ಹೂಡಿಕೆದಾರರ ಫಂಡ್‌ಗಳನ್ನು ಹೂಡಿಕೆ ಮಾಡಿದಾಗ ಅಸೆಟ್ ಅಲೊಕೇಶನ್ ಅನ್ನು ಮ್ಯೂಚುವಲ್‌ ಫಂಡ್‌ ಬದಲಾವಣೆ ಮಾಡಬಹುದೇ?

ಹೂಡಿಕೆದಾರರ ಫಂಡ್‌ಗಳನ್ನು ಹೂಡಿಕೆ ಮಾಡಿದಾಗ ಅಸೆಟ್ ಅಲೊಕೇಶನ್ ಅನ್ನು ಮ್ಯೂಚುವಲ್‌ ಫಂಡ್‌ ಬದಲಾವಣೆ ಮಾಡಬಹುದೇ? zoom-icon

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸ್ಕೀಮ್ ಮಾಹಿತಿ ದಾಖಲೆ (ಎಸ್‌ಐಡಿ) ಪ್ರಕಾರ ವಿವಿಧ ಅಸೆಟ್ ವಿಭಾಗಗಳಲ್ಲಿ ಮ್ಯೂಚುವಲ್‌ ಫಂಡ್ ಹೂಡಿಕೆ ಮಾಡುತ್ತದೆ. ಸ್ಕೀಮ್‌ನ ಅಸೆಟ್ ಅಲೊಕೇಶನ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಒಂದು ಈಕ್ವಿಟಿ ಫಂಡ್‌ ತನ್ನ ಶೇ. 80 ರಿಂದ ಶೇ. 100 ರಷ್ಟನ್ನು ಈಕ್ವಿಟಿಯಲ್ಲಿ ಹೂಡಿಕೆ ಮಾಡಬಹುದು; ಶೇ. 0 ಇಂದ ಶೇ. 20 ರಷ್ಟನ್ನು ಮನಿ ಮಾರ್ಕೆಟ್ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಬಹುದು.
  • ಬ್ಯಾಲೆನ್ಸ್‌ಡ್‌ ಫಂಡ್ ಅಸೆಟ್ ಅಲೊಕೇಶನ್‌ ಸಾಮಾನ್ಯವಾಗಿ ಹೀಗಿರುತ್ತದೆ, ಶೇ. 65 ರಿಂದ ಶೇ. 80 ಈಕ್ವಿಟಿಯಲ್ಲಿ, ಶೇ. 15 ರಿಂದ ಶೇ. 35 ಡೆಟ್‌ ಸೆಕ್ಯುರಿಟಿಗಳಲ್ಲಿ, ಶೇ. 0 ಇಂದ ಶೇ. 20 ಮನಿ ಮಾರ್ಕೆಟ್‌ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಿರುತ್ತದೆ.

ಹೆಚ್ಚಿನ ಸಂದರ್ಭದಲ್ಲಿ ಅಸೆಟ್ ಕ್ಯಾಟಗರಿಯಲ್ಲಿನ ಅಲೊಕೇಶನ್ ಅನ್ನು ರೇಂಜ್ ಎಂದು ಉಲ್ಲೇಖಿಸಲಾಗಿರುತ್ತದೆ. ಎಸ್‌ಐಡಿಯಲ್ಲಿ ನಮೂದಿಸಿದ ಮಿತಿಗಿಂತ ಹೆಚ್ಚಿನ ಶೇಕಡಾವಾರನ್ನು ಫಂಡ್‌ ಮ್ಯಾನೇಜರ್ ಹೂಡಿಕೆ ಮಾಡಲಾಗದು. ಆದರೆ ಆ ಮಿತಿಯಲ್ಲಿ ಫಂಡ್ ಮ್ಯಾನೇಜರ್ ಅಸೆಟ್ ಅಲೊಕೇಶನ್‌ ನಲ್ಲಿ ಬದಲಾವಣೆ ಮಾಡಬಹುದು. ಉದಾಹರಣೆಗೆ, ಈಕ್ವಿಟಿಯಲ್ಲಿ ಲಾರ್ಜ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಕಂಪನಿಗಳ ಮಧ್ಯದ ಅಲೊಕೇಶನ್ ಅನ್ನು ಈ ಮೇಲೆ ನಮೂದಿಸಿಲ್ಲ. ಇದರಿಂದಾಗಿ ಫಂಡ್‌ ಮ್ಯಾನೇಜರ್ ಲಾರ್ಜ್ ಕ್ಯಾಪ್ ಮತ್ತು ಮಿಡ್‌ ಕ್ಯಾಪ್‌ ಮಧ್ಯೆ ವಿವಿಧ ಸಮಯದಲ್ಲಿ ಹೂಡಿಕೆಯನ್ನು ಬದಲಾವಣೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ.

ಸ್ಕೀಮ್‌ನ ಅಸೆಟ್ ಅಲೊಕೇಶನ್‌ನಲ್ಲಿ ಬದಲಾವಣೆ ಮಾಡುವ ಅಗತ್ಯವಿದ್ದರೆ, ಫಂಡ್‌ನ ಟ್ರಸ್ಟೀಗಳು ಮತ್ತು ಪ್ರಸ್ತುತ ಯೂನಿಟ್‌ ಹೋಲ್ಡರುಗಳ ಅನುಮತಿಯನ್ನು ಫಂಡ್ ಮ್ಯಾನೇಜ್‌ಮೆಂಟ್‌ ಕಂಪನಿಯು ಪಡೆಯಬೇಕು. ಕಂಪನಿಯು ಪ್ರಸ್ತಾವಿತ ಬದಲಾವಣೆಯನ್ನೂ ಘೋಷಣೆ ಮಾಡಬೇಕು. ಹೀಗೇನಾದರೂ ಬದಲಾವಣೆ ಮಾಡಿದರೆ ಎಕ್ಸಿಟ್ ಲೋಡ್ ಪಾವತಿ ಮಾಡದೇ 30 ದಿನಗಳೊಳಗೆ ಸ್ಕೀಮ್‌ನಿಂದ ಹೊರಬರಲು ಪ್ರಸ್ತುತ ಹೂಡಿಕೆದಾರರಿಗೆ ಅವಕಾಶ ಇರುತ್ತದೆ.

436
ನಾನು ಹೂಡಿಕೆ ಮಾಡಲು ಸಿದ್ಧ