ಮ್ಯೂಚುವಲ್‌ ಫಂಡ್‌ನ ಒಂದು ಸ್ಕೀಮ್‌ನಿಂದ ಇನ್ನೊಂದು ಸ್ಕೀಮ್‌ಗೆ ನೀವು ಬದಲಾವಣೆ ಮಾಡಬಹುದೇ?

ಮ್ಯೂಚುವಲ್‌ ಫಂಡ್‌ನ ಒಂದು ಸ್ಕೀಮ್‌ನಿಂದ ಇನ್ನೊಂದು ಸ್ಕೀಮ್‌ಗೆ ನೀವು ಬದಲಾವಣೆ ಮಾಡಬಹುದೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಒಮ್ಮೆ ನೀವು ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿದರೆ, ನಂತರ ಒಂದೇ ಫಂಡ್‌ ಹೌಸ್‌ನಲ್ಲಿನ ಪ್ಲಾನ್ ಬದಲಾವಣೆ (ರೆಗ್ಯುಲರ್/ಡೈರೆಕ್ಟ್), ಆಯ್ಕೆಗಳು (ಗ್ರೋತ್/ಡಿವಿಡೆಂಡ್) ಅಥವಾ ಸ್ಕೀಮ್ ಬದಲಾವಣೆ ಮಾಡುವುದನ್ನು ಮಾರಾಟ (ರಿಡೆಂಪ್ಷನ್) ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ರೀತಿಯ ಯಾವುದೇ ಬದಲಾವಣೆ ಮಾಡಬಹುದಾದರೂ, ಇದನ್ನು ರಿಡೆಂಪ್ಷನ್ ಎಂದು ಪರಿಗಣಿಸಲಾಗುತ್ತದೆ. ನೀವು ಎಷ್ಟು ಕಾಲದ ವರೆಗೆ ಹೂಡಿಕೆ ಮಾಡಿದ್ದೀರಿ ಎಂಬುದನ್ನು ಆಧರಿಸಿ ಇದರ ಮೇಲೆ ಎಕ್ಸಿಟ್ ಲೋಡ್ ಮತ್ತು ಕ್ಯಾಪಿಟಲ್‌ ಗೇನ್ಸ್ ಟ್ಯಾಕ್ಸ್‌ ಅನ್ನು ವಿಧಿಸಲಾಗುತ್ತದೆ. ಸ್ಕೀಮ್ ಬದಲಾವಣೆ ಮಾಡುವುದು ಮತ್ತು ರಿಡೆಂಪ್ಷನ್ ವಿನಂತಿ ಮಾಡುವುದರಲ್ಲಿನ ಒಂದೇ ಬದಲಾವಣೆಯೆಂದರೆ ಸ್ಕೀಮ್‌ ಬದಲಾವಣೆಯಲ್ಲಿ ನೇರವಾಗಿ ಹೊಸ ಸ್ಕೀಮ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ರಿಡೆಂಪ್ಷನ್‌ನಲ್ಲಿ ಹಣವನ್ನು ನಿಮ್ಮ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ ಮತ್ತು ನಂತರ ನೀವು ಇದನ್ನು ಬೇರೆ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿಕೊಳ್ಳಬಹುದು.

ನೀವು ಈಕ್ವಿಟಿ ಓರಿಯೆಂಟೆಡ್‌ ಸ್ಕೀಮ್ (ಇಒಎಸ್)ನಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ಒಂದು ವರ್ಷ ಪೂರ್ತಿಗೊಳಿಸುವುದಕ್ಕೂ ಮೊದಲೇ ನೀವು ಹೂಡಿಕೆಯನ್ನು ಬದಲಾವಣೆ ಮಾಡಿದ್ದರೆ, ಎಕ್ಸಿಟ್ ಲೋಡ್ (ಅನ್ವಯಿಸುತ್ತದೆ ಎಂದಾದರೆ) ಮತ್ತು ಶಾರ್ಟ್‌ ಟರ್ಮ್‌ ಕ್ಯಾಪಿಟಲ್‌ ಗೇನ್ಸ್‌ ಟ್ಯಾಕ್ಸ್‌ ಶೇ. 15 ರಷ್ಟನ್ನು ವಿಧಿಸಲಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲದವರೆಗೆ ನೀವು ಹೂಡಿಕೆ ಮಾಡಿದ್ದರೆ, ಒಂದು ವರ್ಷದಲ್ಲಿ 1 ಲಕ್ಷ ರೂ.ಗಿಂತ ಹೆಚ್ಚು ಗಳಿಕೆ ಮಾಡಿದ್ದರೆ ಅದರ ಮೇಲೆ ಶೇ. 10 ರಷ್ಟು ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್‌ ತೆರಿಗೆ ವಿಧಿಸಲಾಗುತ್ತದೆ.

434
ನಾನು ಹೂಡಿಕೆ ಮಾಡಲು ಸಿದ್ಧ