ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನು ನಾನು ಹೇಗೆ ಆರಂಭಿಸಬಹುದು?

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆಯನ್ನು ನಾನು ಹೇಗೆ ಆರಂಭಿಸಬಹುದು?
ಮ್ಯೂಚುವಲ್ ಫಂಡ್‌ ಕ್ಯಾಲಕ್ಯುಲೇಟರ್‌ಗಳು

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಕೆಲವು ಪ್ರಾಥಮಿಕ ಔಪಚಾರಿಕತೆಗಳನ್ನು ಪೂರೈಸಬೇಕಾಗುತ್ತದೆ. ಇಂತಹ ಔಪಚಾರಿಕತೆಗಳನ್ನು ನೇರವಾಗಿ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (ಎಎಂಸಿ)ಯಲ್ಲಿ ಅವರ ಕಚೇರಿಯಲ್ಲಿ ಅಥವಾ ದೃಢೀಕೃತ ಸಮ್ಮತಿ ಕೇಂದ್ರ (ಪಿಒಎ) ಅಥವಾ ದೃಢೀಕೃತ ಮಧ್ಯವರ್ತಿಗಳಾದ ಸಲಹೆಗಾರರು, ಬ್ಯಾಂಕರ್, ವಿತರಕರು ಅಥವಾ ದಲ್ಲಾಳಿಗಳಲ್ಲಿ ಪೂರೈಸಬಹುದು.

ಮ್ಯೂಚುವಲ್‌ ಫಂಡ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವುದಕ್ಕೂ ಮುನ್ನ, ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಪ್ರಕ್ರಿಯೆಯನ್ನು ಪೂರೈಸಬೇಕು. ಭರ್ತಿ ಮಾಡಿದ ಕೆವೈಸಿ ನಮೂನೆಯನ್ನು ಸ್ಕೀಮ್‌ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬೇಕು (ಇದನ್ನು ಪ್ರಮುಖ ಮಾಹಿತಿ ಮೆಮೊರಾಂಡಮ್‌ ಎಂದೂ ಕರೆಯಲಾಗಿದೆ). ಅರ್ಜಿ ನಮೂನೆಯನ್ನು ಗಮನವಿಟ್ಟು ಭರ್ತಿ ಮಾಡಬೇಕು. ಯಾಕೆಂದರೆ, ಎಲ್ಲ ಖಾತೆದಾರರ ಹೆಸರುಗಳು, ಪ್ಯಾನ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರಗಳು ಇತ್ಯಾದಿ ಪ್ರಮುಖ ವಿವರಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಎಲ್ಲ ಖಾತೆದಾರರೂ ಸಹಿ ಮಾಡಬೇಕು. ಈ ಪೈಕಿ ಬಹುತೇಕವನ್ನು ಆನ್‌ಲೈನ್‌ ಪ್ಲಾಟ್‌ಫಾರಂಗಳ ಮೂಲಕವೂ ಮಾಡಬಹುದು.

ಹೊಸ ಹೂಡಿಕೆದಾರರು ತಮ್ಮ ಸಲಹೆಗಾರರ ಸಹಾಯವನ್ನು ಪಡೆದು ಇಡೀ ಪ್ರಕ್ರಿಯೆಯನ್ನು ಸರಾಗ ಮತ್ತು ಸುಲಭವಾಗಿ ಮುಗಿಸಬಹುದು. ಹೀಗಾಗಿ, ಹೂಡಿಕೆ ಮಾಡುವುದಕ್ಕೂ ಮೊದಲು ಪ್ರಮುಖ ಸ್ಕೀಮ್‌ ಸಂಬಂಧಿತ ಮಾಹಿತಿಯನ್ನು ಓದಬೇಕು ಮತ್ತು ತಮ್ಮ ಸ್ಕೀಮ್ ಆಯ್ಕೆಯ ರಿಸ್ಕ್‌ಗಳನ್ನು ತಿಳಿಯಬೇಕು ಎಂದು ಸಲಹೆ ಮಾಡಲಾಗಿದೆ.

436
ನಾನು ಹೂಡಿಕೆ ಮಾಡಲು ಸಿದ್ಧ