ಚಿಕ್ಕ ವಯಸ್ಸಿನಲ್ಲೇ ಹೂಡಿಕೆಯನ್ನು ಪ್ರಾರಂಭಿಸಲು ಐದು ಕಾರಣಗಳು

ಚಿಕ್ಕ ವಯಸ್ಸಿನಲ್ಲೇ ಹೂಡಿಕೆಯನ್ನು ಪ್ರಾರಂಭಿಸಲು ಐದು ಕಾರಣಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ತಮ್ಮ ಆರ್ಥಿಕ ಭವಿಷ್ಯವನ್ನು ರಕ್ಷಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದರೂ, ಜನರು ಹೂಡಿಕೆ ಮಾಡಲು ಪ್ರಾರಂಭಿಸಲು ವಯಸ್ಸಿನ ಮಧ್ಯಾವಸ್ಥೆಯವರೆಗೂ ಕಾಯುತ್ತಾರೆ. ಹೊಸದಾಗಿ ಕೆಲಸಕ್ಕೆ ಸೇರುವವರು ತಮ್ಮ ಭವಿಷ್ಯಕ್ಕಾಗಿ ಯೋಜಿಸುವುದಕ್ಕಿಂತ ತಮ್ಮ ಜೀವನಶೈಲಿಯನ್ನು ನವೀಕರಿಸುವುದು ಹೆಚ್ಚು ಸಾಮಾನ್ಯವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಜೀವನದಲ್ಲಿ ಮಧ್ಯಾವಸ್ಥೆ ಆಗುವವರೆಗೂ ಹೂಡಿಕೆ ಮಾಡಲು ಪ್ರಾರಂಭಿಸುವುದಿಲ್ಲ.

ಹೂಡಿಕೆಯನ್ನು ಪ್ರಾರಂಭಿಸಲು ಎಂದಿಗೂ ತಡವಾಗಿಲ್ಲದಿದ್ದರೂ, ಮೊದಲೇ ಪ್ರಾರಂಭಿಸುವುದರಿಂದ ಅನೇಕ ಪ್ರಯೋಜನಗಳಿವೆ. ಇದಲ್ಲದೆ, ಜೀವನದ ಆರಂಭದಲ್ಲಿ ಹೂಡಿಕೆ ಮಾಡುವುದರಿಂದ ಯುವ ಹೂಡಿಕೆದಾರರು ತಮ್ಮ ವೃತ್ತಿಪರ ಪ್ರಯಾಣದ ಆರಂಭದಲ್ಲಿ ಕಡಿಮೆ ಬದ್ಧತೆಗಳನ್ನು ಹೊಂದಿರುವುದರಿಂದ ನಂತರದ ಜೀವನದಲ್ಲಿ ಹೂಡಿಕೆ ಮಾಡುವುದಕ್ಕಿಂತ ಹೆಚ್ಚಿನದನ್ನು ಉಳಿಸಲು ಸಹಾಯ ಮಾಡುತ್ತದೆ.  

ಚಿಕ್ಕ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಲು 5 ಪ್ರಮುಖ ಕಾರಣಗಳನ್ನು ನೋಡೋಣ:

  1. ಸಂಯೋಜನೆಯ (ಕಂಪೌಂಡಿಂಗ್) ಲಾಭವನ್ನು ಆನಂದಿಸಿ

ಮುಂಚಿತವಾಗಿ ಹೂಡಿಕೆ ಮಾಡುವ ಅತ್ಯಂತ ಮಹತ್ವದ ಪ್ರಯೋಜನವೆಂದರೆ ನಿಮ್ಮ ಬಳಿ ಹೆಚ್ಚುವರಿ ಸಮಯವನ್ನು ಹೊಂದಿರುವುದು. ಕಂಪೌಂಡಿಂಗ್ ಸಹಾಯದಿಂದ, ಕಾಲಾನಂತರದಲ್ಲಿ ನಿಮ್ಮ ಹೂಡಿಕೆಯನ್ನು ಹೆಚ್ಚಿಸಲು ನಿಮಗೆ ಉತ್ತಮ ಸಾಧ್ಯತೆ ಇದೆ. ಫಂಡ್ ನ ಲಾಭವು ಹೆಚ್ಚಾದಾಗ, ನಿಮ್ಮ ಹೂಡಿಕೆಗಳ ಮೇಲೆ ನೀವು ಗಳಿಸುವ ಬಡ್ಡಿಯನ್ನು ಹೆಚ್ಚಿನ ಆದಾಯ ಗಳಿಸಲು ಮರುಹೂಡಿಕೆ ಮಾಡಲಾಗುತ್ತದೆ.

ಒಂದು ಉದಾಹರಣೆಯನ್ನು ನೋಡೋಣ:

ನಿಮ್ಮ ಮೊದಲ ಸಂಬಳವನ್ನು ಪಡೆದಾಗ 25 ನೇ ವಯಸ್ಸಿನಲ್ಲಿ ನೀವು ವ್ಯವಸ್ಥಿತ ಹೂಡಿಕೆ ಯೋಜನೆಯನ್ನು ಪ್ರಾರಂಭಿಸುತ್ತೀರಿ ಎಂದುಕೊಳ್ಳಿ. ವಾರ್ಷಿಕ ಸರಾಸರಿ 10% ರಿಟರ್ನ್ ನೊಂದಿಗೆ ನೀವು 1000 ರೂ.ಗಳ SIP ಮೊತ್ತದಿಂದ ಪ್ರಾರಂಭಿಸುತ್ತೀರಿ.

ನೇ ವಯಸ್ಸಿನಲ್ಲಿ

ನೀವು ಹೂಡಿಕೆ ಮಾಡಿದ ವರ್ಷಗಳು

ಹೂಡಿಕೆ ಮಾಡಿದ ಮೊತ್ತ (ರೂ)

ಗಳಿಸಿದ ಒಟ್ಟು ಮೂಲಧನ (ಕಾರ್ಪಸ್) (ರೂ.)

35

10 ವರ್ಷಗಳು

1.2 ಲಕ್ಷ

2.05 ಲಕ್ಷ

45

20 ವರ್ಷಗಳು

2.4 ಲಕ್ಷ

7.59 ಲಕ್ಷ

55

30 ವರ್ಷಗಳು

3.6 ಲಕ್ಷ

22.6 ಲಕ್ಷ

60

35 ವರ್ಷಗಳು

4.2 ಲಕ್ಷ

37.97 ಲಕ್ಷ

*ಇದು ಕೇವಲ ಒಂದು ಉದಾಹರಣೆ ಮಾತ್ರ. ಕೋಷ್ಟಕದಲ್ಲಿ ತೋರಿಸಿದ ರಿಟರ್ನ್ಸ್‌ಸಂಪೂರ್ಣವಾಗಿ ಊಹೆಯದ್ದಾಗಿದೆ ಮತ್ತು ತೋರಿಕೆ ಉದ್ದೇಶಕ್ಕೆ ಮಾತ್ರ. ಮ್ಯೂಚುವಲ್‌ಫಂಡ್‌ಗಳು ಯಾವುದೇ ಖಚಿತ ರಿಟರ್ನ್ಸ್‌ನ ಭರವಸೆ ನೀಡುವುದಿಲ್ಲ.

ನೀವು ಗಮನಿಸಿದಂತೆ, 1,000 ರೂ.ಗಳ ಹೂಡಿಕೆ ಕೂಡ ಕಾಲಾನಂತರದಲ್ಲಿ ಗಣನೀಯ ಸಂಪತ್ತನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ.

ಇಲ್ಲಿ, ಕಾಂಪೌಂಡಿಂಗ್ ನ ಶಕ್ತಿಯು ಬೃಹತ್ ಹೂಡಿಕೆಗಳಿಗೆ ಸಹ ಅನ್ವಯಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.

  1. ನಿಮ್ಮ ರಿಸ್ಕ್ (ಆಪಾಯ) ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸಿ

ಅಪಾಯ ಹಾಗೂ ಪ್ರತಿಫಲ ನೇರ ಸಂಬಂಧ ಹೊಂದಿವೆ ಎಂಬುದರಲ್ಲಿ ಸಂದೇಹವಿಲ್ಲ. ದೀರ್ಘಾವಧಿಯ ಹೂಡಿಕೆಯು ನಿಮ್ಮ ಅಪಾಯವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ಚಿಕ್ಕವರಿದ್ದಾಗ, ತುಲನಾತ್ಮಕವಾಗಿ ಅಪಾಯಕಾರಿ ಮಾರ್ಗಗಳಲ್ಲಿ ಹೂಡಿಕೆ ಮಾಡಲು ಮತ್ತು ನಿಮ್ಮ ವಯಸ್ಸಾದಂತೆ ಆ ಅಪಾಯವನ್ನು ಕಡಿಮೆ ಮಾಡಲು ನಿಮಗೆ ಆಯ್ಕೆ ಇದೆ. ನೀವು ವಯಸ್ಸಾದಂತೆ, ಇಎಂಐ (EMI) ಗಳು, ಮಕ್ಕಳ ಶಿಕ್ಷಣ, ಅಡಮಾನ ಇತ್ಯಾದಿಗಳಂತಹ ಹೆಚ್ಚುತ್ತಿರುವ ಜವಾಬ್ದಾರಿಗಳಿಂದಾಗಿ ಹೆಚ್ಚಿನ ಅಪಾಯಗಳನ್ನು ತೆಗೆದುಕೊಳ್ಳಲು ನಿಮಗೆ ಕಷ್ಟವಾಗಬಹುದು. ಮುಂಚಿತವಾಗಿ ಹೂಡಿಕೆ ಮಾಡುವುದರಿಂದ ಅಪಾಯಗಳನ್ನು ತಗ್ಗಿಸಲು ಮತ್ತು ಯಾವುದೇ ಹಣಕಾಸಿನ ಒತ್ತಡವಿಲ್ಲದೆ ಸಂಪತ್ತನ್ನು ನಿರ್ಮಿಸಲು ನಿಮಗೆ ಅವಕಾಶ ಸಿಗುತ್ತದೆ.

  1. ನಷ್ಟವನ್ನು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ 

ನೀವು ಬೇಗ ಹೂಡಿಕೆ ಆರಂಭಿಸಿದಾಗ, ನಿಮ್ಮ ಬಳಿ ಸಮಯ ಇರುತ್ತದೆ. ಮಾಹಿತಿ ಕೊರತೆಯಿಂದಾಗಿ ಮಾಡಿದ ನಿರ್ಧಾರಗಳು ಅಥವಾ ಮಾರುಕಟ್ಟೆ ಅಸ್ಥಿರತೆಯಿಂದಾಗಿ ನಷ್ಟ ಉಂಟಾಗಬಹುದು. ಅಗತ್ಯವಿದ್ದರೆ ನೀವು ನಿಮ್ಮ ಹೂಡಿಕೆ ವಿಧಾನವನ್ನು ಪರಿಶೀಲಿಸಬಹುದು ಮತ್ತು ನಷ್ಟಗಳನ್ನು ಚೆನ್ನಾಗಿ ನಿರ್ವಹಣೆ ಮಾಡಬಹುದು. ಉದಾಹರಣೆಗೆ, ಮಾರ್ಕೆಟ್‌ನಲ್ಲಿ ಅಸ್ಥಿರತೆ ಇದ್ದರೆ, ಮ್ಯೂಚುವಲ್‌ ಫಂಡ್‌ಗಳಲ್ಲಿ ಎಸ್‌ಐಪಿಗಳ ಮೂಲಕ ಅದನ್ನು ಚೆನ್ನಾಗಿ ನೀವು ನಿರ್ವಹಣೆ ಮಾಡಬಹುದು. ನೀವು ಎಸ್‌ಐಪಿ (SIP) ಗಳ ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದಾಗ, ಮಾರುಕಟ್ಟೆ ದರ ಕಡಿಮೆ ಇದ್ದಾಗ ಹೆಚ್ಚಿನ ಘಟಕಗಳನ್ನು ಮತ್ತು ಮಾರುಕಟ್ಟೆ ದರ ಹೆಚ್ಚಿದ್ದಾಗ ಕಡಿಮೆ ಘಟಕಗಳನ್ನು ಖರೀದಿಸುವ ಮೂಲಕ ನಿಮ್ಮ ಹೂಡಿಕೆಯ ವೆಚ್ಚವನ್ನು ಸರಾಸರಿಗೊಳಿಸುತ್ತೀರಿ. ಇದನ್ನು ರೂಪಾಯಿ ವೆಚ್ಚ ಸರಾಸರಿ ಎಂದು ಕರೆಯಲಾಗುತ್ತದೆ. ಬೇಗ ಹೂಡಿಕೆ ಮಾಡಲು ನೀವು ಆರಂಭಿಸಿದರೆ, ರೂಪಾಯಿ ವೆಚ್ಚ ಸರಾಸರಿಯಾಗುವಿಕೆಯಿಂದ ನಿಮ್ಮ ನಷ್ಟಗಳನ್ನು ನೀವು ಚೆನ್ನಾಗಿ ನಿರ್ವಹಿಸಬಹುದು.

  1. ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಿ

ನಿಮ್ಮ ಕೈಯಲ್ಲಿ ಹೆಚ್ಚಿನ ಸಮಯವಿದ್ದಾಗ, ನೀವು ವಿಭಿನ್ನ ಹೂಡಿಕೆ ಆಯ್ಕೆಗಳನ್ನು ಹೋಲಿಸಬಹುದು ಮತ್ತು ಅಗತ್ಯವಿದ್ದಾಗ ನಿಮ್ಮ ಪೋರ್ಟ್ಫೋಲಿಯೊವನ್ನು ಮರುಸಮತೋಲನಗೊಳಿಸಬಹುದು, ಅಪಾಯಗಳನ್ನು ತಗ್ಗಿಸಲು ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಹೂಡಿಕೆಗಳಿಗೆ ಸಮಯವನ್ನು ನೀಡಬಹುದು. ಇದಲ್ಲದೆ, ಮುಂಚಿತವಾಗಿ ಹೂಡಿಕೆ ಮಾಡುವುದರಿಂದ ಪ್ರಯೋಗ ಮತ್ತು ಸುಧಾರಣೆಗೆ ಹೆಚ್ಚಿನ ಸಮಯದೊಂದಿಗೆ ಮಾರುಕಟ್ಟೆಯ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಂತರದ ಜೀವನದಲ್ಲಿ ಹೂಡಿಕೆ ಮಾಡುವ ನಿಮ್ಮ ಒತ್ತಡ ಅಥವಾ ಭಯವನ್ನು ಕಡಿಮೆ ಮಾಡುತ್ತದೆ.

  1. ಅವಧಿಪೂರ್ವ ನಿವೃತ್ತಿ ಗುರಿಯನ್ನು ಪೂರೈಸಿ

ನೀವು ಮುಂಚಿತವಾಗಿ ಮತ್ತು ಸರಿಯಾದ ಹೂಡಿಕೆ ಮಾರ್ಗಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಗುರಿಯನ್ನು ಬೇಗ ತಲುಪಲು ಸಾಧ್ಯವಾಗಬಹುದು.

ನೀವು ಬೇಗನೆ ನಿವೃತ್ತರಾಗಲು 1 ಕೋಟಿ ರೂ.ಗಳ ಗಡಿಯನ್ನು ತಲುಪಲು ಬಯಸುತ್ತೀರಿ ಎಂದುಕೊಳ್ಳೋಣ.

25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದುಕೊಳ್ಳೋಣ.

35 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದಾರೆ ಎಂದುಕೊಳ್ಳೋಣ.

ಎಸ್‌ಐಪಿ ಮೊತ್ತ (ರೂ.)

10,100

ಎಸ್‌ಐಪಿ ಮೊತ್ತ (ರೂ.)

10,100

ಊಹಿಸಲಾದ ರಿಟರ್ನ್ (ವಾಪಸಾತಿ) ದರ

12%

ಊಹಿಸಲಾದ ರಿಟರ್ನ್ (ವಾಪಸಾತಿ) ದರ

12%

ಹೂಡಿಕೆ ಮಾಡಿದ ಮೊತ್ತ (ರೂ)

24.24 ಲಕ್ಷ

ಹೂಡಿಕೆ ಮಾಡಿದ ಮೊತ್ತ (ರೂ)

12.12 ಲಕ್ಷ

45 ನೇ ವಯಸ್ಸಿನಲ್ಲಿ ಅಂತಿಮ ಕಾರ್ಪಸ್  (ರೂ.)

1 ಕೋಟಿ

45 ನೇ ವಯಸ್ಸಿನಲ್ಲಿ ಅಂತಿಮ ಕಾರ್ಪಸ್  (ರೂ.)

23.5 ಲಕ್ಷ

*ಇದು ಕೇವಲ ಒಂದು ಉದಾಹರಣೆ ಮಾತ್ರ. ಕೋಷ್ಟಕದಲ್ಲಿ ತೋರಿಸಿದ ರಿಟರ್ನ್ಸ್‌ಸಂಪೂರ್ಣವಾಗಿ ಊಹೆಯದ್ದಾಗಿದೆ ಮತ್ತು ತೋರಿಕೆ ಉದ್ದೇಶಕ್ಕೆ ಮಾತ್ರ. ಮ್ಯೂಚುವಲ್‌ಫಂಡ್‌ಗಳು ಯಾವುದೇ ಖಚಿತ ರಿಟರ್ನ್ಸ್‌ನ ಭರವಸೆ ನೀಡುವುದಿಲ್ಲ.

ಮೇಲಿನ ಉದಾಹರಣೆಯಲ್ಲಿ ವಿವರಿಸಿದಂತೆ, ಮುಂಚಿತವಾಗಿ ಹೂಡಿಕೆ ಮಾಡುವುದು ನಿಮ್ಮ ಗುರಿ ಮೊತ್ತವನ್ನು ವೇಗವಾಗಿ ತಲುಪಲು ನಿಮಗೆ ಸಹಾಯ ಮಾಡುತ್ತದೆ ಮತ್ತು ಮುಂಚಿತವಾಗಿ ನಿವೃತ್ತಿ ಪಡೆಯಲು (ಅಥವಾ ಇತರ ಯಾವುದೇ ಗುರಿಯನ್ನು) ಸಹ ನಿಮಗೆ ಸಹಾಯ ಮಾಡುತ್ತದೆ.

ನಿರ್ಣಯ

ನಿಮ್ಮ ಹೂಡಿಕೆಗಳನ್ನು ಮುಂಚಿತವಾಗಿ ಪ್ರಾರಂಭಿಸುವುದರಿಂದ ಅನೇಕ ಪ್ರಯೋಜನಗಳಿವೆ. ಯುವ ಹೂಡಿಕೆದಾರರಾಗಿ, ನೀವು ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡ ಸಮಯದ ಲಾಭವನ್ನು ಪಡೆಯಬಹುದು, ಇದು ಅಪಾಯವನ್ನು ನಿರ್ವಹಿಸಲು ಮತ್ತು ನಿಮ್ಮ ಆರ್ಥಿಕ ಗುರಿಗಳನ್ನು ವೇಗವಾಗಿ ತಲುಪುವಾಗ ತುರ್ತು ನಿಧಿಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಹೀಗಾಗಿ, ನಿಮ್ಮ ಹೂಡಿಕೆಗಳನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ನೀವು ಬಯಸಿದರೆ, ಚಿಕ್ಕ ವಯಸ್ಸಿನಲ್ಲಿಯೇ ಹೂಡಿಕೆ ಮಾಡಲು ಪ್ರಾರಂಭಿಸುವುದು ಸಮಂಜಸವಾಗಿದೆ.

ಹಕ್ಕು ನಿರಾಕರಣೆ:

ಮ್ಯೂಚುಯಲ್ ಫಂಡ್ ಹೂಡಿಕೆಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ, ಎಲ್ಲಾ ಯೋಜನೆ ಸಂಬಂಧಿತ ದಾಖಲಾತಿಗಳನ್ನು ಜಾಗ್ರತೆಯಿಂದ ಓದಿರಿ.

286
ನಾನು ಹೂಡಿಕೆ ಮಾಡಲು ಸಿದ್ಧ