿಗಳಿಗೆ ನೀವು ಈಕ್ವಿಟಿ ಮತ್ತು   ಬ್ಯಾಲೆನ್ಸ್‌ಡ್‌ ಫಂಡ್‌ಗಳನ್ನು

-   ಪರಿಗಣಿಸಬಹುದು. ಕಡಿಮೆ ರಿಸ್ಕ್‌ನ ಆದಾಯಕ್ಕಾಗಿ ನೀವು ಬಾಂಡ್‌ ಫಂಡ್‌ ಅನ್ನು ಪರಿಗಣಿಸಬಹುದು. 

-   ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವವರೆಗೆ ಹಣವನ್ನು ಇಡಲು ನೀವು ಲಿಕ್ವಿಡ್ ಫಂಡ್ ಅನ್ನು ಪರಿಗಣಿಸಬಹುದು.

ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಿದ್ದಾಗ ಹೂಡಿಕೆಯನ್ನು ಯೋಜಿಸಲು ಹೂಡಿಕೆದಾರರಿಗೆ ವಿಭಿನ್ನ ರೀತಿಯ ಹೂಡಿಕೆ ಅವಕಾಶವನ್ನು ಮ್ಯೂಚುವಲ್‌ ಫಂಡ್‌ಗಳು ಒದಗಿಸುತ್ತವೆ.

441
ನಾನು ಹೂಡಿಕೆ ಮಾಡಲು ಸಿದ್ಧ