ಹಿಂದೆಲ್ಲಾ ಮ್ಯೂಚುವಲ್‌ಫಂಡ್‌ಗಳು ಹೇಗಿದ್ದವು?

ಹಿಂದೆಲ್ಲಾ ಮ್ಯೂಚುವಲ್‌ಫಂಡ್‌ಗಳು ಹೇಗಿದ್ದವು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಸಾಮೂಹಿಕ  ಮತ್ತು ಸಂಗ್ರಹಿಸಿದ ಹೂಡಿಕೆಯು ವಿವಿಧ ಸಾಂಪ್ರದಾಯಿಕ ರೂಪದಲ್ಲಿ ಹಲವು ಕಾಲದಿಂದಲೂ ವಿಶ್ವದ ವಿವಿಧ ಭಾಗಗಳಲ್ಲಿ ಚಾಲ್ತಿಯಲ್ಲಿದ್ದವು. ನಮಗೆ ತಿಳಿದಿಂತೆ ಮ್ಯೂಚುವಲ್‌ಫಂಡ್‌ಗಳು 1924 ರಲ್ಲಿ ಮೆಸಾಚುಸೆಟ್ಸ್‌ ಇನ್ವೆಸ್ಟರ್ಸ್‌ ಟ್ರಸ್ಟ್ ನ ಸ್ಥಾಪನೆ ಮಾಡಿದಾಗ ಅಸ್ತಿತ್ವಕ್ಕೆ ಬಂದವು.

ಮ್ಯೂಚುವಲ್‌ ಫಂಡ್‌ ಉದ್ಯಮದ ಪ್ರಗತಿಯನ್ನು ಮೂರು ವಿಶಾಲ ಟ್ರೆಂಡ್‌ಗಳಲ್ಲಿ ಗುರುತಿಸಬಹುದು:

  1. ಇನ್ನಷ್ಟು ಹೂಡಿಕೆದಾರರು ಮ್ಯೂಚುವಲ್‌ಫಂಡ್‌ಗಳನ್ನು ಬಳಸುತ್ತಿರುವುದರಿಂದ ನಿರ್ವಹಣೆಯ ಅಡಿಯಲ್ಲಿ ಸ್ವತ್ತುಗಳಲ್ಲಿನ ಆಕರ್ಷಕ ಪ್ರಗತಿ
  2. ಕಠಿಣ ನಿಯಮಾವಳಿಯಿಂದ ಹೂಡಿಕೆದಾರರ ರಕ್ಷಣೆ ಮತ್ತು ಫಂಡ್‌ನಿರ್ವಹಣೆ ಉದ್ಯಮದ ಸರಿಯಾದ ಮೇಲ್ವಿಚಾರಣೆ ಸಾಧ್ಯವಾಗಿದೆ.
  3. ಇನ್ನಷ್ಟು ನವೀನ ಉತ್ಪನ್ನಗಳ ಪರಿಚಯದಿಂದಾಗಿ ವಿಭಿನ್ನ ಗ್ರಾಹಕರ ಅಗತ್ಯಗಳಿಗೆ ಸೂಕ್ತವಾಗಿದೆ; ದೀರ್ಘಕಾಲದ ನಿವೃತ್ತಿ ಯೋಜನೆಯಿಂದ ಅಲ್ಪಕಾಲದ ನಗದು ನಿರ್ವಹಣೆಯವರೆಗೆ.

ಭಾರತದಲ್ಲಿ ಯುನಿಟ್ ಟ್ರಸ್ಟ್ ಆಫ್‌ಇಂಡಿಯಾ (ಯುಟಿಐ) ಅನ್ನು 1963 ರಲ್ಲಿ ಸ್ಥಾಪನೆ ಮಾಡಿದಾಗಿನಿಂದಲೂ ಮ್ಯೂಚುವಲ್‌ಫಂಡ್‌ಗಳು ಅಸ್ತಿತ್ವದಲ್ಲಿವೆ. ಯುಟಿಐ ಅನ್ನು ಭಾರತ ಸರ್ಕಾರ ಮತ್ತು ಭಾರತೀಯ ರಿಸರ್ವ ಬ್ಯಾಂಕ್‌ಸ್ಥಾಪಿಸಿದವು. ಆಗಸ್ಟ್‌ 1964 ರಲ್ಲಿ ಪರಿಚಯಿಸಿದ ಯೂನಿಟ್ ಸ್ಕೀಮ್ 64 ಎಂಬುದು ಮೊದಲ ಮ್ಯೂಚುವಲ್‌ಫಂಡ್‌ಆಗಿತ್ತು.

1987 ರಲ್ಲಿ ಇತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಸಂಸ್ಥೆಗಳಿಗೆ ಮ್ಯೂಚುವಲ್ ಫಂಡ್‌ಗಳನ್ನು ಬಿಡುಗಡೆ ಮಾಡಲು ಅನುಮತಿಸಲಾಗಿದೆ. 1993 ರಲ್ಲಿ, ಉದಾರೀಕರಣದ ಅಲೆಯಲ್ಲಿ ಖಾಸಗಿ ವಲಯಗಳು ಮತ್ತು ವಿದೇಶಿ ಪ್ರಾಯೋಜಕರಿಗೂ ಮ್ಯೂಚುವಲ್‌ಫಂಡ್‌ಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಲಾಯಿತು.

ಇದರಿಂದಾಗಿ ಮ್ಯೂಚುವಲ್‌ಫಂಡ್ ಉದ್ಯಮವು ತ್ವರಿತವಾಗಿ ಗಾತ್ರ, ಪರಿಣಿತಿ ಮತ್ತು ವ್ಯಾಪ್ತಿಯನ್ನು ಪಡೆಯಲು ನೆರವಾಯಿತು. 2022 ಮಾರ್ಚ್‌ 31 ರ ಪ್ರಕಾರ, ಭಾರತದಲ್ಲಿ ಮ್ಯೂಚುವಲ್‌ಫಂಡ್‌ನಿರ್ವಹಿಸುತ್ತಿರುವ ಅಸೆಟ್‌ಗಳ ಮೌಲ್ಯ 37.7 ಲಕ್ಷ ಕೋಟಿ ರೂ.ಗೂ ಹೆಚ್ಚಾಗಿದೆ.

437
ನಾನು ಹೂಡಿಕೆ ಮಾಡಲು ಸಿದ್ಧ