ಮ್ಯೂಚುವಲ್ ಫಂಡ್ಸ್ಕೀಮ್ಗಳಲ್ಲಿ ಹೂಡಿಕೆ ಆರಂಭಿಸುವುದು ಹೇಗೆ?

Video

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಈಗ ತುಂಬಾ ಸುಲಭ ಮತ್ತು ಸರಳವಾಗಿದೆ. ಯಾವುದೇ ಹೆಚ್ಚುವರಿ ದಾಖಲೆ ಇಲ್ಲದೇ ಯಾರು ಬೇಕಾದರೂ ಎಷ್ಟು ಫಂಡ್ಗಳಲ್ಲಾದರೂ ಹೂಡಿಕೆ ಮಾಡಬಹುದು. ಮೊದಲ ಬಾರಿಗೆ ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ಕೆವೈಸಿ ಅನ್ನು ಪೂರ್ಣಗೊಳಿಸಬೇಕು. ಇದು ಒಂದು ಬಾರಿಯ ಪ್ರಕ್ರಿಯೆಯಾಗಿದೆ. ಕೆವೈಸಿ ಪರಿಶೀಲನೆಗೆ ನಿಮ್ಮ ಸಹಾಯಕ್ಕಾಗಿ ನೀವು ಡಿಸ್ಟ್ರಿಬ್ಯೂಟರ್ ಸಂಪರ್ಕಿಸಬಹುದು ಅಥವಾ ಹೂಡಿಕೆ ಸಲಹೆಗಾರರನ್ನು ಸಂಪರ್ಕಿಸಬಹುದು ಅಥವಾ ನೀವು ಆನ್ಲೈನ್ನಲ್ಲಿ ಇ-ಕೆವೈಸಿ ಮಾಡಬಹುದು. ಮ್ಯೂಚುವಲ್ ಫಂಡ್ಗಳ ಜಗತ್ತಿಗೆ ಕೆವೈಸಿ ಎಂಬುದು ಕೀಲಿ ಇದ್ದಂತೆ. ನಿಮ್ಮ ಕೆವೈಸಿ ಅನ್ನು ನೀವು ಪೂರ್ಣಗೊಳಿಸಿದ ನಂತರ, ಪ್ರತಿ ಹೂಡಿಕೆಗೂ ಹೆಚ್ಚುವರಿ ಪರಶೀಲನೆಯ ಅಗತ್ಯವಿಲ್ಲದೇ ಯಾವುದೇ ಫಂಡ್ನಲ್ಲಾದರೂ ನೀವು ಹೂಡಿಕೆ ಮಾಡಬಹುದು.

ಕೆವೈಸಿ ಪರಿಶೀಲನೆಯ ನಂತರ ಹೂಡಿಕೆ ಮಾಡಲು ನೀವು ಸಿದ್ಧವಾದ ನಂತರ, ಮ್ಯೂಚುವಲ್ ಫಂಡ್ ವಿತರಕರು, ನೋಂದಾಯಿತ ಹೂಡಿಕೆ ಸಲಹೆಗಾರರು, ಸ್ಟಾಕ್ ಮಾರ್ಕೆಟ್ ಬ್ರೋಕರ್, ಬ್ಯಾಂಕ್ ಅಥವಾ ಯಾವುದೇ ಇತರ ಹಣಕಾಸು ಮಧ್ಯವರ್ತಿಗಳ ಸಹಾಯದಿಂದ ನೀವು ಹೂಡಿಕೆ ಮಾಡಬಹುದು. ಆದರೆ, ನೀವೇ ಹೂಡಿಕೆ ಮಾಡಲು ಬಯಸಿದರೆ, ಫಂಡ್ ಹೌಸ್ನ ಸಮೀಪದ ಕಚೇರಿಗೆ ಭೇಟಿ ನೀಡಬಹುದು ಅಥವಾ ಆನ್ಲೈನ್ ಹೂಡಿಕೆ ಮಾಡಲು ಅವರ ವೆಬ್ಸೈಟ್ಗೆ ಭೇಟಿ ನೀಡಬಹುದ ಅಥವಾ ಯಾವುದೇ ಆನ್ಲೈನ್ ಪ್ಲಾಟ್ಫಾರಂಗೆ ಭೇಟಿ ನೀಡಬಹುದು.  

ನೇರವಾಗಿ ಹೂಡಿಕೆ ಮಾಡಬೇಕೆ ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ಹೂಡಿಕೆ ಮಾಡಬೇಕೆ ಎಂಬುದು ನಿಮ್ಮ ವೈಯಕ್ತಿಕ ನಿರ್ಧಾರವಾಗಿದೆ. ನಿಮ್ಮ ಹೂಡಿಕೆಯನ್ನು ನೀವೇ ನಿರ್ವಹಿಸಬೇಕು ಎಂಬ ಮನಸಿದ್ದಲ್ಲಿ, ಫಂಡ್ನ ವೆಬ್ಸೈಟ್ ಮೂಲಕ ಅಥವಾ ಯಾವುದೇ ಆನ್ಲೈನ್ ಪ್ಲಾಟ್ಫಾರಂ ಮೂಲಕ ನೀವು ಹೂಡಿಕೆ ಮಾಡಬಹುದು. ಆದರೆ, ಹೂಡಿಕೆಯಲ್ಲಿ ನಿಮಗೆ ಸಲಹೆ ಅಥವಾ ಸಹಾಯ ಬೇಕಾದರೆ, ಡಿಸ್ಟ್ರಿಬ್ಯೂಟರ್, ಹೂಡಿಕೆ ಸಲಹೆಗಾರರು, ಬ್ಯಾಂಕ್ ಇತ್ಯಾದಿ ಮಧ್ಯವರ್ತಿಗಳ ಮೂಲಕ ನೀವು ಹೂಡಿಕೆ ಮಾಡಬಹುದು.

436
ನಾನು ಹೂಡಿಕೆ ಮಾಡಲು ಸಿದ್ಧ