ಎಸ್.ಐ.ಪಿ ಅಥವಾ ಒಟ್ಟು ಮೊತ್ತಕ್ಕೆ ಹೋಗಬೇಕೆ ಎಂದು ನಾನು ಹೇಗೆ ಆರಿಸಬೇಕು?

ಎಸ್.ಐ.ಪಿ ಅಥವಾ ಒಟ್ಟು ಮೊತ್ತಕ್ಕೆ ಹೋಗಬೇಕೆ ಎಂದು ನಾನು ಹೇಗೆ ಆರಿಸಬೇಕು?

ಮ್ಯೂಚುವಲ್‌ ಫಂಡ್‌ ಸೂಕ್ತವೇ??

ಎಸ್‌ಐಪಿಯಲ್ಲಿ ಹೂಡಿಕೆ ಮಾಡುವುದೇ ಅಥವಾ ಒಂದು ಬಾರಿ ಹೂಡಿಕೆ ಮಾಡುವುದೇ (ಲಂಪ್‌ಸಮ್‌)? ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಮ್ಯೂಚುವಲ್‌ ಫಂಡ್‌ಗಳ ಬಗ್ಗೆ ನಿಮ್ಮ ತಿಳಿವಳಿಕೆ, ನೀವು ಹೂಡಿಕೆ ಮಾಡಲು ಬಯಸುವ ಫಂಡ್‌ ಮತ್ತು ನಿಮ್ಮ ಗುರಿಯನ್ನು ಅವಲಂಬಿಸಿರುತ್ತದೆ. ಗುರಿಗೆ ಸೂಕ್ತ ಬಂಡವಾಳವನ್ನು ಸಂಗ್ರಹಿಸಲು ನೀವು ನಿಯತವಾಗಿ ಹೂಡಿಕೆ ಮಾಡಲು ಬಯಸಿದರೆ, ಎಸ್‌ಐಪಿ ಮೂಲಕ ಸೂಕ್ತ ಈಕ್ವಿಟಿ ಸ್ಕೀಮ್‌ನಲ್ಲಿ ಹೂಡಿಕೆ ಮಾಡಿ. ಇದೇ ರೀತಿ, ನಿಮ್ಮ ಮಾಸಿಕ ಆದಾಯದಿಂದ ಉಳಿತಾಯ ಮಾಡಿ ಅದು ದೀರ್ಘಕಾಲದಲ್ಲಿ ನಿರಂತರವಾಗಿ ಬೆಳವಣಿಗೆ ಕಾಣುವಲ್ಲಿ ಹೂಡಿಕೆ ಮಾಡಬೇಕು ಮತ್ತು ಇದು ನಿಮ್ಮ ಮಗುವಿನ ಉನ್ನತ ಶಿಕ್ಷಣಕ್ಕೆ ನೆರವಾಗಬೇಕು ಎಂದಾದರೆ ಅದಕ್ಕೆ ಎಸ್‌ಐಪಿ ಸೂಕ್ತ. ಅಗತ್ಯವಿದ್ದರೆ ಹಣಕಾಸು ತಜ್ಞರ ಸಹಾಯ ಪಡೆಯಿರಿ.

ನಿಮ್ಮ ಬಳಿ ಹೆಚ್ಚುವರಿ ನಗದು ಇದ್ದರೆ, ಅಂದರೆ ಬೋನಸ್‌, ಸ್ವತ್ತು ಮಾರಾಟದ ಹಣ ಅಥವಾ ನಿವೃತ್ತಿ ನಿಧಿ ಇದ್ದು, ಅದನ್ನು ಹೇಗೆ ಬಳಸಬೇಕು ಎಂದು ನಿರ್ಧಾರ ಮಾಡಿಲ್ಲದೇ ಇದ್ದರೆ, ಡೆಟ್ ಅಥವಾ ಲಿಕ್ವಿಡ್ ಫಂಡ್‌ನಲ್ಲಿ ಲಂಪ್‌ಸಮ್‌ ಹೂಡಿಕೆ ಮಾಡಿ. ಈಕ್ವಿಟಿ ಆಧರಿತ ಸ್ಕೀಮ್‌ಗಳಲ್ಲಿ ಹೂಡಿಕೆ ಮಾಡಲು ಎಸ್‌ಐಪಿ ಸೂಕ್ತ ಮತ್ತು ಡೆಟ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಲಂಪ್‌ಸಮ್‌ ಸೂಕ್ತ. ಮ್ಯೂಚುವಲ್‌ ಫಂಡ್‌ ಹೂಡಿಕೆಗೆ ನೀವು ಹೊಸಬರಾಗಿದ್ದರೆ, ನಿಮಗೆ ಎಸ್‌ಐಪಿ ಸೂಕ್ತ. ದೀರ್ಘಕಾಲದಲ್ಲಿ ಎಸ್‌ಐಪಿಯಲ್ಲಿ ಹೂಡಿಕೆ ಮಾಡಿದರೆ ಲಾಭಕರವಾಗಿರುತ್ತದೆ. ಮಾರ್ಕೆಟ್‌ ಮೇಲ್ಮುಖ ಗತಿಯಲ್ಲಿದ್ದರೆ ಮತ್ತು ನೀವು ದೀರ್ಘಕಾಲೀನ ಹೂಡಿಕೆ ಮಾಡುತ್ತಿದ್ದರೆ ನೀವು ಲಂಪ್‌ಸಮ್‌ನಲ್ಲಿ ಹೂಡಿಕೆ ಮಾಡಬಹುದು. ತುಂಬಾ ಅಸ್ಥಿರ (ಏರುಪೇರು) ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಎಸ್‌ಐಪಿ ಉತ್ತಮ.

438
ನಾನು ಹೂಡಿಕೆ ಮಾಡಲು ಸಿದ್ಧ